Quoteಸಿಲ್ವಾಸ್ಸಾದಲ್ಲಿ 2,580 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಕೇಂದ್ರಾಡಳಿತ ಪ್ರದೇಶಕ್ಕಾಗಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ
Quoteಸಿಲ್ವಾಸ್ಸಾದಲ್ಲಿ ನಮೋ ಆಸ್ಪತ್ರೆ (ಹಂತ I) ಉದ್ಘಾಟಿಸಲಿದ್ದಾರೆ
Quoteಸೂರತ್ ನಲ್ಲಿ 2.3 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಸೂರತ್ ಆಹಾರ ಭದ್ರತಾ ಸ್ಯಾಚುರೇಶನ್ ಅಭಿಯಾನವನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪ್ರಯೋಜನಗಳನ್ನು ವಿತರಿಸಲಿದ್ದಾರೆ
Quoteಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು, ನವಸಾರಿಯಲ್ಲಿ ಲಕ್ಷಾಧಿಪತಿ ದೀದಿ ದೀದಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ
Quoteನವಸಾರಿಯಲ್ಲಿ ಜಿ-ಸಫಾಲ್ (ಜೀವನೋಪಾಯ ವೃದ್ಧಿಗಾಗಿ ಅಂತ್ಯೋದಯ ಕುಟುಂಬಗಳಿಗೆ ಗುಜರಾತ್ ಯೋಜನೆ) ಮತ್ತು ಜಿ-ಮೈತ್ರಿ (ಗ್ರಾಮೀಣ ಆದಾಯವನ್ನು ಪರಿವರ್ತಿಸಲು ಗುಜರಾತ್ ಮಾರ್ಗದರ್ಶನ ಮತ್ತು ವ್ಯಕ್ತಿಗಳ ವೇಗವರ್ಧನೆ) ವನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾರ್ಚ್ 7 - 8 ರಂದು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶ ಮತ್ತು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಅವರು ಮಾರ್ಚ್ 7 ರಂದು ಸಿಲ್ವಾಸ್ಸಾಗೆ ಪ್ರಯಾಣಿಸಲಿದ್ದಾರೆ ಮತ್ತು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರು ನಮೋ ಆಸ್ಪತ್ರೆಯನ್ನು (I ಹಂತ) ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2:45 ರ ಸುಮಾರಿಗೆ, ಅವರು ಸಿಲ್ವಾಸ್ಸಾದಲ್ಲಿ 2580 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಕೇಂದ್ರಾಡಳಿತ ಪ್ರದೇಶಕ್ಕಾಗಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ, ಅವರು ಸೂರತ್‌ಗೆ ಪ್ರಯಾಣಿಸಲಿದ್ದಾರೆ ಮತ್ತು ಸಂಜೆ 5 ಗಂಟೆಗೆ ಅವರು ಸೂರತ್ ಆಹಾರ ಭದ್ರತಾ ಸ್ಯಾಚುರೇಶನ್ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ. ಮಾರ್ಚ್ 8 ರಂದು, ಪ್ರಧಾನ ಮಂತ್ರಿ ನವಸಾರಿಗೆ ಪ್ರಯಾಣಿಸಲಿದ್ದಾರೆ ಮತ್ತು ಸುಮಾರು 11:30ಕ್ಕೆ, ಅವರು ಲಕ್ಷಪತಿ ದೀದಿಗಳೊಂದಿಗೆ ಸಂವಾದ ನಡೆಸಲಿದ್ದಾರೆ, ನಂತರ ವಿವಿಧ ಯೋಜನೆಗಳ ಉದ್ಘಾಟನೆಯನ್ನು ಒಳಗೊಂಡ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ.

ದಾದ್ರಾ ಮತ್ತು ನಗರ್ ಹವೇಲಿ ಹಾಗೂ ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಧಾನಮಂತ್ರಿ

ದೇಶದ ಮೂಲೆ ಮೂಲೆಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವುದು ಪ್ರಧಾನ ಮಂತ್ರಿಯವರ ಪ್ರಾಥಮಿಕ ಗಮನವಾಗಿದೆ. ಇದಕ್ಕೆ ಅನುಗುಣವಾಗಿ, ಅವರು ಸಿಲ್ವಾಸಾದಲ್ಲಿ NAMO ಆಸ್ಪತ್ರೆಯನ್ನು (ಹಂತ I) ಉದ್ಘಾಟಿಸಲಿದ್ದಾರೆ. 460 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಈ 450 ಹಾಸಿಗೆಗಳ ಆಸ್ಪತ್ರೆಯು ಕೇಂದ್ರಾಡಳಿತ ಪ್ರದೇಶದಲ್ಲಿ ಆರೋಗ್ಯ ಸೇವೆಗಳನ್ನು ಗಣನೀಯವಾಗಿ ಬಲಪಡಿಸುತ್ತದೆ. ಇದು ಈ ಪ್ರದೇಶದ ಜನರಿಗೆ, ವಿಶೇಷವಾಗಿ ಬುಡಕಟ್ಟು ಸಮುದಾಯಗಳಿಗೆ ಅತ್ಯಾಧುನಿಕ ವೈದ್ಯಕೀಯ ಆರೈಕೆಯನ್ನು ಒದಗಿಸುತ್ತದೆ.

ಪ್ರಧಾನಮಂತ್ರಿಯವರು ಸಿಲ್ವಾಸಾದಲ್ಲಿ 2580 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ. ಇವುಗಳಲ್ಲಿ ವಿವಿಧ ಗ್ರಾಮ ರಸ್ತೆಗಳು ಮತ್ತು ಇತರ ರಸ್ತೆ ಮೂಲಸೌಕರ್ಯಗಳು, ಶಾಲೆಗಳು, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ಪಂಚಾಯತ್ ಮತ್ತು ಆಡಳಿತ ಕಟ್ಟಡಗಳು, ಅಂಗನವಾಡಿ ಕೇಂದ್ರಗಳು, ನೀರು ಸರಬರಾಜು ಮತ್ತು ಒಳಚರಂಡಿ ಮೂಲಸೌಕರ್ಯಗಳು ಸೇರಿವೆ. ಈ ಯೋಜನೆಗಳು ಸಂಪರ್ಕವನ್ನು ಸುಧಾರಿಸುವುದು, ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುವುದು, ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಈ ಪ್ರದೇಶದಲ್ಲಿ ಸಾರ್ವಜನಿಕ ಕಲ್ಯಾಣ ಉಪಕ್ರಮಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ.

ಪ್ರಧಾನಮಂತ್ರಿಯವರು ರೋಜ್‌ಗಾರ್ ಮೇಳದ ಅಡಿಯಲ್ಲಿ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಅವರು ಪಿಎಂ ಆವಾಸ್ ಯೋಜನೆ - ನಗರ, ಗಿರ್ ಆದರ್ಶ ಆಜೀವಿಕಾ ಯೋಜನೆ ಮತ್ತು ಸಿಲ್ವಾನ್ ದೀದಿ ಯೋಜನೆಯ ಫಲಾನುಭವಿಗಳಿಗೆ ಪ್ರಯೋಜನಗಳನ್ನು ಸಹ ವಿತರಿಸಲಿದ್ದಾರೆ.

ಗಿರ್ ಆದರ್ಶ ಆಜೀವಿಕಾ ಯೋಜನೆಯು ಸಣ್ಣ ಡೈರಿ ಫಾರ್ಮ್‌ಗಳನ್ನು ಸ್ಥಾಪಿಸುವ ಮೂಲಕ ಮತ್ತು ಅವರ ಜೀವನದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ತರುವ ಮೂಲಕ ಈ ಪ್ರದೇಶದ ಪರಿಶಿಷ್ಟ ಜಾತಿಗಳು (SCಗಳು), ಪರಿಶಿಷ್ಟ ಪಂಗಡಗಳು (STಗಳು), ಇತರ ಹಿಂದುಳಿದ ವರ್ಗಗಳು (OBCಗಳು), ಅಲ್ಪಸಂಖ್ಯಾತರು ಮತ್ತು ದಿವ್ಯಾಂಗರಿಗೆ ಸೇರಿದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಸಿಲ್ವಾನ್ ದೀದಿ ಯೋಜನೆಯು ಪಿಎಂ ಸ್ವಾನಿಧಿ ಯೋಜನೆಯಿಂದ ಸಹ-ಹಣಕಾಸು ಒದಗಿಸುವ ಮೂಲಕ ಸೌಂದರ್ಯದ ವಿನ್ಯಾಸದ ಕಾರ್ಟ್‌ಗಳನ್ನು ಒದಗಿಸುವ ಮೂಲಕ ಮಹಿಳಾ ಬೀದಿ ವ್ಯಾಪಾರಿಗಳನ್ನು ಉನ್ನತೀಕರಿಸುವ ಉಪಕ್ರಮವಾಗಿದೆ.

ಗುಜರಾತ್ ‌ನಲ್ಲಿ ಪ್ರಧಾನಮಂತ್ರಿ

ಮಾರ್ಚ್ 7 ರಂದು, ಪ್ರಧಾನಮಂತ್ರಿಯವರು ಸೂರತ್ನ ಲಿಂಬಾಯತ್ ನಲ್ಲಿ ಸೂರತ್ ಆಹಾರ ಭದ್ರತಾ ಸಂತೃಪ್ತತಾ ಅಭಿಯಾನ ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದಾರೆ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 2.3 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಪ್ರಯೋಜನಗಳನ್ನು ವಿತರಿಸಲಿದ್ದಾರೆ.

ಮಹಿಳಾ ಸಬಲೀಕರಣವು ಸರ್ಕಾರ ಮಾಡಿದ ಕೆಲಸದ ಮೂಲಾಧಾರವಾಗಿದೆ. ಪ್ರಧಾನಮಂತ್ರಿಯವರ ದೂರದೃಷ್ಟಿಯಿಂದ ಮಾರ್ಗದರ್ಶಿಸಲ್ಪಟ್ಟ ಸರ್ಕಾರವು ಅವರ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳಲು ಬದ್ಧವಾಗಿದೆ. ಇದಕ್ಕೆ ಅನುಗುಣವಾಗಿ, ಮಾರ್ಚ್ 8 ರಂದು, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು, ಪ್ರಧಾನ ಮಂತ್ರಿಯವರು ನವಸಾರಿ ಜಿಲ್ಲೆಯ ವಾನ್ಸಿ ಬೋರ್ಸಿ ಗ್ರಾಮದಲ್ಲಿ ಲಕ್ಷಪತಿ ದೀದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಮತ್ತು ಲಕ್ಷಪತಿ ದೀದಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಅವರು 5 ಲಕ್ಷಪತಿ ದೀದಿಗಳಿಗೆ ಲಕ್ಷಪತಿ ದೀದಿ ಪ್ರಮಾಣಪತ್ರಗಳನ್ನು ಸಹ ನೀಡಿ ಗೌರವಿಸಲಿದ್ದಾರೆ.

ಪ್ರಧಾನಮಂತ್ರಿಯವರು ಗುಜರಾತ್ ಸರ್ಕಾರದ G-SAFAL (ಗುಜರಾತ್ ಯೋಜನೆ ಫಾರ್ ಅಂತ್ಯೋದಯ ಫ್ಯಾಮಿಲೀಸ್ ಫಾರ್ ಆಗ್ಮೆಂಟಿಂಗ್ ಲೈವ್ಲಿಹುಡ್ಸ್) ಮತ್ತು G-MAITRI (ಗುಜರಾತ್ ಮೆಂಟರ್‌ಶಿಪ್ ಅಂಡ್ ಆಕ್ಸಿಲರೇಶನ್ ಆಫ್ ಇಂಡಿವಿಜುವಲ್ಸ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ರೂರಲ್ ಇನ್ ಕಮ್) ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದಾರೆ.

G-MAITRI ಯೋಜನೆಯು ಗ್ರಾಮೀಣ ಜೀವನೋಪಾಯಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಕೆಲಸ ಮಾಡುತ್ತಿರುವ ಸ್ಟಾರ್ಟ್‌ಅಪ್ ಗಳಿಗೆ ಆರ್ಥಿಕ ಸಹಾಯ ಮತ್ತು ಮಾರ್ಗದರ್ಶನ ಬೆಂಬಲವನ್ನು ಒದಗಿಸುತ್ತದೆ.

G-SAFAL ಎರಡು ಆಕಾಂಕ್ಷಿ ಜಿಲ್ಲೆಗಳು ಮತ್ತು ಗುಜರಾತ್‌ನ ಹದಿಮೂರು ಆಕಾಂಕ್ಷಿ ಬ್ಲಾಕ್‌ಗಳಲ್ಲಿನ ಅಂತ್ಯೋದಯ ಕುಟುಂಬಗಳ SHG ಮಹಿಳೆಯರಿಗೆ ಆರ್ಥಿಕ ಸಹಾಯ ಮತ್ತು ಉದ್ಯಮಶೀಲತಾ ತರಬೇತಿಯನ್ನು ಒದಗಿಸುತ್ತದೆ.

 

  • கார்த்திக் March 22, 2025

    Jai Shree Ram🌺Jai Shree Ram🌺Jai Shree Ram🌺Jai Shree Ram🌺Jai Shree Ram🌺Jai Shree Ram🌺Jai Shree Ram🌺Jai Shree Ram🌺Jai Shree Ram🌺Jai Shree Ram🌺Jai Shree Ram🌺Jai Shree Ram🌺
  • Prasanth reddi March 21, 2025

    జై బీజేపీ జై మోడీజీ 🪷🪷🙏
  • Vivek Kumar Gupta March 21, 2025

    नमो ..🙏🙏🙏🙏🙏
  • Hiraballabh Nailwal March 20, 2025

    जय यमुना मैया
  • Hiraballabh Nailwal March 20, 2025

    जय गंगा मैया
  • Hiraballabh Nailwal March 20, 2025

    जय बद्री विशाल
  • Hiraballabh Nailwal March 20, 2025

    जय बालाजी महाराज
  • Hiraballabh Nailwal March 20, 2025

    जय श्री केदार
  • Hiraballabh Nailwal March 20, 2025

    ✌️
  • Hiraballabh Nailwal March 20, 2025

    जय श्री खाटू श्याम
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Beyond Freebies: Modi’s economic reforms is empowering the middle class and MSMEs

Media Coverage

Beyond Freebies: Modi’s economic reforms is empowering the middle class and MSMEs
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಮಾರ್ಚ್ 2025
March 24, 2025

Viksit Bharat: PM Modi’s Vision in Action