ಪ್ರಧಾನಮಂತ್ರಿಯವರು ರೂಪಾಯಿ 29,400 ಕೋಟಿಗೂ ಅಧಿಕ ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ ಹಾಗೂ ಶಂಕುಸ್ಥಾಪನೆ ಮಾಡಲಿದ್ದಾರೆ
ಥಾಣೆ -ಬೊರಿವಲಿ ಅವಳಿ ಸುರಂಗ ಯೋಜನೆ ಮತ್ತು ಗೋರೆಗಾಂವ್ -ಮುಲುಂಡ್ ಲಿಂಕ್ ರಸ್ತೆ ಯೋಜನೆಯಲ್ಲಿ ಸುರಂಗ ಕಾಮಗಾರಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ
ನವಿ ಮುಂಬೈನಲ್ಲಿ ಕಲ್ಯಾಣ್ ಯಾರ್ಡ್ ಮರುನಿರ್ಮಾಣ ಯೋಜನೆ ಮತ್ತು ಗತಿ ಶಕ್ತಿ ಮಲ್ಟಿಮೋಡಲ್ ಕಾರ್ಗೋ ಟರ್ಮಿನಲ್‌ ಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ಮಾಡಲಿದ್ದಾರೆ
ಲೋಕಮಾನ್ಯ ತಿಲಕ್ ಟರ್ಮಿನಸ್‌ ನಲ್ಲಿ ಹೊಸ ಪ್ಲಾಟ್ ಫಾರ್ಮ್ ಗಳನ್ನು ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದಲ್ಲಿ 10 ಮತ್ತು 11 ನೇ ಪ್ಲಾಟ್‌ ಫಾರ್ಮ್‌ ಗಳ ವಿಸ್ತರಣೆಯನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ
ಸುಮಾರು ರೂ.5600 ಕೋಟಿಗಳ ವೆಚ್ಚದಲ್ಲಿ ನೂತನ ಮುಖ್ಯಮಂತ್ರಿ ಯುವ ಕಾರ್ಯ ಪ್ರಶಿಕ್ಷಣ ಯೋಜನೆಗೆ ಚಾಲನೆ ನೀಡಲಿದ್ದಾರೆ
ಮುಂಬೈನಲ್ಲಿ ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿ (ಐ.ಎನ್‌.ಎಸ್) ಕಟ್ಟಡಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಅವರು  ಜುಲೈ 13, 2024 ರಂದು, ಮಹಾರಾಷ್ಟ್ರದ ಮುಂಬೈಗೆ ಭೇಟಿ ನೀಡಲಿದ್ದಾರೆ. ಅದೇ ದಿನ ಸಂಜೆ 5:30 ರ ಸುಮಾರಿಗೆ ಪ್ರಧಾನಮಂತ್ರಿಯವರು ಮುಂಬೈನ ಗೋರೆಗಾಂವ್‌ ನಲ್ಲಿ ನೆಸ್ಕೋ ಪ್ರದರ್ಶನ ಕೇಂದ್ರವನ್ನು ತಲುಪಲಿದ್ದಾರೆ, ಅಲ್ಲಿ ಅವರು ಅದನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಮತ್ತು  ರೂ.29,400 ಕೋಟಿಗೂ ಹೆಚ್ಚು ಮೌಲ್ಯದ ರಸ್ತೆ, ರೈಲ್ವೆ ಮತ್ತು ಬಂದರು ವಲಯಕ್ಕೆ ಸಂಬಂಧಿಸಿದ ನೂತನ ಬಹು  ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ. ಅದರ ನಂತರ, ಸುಮಾರು ಸಂಜೆ 7 ಗಂಟೆ ಸುಮಾರಿಗೆ, ಐ.ಎನ್‌.ಎಸ್ ಟವರ್‌ ಗಳನ್ನು ಉದ್ಘಾಟಿಸಲು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ನ ಜಿ-ಬ್ಲಾಕ್‌ ನಲ್ಲಿರುವ ಇಂಡಿಯನ್ ನ್ಯೂಸ್‌ ಪೇಪರ್ ಸೊಸೈಟಿ (ಐ.ಎನ್‌.ಎಸ್) ಸೆಕ್ರೆಟರಿಯೇಟ್‌ ಗೆ ಪ್ರಧಾನಮಂತ್ರಿಯವರು ಭೇಟಿ ನೀಡಲಿದ್ದಾರೆ.

ರೂ. 16,600 ಕೋಟಿ ಮೌಲ್ಯದ ಥಾಣೆ ಬೊರಿವಲಿ ಸುರಂಗ ಯೋಜನೆಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.  ಥಾಣೆ ಮತ್ತು ಬೊರಿವಲಿ ನಡುವಿನ ಈ ಟ್ವಿನ್ ಟ್ಯೂಬ್ ಸುರಂಗವು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಕೆಳಗೆ ಹಾದುಹೋಗುತ್ತದೆ, ಇದು ಬೋರಿವಲಿಯ ಕಡೆಗೆ  ಹಾದು ಹೋಗುವ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿ ಮತ್ತು ಥಾಣೆ ಕಡೆಗೆ ಹಾದು ಹೋಗುವ  ಥಾಣೆ ಘೋಡ್‌ ಬಂದರ್ ರಸ್ತೆ ನಡುವೆ ನೇರ ಸಂಪರ್ಕವನ್ನು ಸೃಷ್ಟಿಸುತ್ತದೆ.  ಯೋಜನೆಯ ಒಟ್ಟು ಉದ್ದ 11.8 ಕಿ.ಮೀ ಇದ್ದು,  ಇದು ಥಾಣೆಯಿಂದ ಬೊರಿವಲಿಗೆ 12 ಕಿಮೀ ಪ್ರಯಾಣವನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ಸುಮಾರು 1 ಗಂಟೆ ಉಳಿತಾಯವಾಗುತ್ತದೆ.

ರೂಪಾಯಿ 6300 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಗೋರೆಗಾಂವ್ -ಮುಲುಂಡ್ ಲಿಂಕ್ ರೋಡ್ (ಜಿಎಂಎಲ್‌ಆರ್) ಯೋಜನೆಯಲ್ಲಿ ಸುರಂಗ ಕಾಮಗಾರಿಗೆ ಪ್ರಧಾನನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗೋರೆಗಾಂವ್‌ ನಲ್ಲಿ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಿಂದ ಮುಲುಂಡ್‌ ನಲ್ಲಿ ಪೂರ್ವ ಎಕ್ಸ್‌ಪ್ರೆಸ್ ಹೆದ್ದಾರಿಗೆ ಜಿಎಂಎಲ್‌ಆರ್ ರಸ್ತೆ ಸಂಪರ್ಕವನ್ನು ಕಲ್ಪಿಸುತ್ತದೆ.  ಜಿಎಂಎಲ್‌ಆರ್ ನ ಒಟ್ಟು ಉದ್ದವು ಸರಿಸುಮಾರು 6.65 ಕಿಲೋಮೀಟರ್‌ಗಳಾಗಿದ್ದು, ನವಿ ಮುಂಬೈ ಮತ್ತು ಪುಣೆ ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಹೊಸ ಉದ್ದೇಶಿತ ವಿಮಾನ ನಿಲ್ದಾಣದೊಂದಿಗೆ ಪಶ್ಚಿಮ ಉಪನಗರಗಳಿಗೆ ನೇರ ಸಂಪರ್ಕವನ್ನು ಒದಗಿಸುತ್ತದೆ.

ನವಿ ಮುಂಬೈನ ಟರ್ಭೆಯಲ್ಲಿ ಕಲ್ಯಾಣ್ ಯಾರ್ಡ್ ಮರುನಿರ್ಮಾಣ ಮತ್ತು ಗತಿ ಶಕ್ತಿ ಮಲ್ಟಿ ಮಾದರಿ ಕಾರ್ಗೋ ಟರ್ಮಿನಲ್‌ ಗೆ ಪ್ರಧಾನಮಂತ್ರಿ ಅವರು ಅಡಿಪಾಯ ಹಾಕಲಿದ್ದಾರೆ.  ಕಲ್ಯಾಣ್ ಯಾರ್ಡ್ ದೂರದ ಮತ್ತು ಉಪನಗರ ಸಂಚಾರವನ್ನು ಪ್ರತ್ಯೇಕಿಸಲು ಸಹಾಯ ಮಾಡುತ್ತದೆ.  ಮರುರೂಪಿಸುವಿಕೆಯು ಹೆಚ್ಚಿನ ರೈಲುಗಳನ್ನು ನಿರ್ವಹಿಸಲು ಯಾರ್ಡ್‌ನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ರೈಲು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುತ್ತದೆ.  ನವಿ ಮುಂಬೈನಲ್ಲಿರುವ ಗತಿ ಶಕ್ತಿ ಮಲ್ಟಿಮೋಡಲ್ ಕಾರ್ಗೋ ಟರ್ಮಿನಲ್ ಅನ್ನು 32600 ಚದರ ಮೀಟರ್‌ ಗಿಂತಲೂ ಹೆಚ್ಚು ಪ್ರದೇಶದಲ್ಲಿ ನಿರ್ಮಿಸಲಾಗುವುದು.  ಇದು ಸ್ಥಳೀಯ ಜನರಿಗೆ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಮತ್ತು ಸಿಮೆಂಟ್ ಮತ್ತು ಇತರ ಸರಕುಗಳನ್ನು ನಿರ್ವಹಿಸಲು ಹೆಚ್ಚುವರಿ ಟರ್ಮಿನಲ್ ಆಗಿ ಕಾರ್ಯ ಪೂರೈಸುತ್ತದೆ.

ಪ್ರಧಾನಮಂತ್ರಿಯವರು ಲೋಕಮಾನ್ಯ ತಿಲಕ್ ಟರ್ಮಿನಸ್‌ನಲ್ಲಿ ಹೊಸ ವೇದಿಕೆಗಳನ್ನು ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದಲ್ಲಿ  ಪ್ಲಾಟ್‌ಫಾರ್ಮ್ ಸಂಖ್ಯೆ10 ಮತ್ತು 11 ವಿಸ್ತರಣೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.  ಲೋಕಮಾನ್ಯ ತಿಲಕ್ ಟರ್ಮಿನಸ್‌ ನಲ್ಲಿರುವ ಹೊಸ ಉದ್ದವಾದ ಪ್ಲಾಟ್‌ಫಾರ್ಮ್‌ಗಳು ಇನ್ನು ಮುಂದೆ ಉದ್ದವಾದ ರೈಲುಗಳಿಗೆ ಅವಕಾಶ ಕಲ್ಪಿಸುತ್ತದೆ, ಪ್ರತಿ ರೈಲಿಗೆ ಹೆಚ್ಚಿನ ಪ್ರಯಾಣಿಕರಿಗೆ ಅವಕಾಶ ನೀಡುತ್ತದೆ ಮತ್ತು ಹೆಚ್ಚಿದ ದಟ್ಟಣೆಯನ್ನು ನಿಭಾಯಿಸಲು ನಿಲ್ದಾಣದ ಸಾಮರ್ಥ್ಯವನ್ನು ಸುಧಾರಿಸುತ್ತದೆ.   ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದ ಪ್ಲಾಟ್‌ಫಾರ್ಮ್ ನಂ. 10 ಮತ್ತು 11 ಅನ್ನು ಕವರ್ ಶೆಡ್ ಮತ್ತು ತೊಳೆಯಬಹುದಾದ ಏಪ್ರನ್‌ ನೊಂದಿಗೆ 382 ಮೀಟರ್‌ಗಳಷ್ಟು ವಿಸ್ತರಿಸಲಾಗಿದೆ.  ಇದು 24 ಕೋಚ್‌ ಗಳವರೆಗೆ ರೈಲುಗಳ ಉದ್ದವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಹೀಗಾಗಿ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುತ್ತದೆ.

ಪ್ರಧಾನಮಂತ್ರಿಯವರು ಸುಮಾರು ರೂ.5600 ಕೋಟಿಗಳ ವೆಚ್ಚದಲ್ಲಿ ಪ್ರಾರಂಭವಾಗುವ ಮುಖ್ಯಮಂತ್ರಿಯುವ ಕಾರ್ಯ ಪ್ರಶಿಕ್ಷಣ ಯೋಜನೆಗೆ ಚಾಲನೆ ನೀಡಲಿದ್ದಾರೆ.  ಇದು ಪರಿವರ್ತಕ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದ್ದು, 18 ರಿಂದ 30 ವರ್ಷ ವಯಸ್ಸಿನ ಯುವಕರಿಗೆ ಕೌಶಲ್ಯ ವರ್ಧನೆ ಮತ್ತು ಉದ್ಯಮದ ಮಾನ್ಯತೆಗೆ ಅವಕಾಶಗಳನ್ನು ಒದಗಿಸುವ ಮೂಲಕ ಯುವ ನಿರುದ್ಯೋಗವನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ನಲ್ಲಿರುವ ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿ (ಐ.ಎನ್‌.ಎಸ್) ಸೆಕ್ರೆಟರಿಯೇಟ್‌ಗೆ ಪ್ರಧಾನಮಂತ್ರಿಯವರು ಭೇಟಿ ನೀಡಲಿದ್ದಾರೆ.  ಐ.ಎನ್‌.ಎಸ್ ಟವರ್ಸ್ ಉದ್ಘಾಟನೆ ಮಾಡಲಿದ್ದಾರೆ.  ಹೊಸ ಕಟ್ಟಡವು ಮುಂಬೈನಲ್ಲಿ ಐ.ಎನ್‌.ಎಸ್. ನ ಸದಸ್ಯರ ಆಧುನಿಕ ಹಾಗೂ ವಿಕಸನಗೊಳ್ಳುತ್ತಿರುವ ಅಗತ್ಯಗಳನ್ನು ಪೂರೈಸುತ್ತದೆ, ಇದು ಇನ್ನು ಮುಂದೆ ಮುಂಬೈನಲ್ಲಿ ಪತ್ರಿಕಾ ಉದ್ಯಮಕ್ಕೆ ಕೇಂದ್ರ ಸ್ಥಾನವಾಗಿ ಕಾರ್ಯನಿರ್ವಹಿಸಲಿದೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi