ಸುಮಾರು 7300 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
ವಿಶೇಷವಾಗಿ ಹಿಂದುಳಿದ ಬುಡಕಟ್ಟು ಜನಾಂಗದ ಸುಮಾರು ಎರಡು ಲಕ್ಷ ಮಹಿಳಾ ಫಲಾನುಭವಿಗಳಿಗೆ ಮಾಸಿಕ ಕಂತಿನ ಆಧಾರ್ ಅನುದಾನ್ ವಿತರಿಸಲಿರುವ ಪ್ರಧಾನಮಂತ್ರಿ
ಸ್ವಾಮಿತ್ವ ಯೋಜನೆಯ ಫಲಾನುಭವಿಗಳಿಗೆ 1.75 ಲಕ್ಷ ಅಧಿಕಾರ್ ಅಭಿಲೇಖ್ ವಿತರಿಸಲಿರುವ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 550ಕ್ಕೂ ಹೆಚ್ಚು ಗ್ರಾಮಗಳಿಗೆ ಹಣ ವರ್ಗಾವಣೆ ಮಾಡಲಿರುವ ಪ್ರಧಾನಮಂತ್ರಿ
ರತ್ಲಾಂ ಮತ್ತು ಮೇಘನಗರ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
ರಸ್ತೆ, ರೈಲು, ವಿದ್ಯುತ್ ಮತ್ತು ಜಲ ವಲಯಕ್ಕೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 11 ಫೆಬ್ರವರಿ 2024 ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12:40 ರ ಸುಮಾರಿಗೆ ಅವರು ಮಧ್ಯಪ್ರದೇಶದ ಝಬುವಾದಲ್ಲಿ ಸುಮಾರು 7300 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಪ್ರಧಾನಮಂತ್ರಿಯವರು ಕೈಗೊಂಡ ಅನೇಕ ಉಪಕ್ರಮಗಳಿಗೆ ಅಂತ್ಯೋದಯ ದೃಷ್ಟಿಕೋನವು ಮಾರ್ಗದರ್ಶಿಯಾಗಿದೆ. ಸ್ವಾತಂತ್ರ್ಯದ ಹಲವಾರು ದಶಕಗಳ ನಂತರವೂ ಈ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗದ ಪ್ರಮುಖ ವಿಭಾಗಗಳಿಗೆ, ಬುಡಕಟ್ಟು ಸಮುದಾಯಕ್ಕೆ ಅಭಿವೃದ್ಧಿಯ ಪ್ರಯೋಜನಗಳು ತಲುಪುವುದನ್ನು ಖಾತ್ರಿಪಡಿಸುವುದು ಪ್ರಮುಖ ಕೇಂದ್ರೀಕೃತ ಕ್ಷೇತ್ರಗಳ ಯೋಜನೆಗಳಲ್ಲಿ ಒಂದಾಗಿದೆ. ಇದಕ್ಕೆ ಅನುಗುಣವಾಗಿ, ಈ ಪ್ರದೇಶದ ಗಮನಾರ್ಹ ಬುಡಕಟ್ಟು ಜನಸಂಖ್ಯೆಗೆ ಅನುಕೂಲವಾಗುವಂತಹ ಬಹು ಉಪಕ್ರಮಗಳನ್ನು ಪ್ರಧಾನಮಂತ್ರಿ ಸಮರ್ಪಿಸಲಿದ್ದಾರೆ ಮತ್ತು ಅಡಿಪಾಯ ಹಾಕಲಿದ್ದಾರೆ.

 ಪ್ರಧಾನಮಂತ್ರಿಯವರು ಸುಮಾರು ಎರಡು ಲಕ್ಷ ಮಹಿಳಾ ಫಲಾನುಭವಿಗಳಿಗೆ ಆಹಾರ್ ಅನುದಾನ ಯೋಜನೆಯಡಿ ಮಾಸಿಕ ಕಂತುಗಳನ್ನು ವಿತರಿಸಲಿದ್ದಾರೆ.  ಈ ಯೋಜನೆಯಡಿಯಲ್ಲಿ, ಮಧ್ಯಪ್ರದೇಶದ ವಿವಿಧ ವಿಶೇಷವಾಗಿ ಹಿಂದುಳಿದ ಬುಡಕಟ್ಟುಗಳ ಮಹಿಳೆಯರಿಗೆ ಪೌಷ್ಟಿಕ ಆಹಾರಕ್ಕಾಗಿ ತಿಂಗಳಿಗೆ 1500 ರೂಪಾಯಿಗಳನ್ನು ನೀಡಲಾಗುತ್ತದೆ.

 ಪ್ರಧಾನಮಂತ್ರಿಯವರು ಸ್ವಾಮಿತ್ವ ಯೋಜನೆಯ 1.75 ಲಕ್ಷ ಫಲಾನುಭವಿಗಳಿಗೆ  ಅಧಿಕಾರ ಪತ್ರ ( ಅಭಿಲೇಖ / ಹಕ್ಕುಗಳ ದಾಖಲೆ) ವಿತರಿಸಲಿದ್ದಾರೆ.  ಇದು ಜನರಿಗೆ ತಮ್ಮ ಭೂಮಿಯ ಮೇಲಿನ ಹಕ್ಕಿಗಾಗಿ ದಾಖಲೆ/ ಪುರಾವೆಗಳನ್ನು ಒದಗಿಸುತ್ತದೆ

ಪ್ರಧಾನಮಂತ್ರಿಯವರು ತಾಂತ್ಯ ಮಾಮಾ ಭಿಲ್ ವಿಶ್ವವಿದ್ಯಾನಿಲಯಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ - ಇದು ಮೀಸಲಾದ ವಿಶ್ವವಿದ್ಯಾನಿಲಯವಾಗಿದ್ದು, ಈ ಪ್ರದೇಶದಲ್ಲಿ ಹೆಚ್ಚಿನ ಬುಡಕಟ್ಟು ಸಾಂದ್ರತೆಯನ್ನು ಹೊಂದಿರುವ ಜಿಲ್ಲೆಗಳ ಯುವಕರ ಉನ್ನತ ವಿದ್ಯಾಭ್ಯಾಸ ಅವಕಾಶಗಳನ್ನು ಪೂರೈಸುತ್ತದೆ.  ರೂಪಾಯಿ170 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿರುವ ಈ ನೂತನ ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಿದೆ.

 ಅಂಗನವಾಡಿ ಭವನಗಳು, ನ್ಯಾಯಬೆಲೆ ಅಂಗಡಿಗಳು, ಆರೋಗ್ಯ ಕೇಂದ್ರಗಳು, ಶಾಲೆಗಳಲ್ಲಿನ ಹೆಚ್ಚುವರಿ ಕೊಠಡಿಗಳು, ಆಂತರಿಕ ರಸ್ತೆಗಳು ಸೇರಿದಂತೆ ವಿವಿಧ ರೀತಿಯ ನಿರ್ಮಾಣ ಚಟುವಟಿಕೆಗಳಿಗೆ ಬಳಸಲು ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 559 ಗ್ರಾಮಗಳಿಗೆ 55.9 ಕೋಟಿ ರೂಪಾಯಿ ಮೊತ್ತವನ್ನು ಪ್ರಧಾನಮಂತ್ರಿ ಅವರು ಬಿಡುಗಡೆ ಮಾಡಲಿದ್ದಾರೆ

 ಪ್ರಧಾನಮಂತ್ರಿಯವರು ಝಬುವಾದಲ್ಲಿ ‘ಸಿಎಂ ರೈಸ್ ಸ್ಕೂಲ್’ಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.  ವಿದ್ಯಾರ್ಥಿಗಳಿಗೆ ಸ್ಮಾರ್ಟ್ ತರಗತಿಗಳು, ಇ ಲೈಬ್ರರಿ ಮುಂತಾದ ಆಧುನಿಕ ಸೌಲಭ್ಯಗಳನ್ನು ಒದಗಿಸಲು ಈ ಶಾಲೆಯು ತಂತ್ರಜ್ಞಾನವನ್ನು ಸಂಯೋಜಿಸುತ್ತದೆ.

ಮಧ್ಯಪ್ರದೇಶದಲ್ಲಿ ನೀರು ಸರಬರಾಜು ಮತ್ತು ಕುಡಿಯುವ ನೀರಿನ ಪೂರೈಕೆಯನ್ನು ಬಲಪಡಿಸುವ ಬಹು ಯೋಜನೆಗಳನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಮತ್ತು ಅಡಿಗಲ್ಲು ಹಾಕಲಿದ್ದಾರೆ. ಇದರಲ್ಲಿ ಸೇರಿರುವ ಧಾರ್ ಮತ್ತು ರತ್ಲಂನ ಒಂದು ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಯಾದ 'ತಲವಾಡ ಯೋಜನೆ' ಅಡಿಗಲ್ಲು ಹಾಕುವ ಯೋಜನೆಗಳು;  ಮತ್ತು ಪುನಶ್ಚೇತನಗೊ ಳಿಸುವಿಕೆ ಮತ್ತು ನಗರ ಪರಿವರ್ತನೆಗಾಗಿ ಅಟಲ್ ಮಿಷನ್ (ಅಮೃತ್) 2.0 ಅಡಿಯಲ್ಲಿ 14 ನಗರ ನೀರು ಸರಬರಾಜು ಯೋಜನೆಗಳು, ಮಧ್ಯಪ್ರದೇಶದ ಅನೇಕ ಜಿಲ್ಲೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ನಗರ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತವೆ.   ಜಬುವಾದ 50 ಗ್ರಾಮ ಪಂಚಾಯತ್‌ ಗಳಿಗೆ ಪ್ರಧಾನಮಂತ್ರಿ ಅವರು ರಾಷ್ಟ್ರ ‘ನಲ್ ಜಲ ಯೋಜನೆ’ಗೆ ಸಮರ್ಪಿಸಲಿದ್ದಾರೆ. ಇಂದು ಸುಮಾರು 11 ಸಾವಿರ ಮನೆಗಳಿಗೆ ನಲ್ಲಿ ನೀರನ್ನು ಒದಗಿಸುತ್ತದೆ.

 ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ವಿವಿಧ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಮತ್ತು ಬಹು ರೈಲು ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.  ಇವುಗಳಲ್ಲಿ ರತ್ಲಂ ರೈಲು ನಿಲ್ದಾಣ ಮತ್ತು ಮೇಘನಗರ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ಮುಂತಾದವುಗಳು ಸೇರಿದೆ.  ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಈ ನಿಲ್ದಾಣಗಳನ್ನು ಮರು ಅಭಿವೃದ್ಧಿಗೊಳಿಸಲಾಗುವುದು.  ರಾಷ್ಟ್ರಕ್ಕೆ ಸಮರ್ಪಿಸಲಾಗುವ ರೈಲು ಯೋಜನೆಗಳು ಹೀಗಿವೆ :- ಇಂದೋರ್- ದೇವಾಸ್- ಉಜ್ಜೈನ್ ಸಿ ಕ್ಯಾಬಿನ್ ರೈಲು ಮಾರ್ಗವನ್ನು ದ್ವಿಗುಣಗೊಳಿಸುವ ಯೋಜನೆಗಳನ್ನು ಒಳಗೊಂಡಿವೆ;  ಇಟಾರ್ಸಿ- ಉತ್ತರ-ದಕ್ಷಿಣ ದರ್ಜೆಯ ವಿಭಜಕವು ಅಂಗಳ ಮರುರೂಪಿಸುವಿಕೆಯೊಂದಿಗೆ;  ಮತ್ತು ಬರ್ಖೇರಾ-ಬುದ್ನಿ-ಇಟಾರ್ಸಿಯನ್ನು ಸಂಪರ್ಕಿಸುವ ಮೂರನೇ ಸಾಲು.  ಈ ಯೋಜನೆಗಳು ರೈಲು ಸೇವೆಯ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಪ್ರಯಾಣಿಕ ಹಾಗೂ ಸರಕು ರೈಲುಗಳ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಧ್ಯಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ-47 ರ ಕಿಮೀ 0.00 ರಿಂದ ಕಿಮೀ 30.00 (ಹರ್ದಾ-ತೇಮಗಾಂವ್) ವರೆಗೆ ಹರ್ದಾ-ಬೇತುಲ್ (ಪ್ಯಾಕೇಜ್-I) ನ ಚತುಷ್ಪಥ ಸೇರಿದಂತೆ  3275 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಹು ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ;  ರಾಷ್ಟ್ರೀಯ ಹೆದ್ದಾರಿ-752D ನ ಉಜ್ಜಯಿನಿ ದೇವಾಸ್ ವಿಭಾಗ;  ರಾಷ್ಟ್ರೀಯ ಹೆದ್ದಾರಿ-47 ರ ಇಂದೋರ್-ಗುಜರಾತ್  ಗಡಿ ವಿಭಾಗದ ನಾಲ್ಕು-ಪಥದ (16 ಕಿಮಿ) ಮತ್ತು ಚಿಚೋಲಿ-ಬೆತುಲ್ (ಪ್ಯಾಕೇಜ್-III) ರಾಷ್ಟ್ರೀಯ ಹೆದ್ದಾರಿ-47 ರ ಹರ್ದಾ-ಬೆತುಲ್ ನ ನಾಲ್ಕು-ಪಥ;  ಮತ್ತು ರಾಷ್ಟ್ರೀಯ ಹೆದ್ದಾರಿ-552ಜಿ ಯ ಉಜ್ಜಯಿನಿ ಜಲಾವರ್ ವಿಭಾಗ ಇದರಲ್ಲಿ ಸೇರಿವೆ.  ಈ ಯೋಜನೆಗಳು ರಸ್ತೆ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.

 ಇದಲ್ಲದೆ, ಪ್ರಧಾನಮಂತ್ರಿಯವರು ಇತರ ಅಭಿವೃದ್ಧಿ ಉಪಕ್ರಮಗಳಾದ ತ್ಯಾಜ್ಯದ ಡಂಪ್‌ ಸೈಟ್ ಪರಿಹಾರ, ವಿದ್ಯುತ್ ಸಬ್‌ ಸ್ಟೇಶನ್ ಮುಂತಾದವುಗಳನ್ನು ಸಾರ್ವಜನಿಕರಿಗೆ ಸಮರ್ಪಿಸಲಿದ್ದಾರೆ ಮತ್ತು ಹಲವಾರು ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Govt saved 48 billion kiloWatt of energy per hour by distributing 37 cr LED bulbs

Media Coverage

Govt saved 48 billion kiloWatt of energy per hour by distributing 37 cr LED bulbs
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಮಾರ್ಚ್ 2025
March 12, 2025

Appreciation for PM Modi’s Reforms Powering India’s Global Rise