Quoteಉತ್ತರ ಪ್ರದೇಶದಲ್ಲಿ ನಡೆಯುವ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಪ್ರಧಾನಿ ಭಾಗಿ
Quote20,000 ಕೋಟಿಗೂ ಹೆಚ್ಚು ಮೊತ್ತದ ಪಿಎಂ ಕಿಸಾನ್‌ ಯೋಜನೆಯ 17ನೇ ಕಂತು ಬಿಡುಗಡೆ ಮಾಡಲಿರುವ ಪ್ರಧಾನಿ
Quoteಸ್ವಸಹಾಯ ಗುಂಪುಗಳ 30,000 ಕ್ಕೂ ಹೆಚ್ಚು ಮಹಿಳೆಯರಿಗೆ ಕೃಷಿ ಸಖಿಗಳ ಪ್ರಮಾಣಪತ್ರ ವಿತರಣೆ
Quoteಬಿಹಾರದಲ್ಲಿ ನಳಂದಾ ವಿಶ್ವವಿದ್ಯಾನಿಲಯ ಕ್ಯಾಂಪಸ್ ಉದ್ಘಾಟನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 18 ಮತ್ತು 19 ರಂದು ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಭೇಟಿ ನೀಡಲಿದ್ದಾರೆ.

ಜೂನ್ 18 ರಂದು ಸಂಜೆ 5 ಗಂಟೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 7 ಗಂಟೆಗೆ ಪ್ರಧಾನಿಯವರು ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿ ವೀಕ್ಷಿಸಲಿದ್ದಾರೆ. ರಾತ್ರಿ 8 ಗಂಟೆಗೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ  ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಜೂನ್ 19 ರಂದು ಬೆಳಗ್ಗೆ 9.45ಕ್ಕೆ ಪ್ರಧಾನಿಯವರು ನಳಂದಾಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10.30ರ ಸುಮಾರಿಗೆ ಬಿಹಾರದ ರಾಜ್‌ಗಿರ್‌ನಲ್ಲಿರುವ ನಳಂದ ವಿಶ್ವವಿದ್ಯಾಲಯದ ಕ್ಯಾಂಪಸ್‌ ಅನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.  ಈ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಉತ್ತರ ಪ್ರದೇಶಕ್ಕೆ ಭೇಟಿ

3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಕಲ್ಯಾಣಕ್ಕಾಗಿ ಪಿಎಂ ಕಿಸಾನ್ ನಿಧಿಯ 17ನೇ ಕಂತು ಬಿಡುಗಡೆ ಮಾಡುವ ಫೈಲ್‌ಗೆ ಮೊದಲು ಸಹಿ ಹಾಕಿದರು. ಅನ್ನದಾತರ ಏಳಿಗೆಗೆ ಸರ್ಕಾರದ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತಿದೆ. 

ಈ ಬದ್ಧತೆಯ ಮುಂದುವರಿಕೆಯಾಗಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ ಸುಮಾರು 9.26 ಕೋಟಿ ಫಲಾನುಭವಿ ರೈತರಿಗೆ 20,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ 17 ನೇ ಕಂತನ್ನು ಪ್ರಧಾನ ಮಂತ್ರಿ ನೇರ ಲಾಭ ವರ್ಗಾವಣೆ ಮೂಲಕ ಬಿಡುಗಡೆ ಮಾಡುತ್ತಾರೆ. ಇಲ್ಲಿಯವರೆಗೆ, ಪಿಎಂ-ಕಿಸಾನ್ ಅಡಿಯಲ್ಲಿ 11 ಕೋಟಿಗೂ ಹೆಚ್ಚು ಅರ್ಹ ರೈತ ಕುಟುಂಬಗಳಿಗೆ 3.04 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಪ್ರಯೋಜನಗಳನ್ನು ನೀಡಲಾಗಿದೆ. 

ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು 30,000 ಕ್ಕೂ ಹೆಚ್ಚು ಮಹಿಳೆಯರಿಗೆ ಸ್ವಸಹಾಯ ಗುಂಪುಗಳ (SHGs) ಕೃಷಿ ಸಖಿಗಳ ಪ್ರಮಾಣಪತ್ರಗಳನ್ನು ಸಹ ವಿತರಿಸಲಿದ್ದಾರೆ.

ಕೃಷಿ ಸಖಿ ಕನ್ವರ್ಜೆನ್ಸ್ ಪ್ರೋಗ್ರಾಂ (KSCP) ಗ್ರಾಮೀಣ ಮಹಿಳೆಯರನ್ನು ಕೃಷಿ ಸಖಿಯಾಗಿ ಸಬಲೀಕರಣಗೊಳಿಸುವ ಮೂಲಕ ಗ್ರಾಮೀಣ ಭಾರತವನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ, ಕೃಷಿ ಸಖಿಗಳಿಗೆ ಕಾರ್ಯಕರ್ತರಾಗಿ ತರಬೇತಿ ಮತ್ತು ಪ್ರಮಾಣ ಪತ್ರ ವಿತರಿಸಲಾಗುವುದು. ಈ ಕೋರ್ಸ್ ಕೂಡ "ಲಖ್ಪತಿ ದೀದಿ" ಕಾರ್ಯಕ್ರಮದ ಒಂದು ಭಾಗವಾಗಿದೆ ಮತ್ತು ಅದಕ್ಕೆ ಪೂರಕವಾಗುತ್ತಿದೆ.

ಬಿಹಾರ ಪ್ರವಾಸ ವಿವರ

ಬಿಹಾರಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ ರಾಜ್‌ಗಿರ್‌ನಲ್ಲಿ ನಳಂದಾ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‌ ಅನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.

ವಿಶ್ವವಿದ್ಯಾನಿಲಯವನ್ನು ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆ (EAS) ದೇಶಗಳ ನಡುವಿನ ಜಂಟಿ ಸಹಯೋಗದಲ್ಲಿ ರೂಪಿಸಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ 17 ದೇಶಗಳ ಮುಖ್ಯಸ್ಥರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ಕ್ಯಾಂಪಸ್ ಎರಡು ಅಕಾಡೆಮಿಕ್ ಬ್ಲಾಕ್‌ಗಳನ್ನು ಹೊಂದಿದ್ದು, 40 ತರಗತಿ ಕೊಠಡಿಗಳು, ಸುಮಾರು 1900 ಒಟ್ಟು ಆಸನ ಸಾಮರ್ಥ್ಯವನ್ನು ಹೊಂದಿದೆ. ತಲಾ 300 ಆಸನಗಳ ಸಾಮರ್ಥ್ಯವನ್ನು ಹೊಂದಿರುವ ಎರಡು ಸಭಾಂಗಣಗಳನ್ನು ಹೊಂದಿದೆ.

ಇದು ಸುಮಾರು 550 ವಿದ್ಯಾರ್ಥಿಗಳಿಗೆ ವಾಸ್ತವ್ಯ ಕಲ್ಪಿಸುವ ಹಾಸ್ಟೆಲ್ ಹೊಂದಿದೆ. ಇಲ್ಲಿ ಇಂಟರ್‌ ನ್ಯಾಷನಲ್ ಸೆಂಟರ್, ಆಂಫಿಥಿಯೇಟರ್ ವ್ಯವಸ್ಥೆ ಇದೆ. ಫ್ಯಾಕಲ್ಟಿ ಕ್ಲಬ್ ಮತ್ತು ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಸೇರಿದಂತೆ ಹಲವಾರು ಇತರ ಸೌಲಭ್ಯಗಳನ್ನು ಹೊಂದಿದೆ.

ಕ್ಯಾಂಪಸ್ ಒಂದು 'ನೆಟ್ ಝೀರೋ' ಗ್ರೀನ್ ಕ್ಯಾಂಪಸ್ ಆಗಿದೆ. ಇದು ಸೌರ ಸ್ಥಾವರ, ದೇಶೀಯ ಮತ್ತು ಕುಡಿಯುವ ನೀರಿನ ಸಂಸ್ಕರಣಾ ಘಟಕ, ತ್ಯಾಜ್ಯ ನೀರನ್ನು ಮರುಬಳಕೆ ಮಾಡಲು ನೀರಿನ ಮರುಬಳಕೆ ಘಟಕ, 100 ಎಕರೆ ಜಲಮೂಲಗಳು ಮತ್ತು ಇತರ ಅನೇಕ ಪರಿಸರ ಸ್ನೇಹಿ ಸೌಲಭ್ಯಗಳೊಂದಿಗೆ ಸ್ವಯಂ-ಸಮರ್ಥವಾಗಿದೆ.

ವಿಶ್ವವಿದ್ಯಾನಿಲಯವು ಇತಿಹಾಸದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದೆ. ಸುಮಾರು 1600 ವರ್ಷಗಳ ಹಿಂದೆ ಸ್ಥಾಪಿಸಲಾದ ಮೂಲ ನಳಂದಾ ವಿಶ್ವವಿದ್ಯಾನಿಲಯವು ವಿಶ್ವದ ಮೊದಲ ವಸತಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ.

2016 ರಲ್ಲಿ, ನಳಂದಾ ಪ್ರಮುಖ ಸ್ಥಳಗಳನ್ನು ವಿಶ್ವಸಂಸ್ಥೆಯ ಪಾರಂಪರಿಕ ತಾಣ (ಹೆರಿಟೇಜ್ ಸೈಟ್) ಎಂದು ಘೋಷಿಸಲಾಯಿತು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
How PMJDY has changed banking in India

Media Coverage

How PMJDY has changed banking in India
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 25 ಮಾರ್ಚ್ 2025
March 25, 2025

Citizens Appreciate PM Modi's Vision : Economy, Tech, and Tradition Thrive