Quoteಭುಜ್ ನಲ್ಲಿ ಸ್ಮೃತಿ ವಾನ್ ಸ್ಮಾರಕವನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ. 2001 ರಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ನಂತರ ತೋರಿದ ಜನರ ಚೇತರಿಕೆ ಮನೋಭಾವವನ್ನು ಆಚರಿಸಲು ಇದು ಒಂದು ರೀತಿಯ ಉಪಕ್ರಮವಾಗಿದೆ
Quoteಅತ್ಯಾಧುನಿಕ ಸ್ಮೃತಿ ವ್ಯಾನ್ ಭೂಕಂಪದ ವಸ್ತುಸಂಗ್ರಹಾಲಯವನ್ನು ಪುನರ್ಜನ್ಮ, ಮರುಸಂಶೋಧನೆ, ಮರುಸ್ಥಾಪನೆ, ಪುನರ್ನಿರ್ಮಾಣ, ಮರುಚಿಂತನೆ, ಪುನರುಜ್ಜೀವನ ಮತ್ತು ನವೀಕರಿಸಿ ಎಂಬ ಏಳು ಬ್ಲಾಕ್ ಗಳಲ್ಲಿ ಏಳು ವಿಷಯಗಳಲ್ಲಿ ಪ್ರತ್ಯೇಕಿಸಲಾಗಿದೆ
Quoteಭುಜ್ ನಲ್ಲಿ ಸುಮಾರು 4400 ಕೋಟಿ ರೂಪಾಯಿಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ ಪ್ರಧಾನಮಂತ್ರಿ
Quoteಸರ್ದಾರ್ ಸರೋವರ ಯೋಜನೆಯ ಕಛ್ ಶಾಖಾ ಕಾಲುವೆಯನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ, ಇದು ಪ್ರದೇಶದಲ್ಲಿ ನೀರು ಪೂರೈಕೆಯನ್ನು ಹೆಚ್ಚಿಸಲಿದೆ
Quoteಖಾದಿ ಮತ್ತು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅದರ ಪ್ರಾಮುಖ್ಯತೆಯನ್ನು ಗೌರವಿಸಲು ಆಯೋಜಿಸಲಾಗುತ್ತಿರುವ ಖಾದಿ ಉತ್ಸವದಲ್ಲಿ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ
Quoteಒಂದೇ ಸಮಯದಲ್ಲಿ ಮತ್ತು ಒಂದೇ ಸ್ಥಳದಲ್ಲಿ 7500 ಮಹಿಳಾ ಖಾದಿ ಕುಶಲಕರ್ಮಿಗಳು ಚರಖಾವನ್ನು ನೂಲುವ ವೈಶಿಷ್ಟ್ಯಪೂರ್ಣ ಹಾಗೂ ಅನನ್ಯ ಕಾರ್ಯಕ್ರಮವಿದಾಗಿದೆ
Quoteಭಾರತದಲ್ಲಿ ಸುಜುಕಿಯ 40 ವರ್ಷಗಳ ಸ್ಮರಣಾರ್ಥ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಭಾಷಣ ಮಾಡಲಿದ್ದಾರೆ ಮತ್ತು ಭಾರತದಲಲ್ಲಿ ಸುಜುಕಿ ಸಮೂಹದ ಎರಡು ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 27 ಮತ್ತು 28, 2022 ರಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಆಗಸ್ಟ್ 27 ರಂದು ಸಂಜೆ 5:30 ರ ಸುಮಾರಿಗೆ ಅಹಮದಾಬಾದ್ ನ ಸಬರಮತಿ ನದಿ ತಟದಲ್ಲಿ ಪ್ರಧಾನಮಂತ್ರಿ ಖಾದಿ ಉತ್ಸವವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜೂನ್ 28 ರಂದು ಬೆಳಿಗ್ಗೆ 10 ಗಂಟೆಗೆ ಪ್ರಧಾನಮಂತ್ರಿಯವರು ಭುಜ್ ನಲ್ಲಿ ಸ್ಮೃತಿ ವಾನ್ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ. ನಂತರ, ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರಧಾನಮಂತ್ರಿಯವರು ಭುಜ್ ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಸುಮಾರು ಸಂಜೆ 5 ಗಂಟೆಗೆ, ಭಾರತದಲ್ಲಿ ಸುಜುಕಿಯ 40 ವರ್ಷಗಳ ಸ್ಮರಣಾರ್ಥವಾಗಿ ಗಾಂಧಿನಗರದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ ಮಾಡಲಿದ್ದಾರೆ.

ಖಾದಿ ಉತ್ಸವ

ಖಾದಿಯನ್ನು ಜನಪ್ರಿಯಗೊಳಿಸಲು, ಖಾದಿ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಯುವಕರಲ್ಲಿ ಖಾದಿಯ ಬಳಕೆಯನ್ನು ಉತ್ತೇಜಿಸಲು ಪ್ರಧಾನಮಂತ್ರಿಗಳು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನಮಂತ್ರಿಯವರ ಪ್ರಯತ್ನದ ಫಲವಾಗಿ, 2014 ರಿಂದ, ಭಾರತದಲ್ಲಿ ಖಾದಿ ಮಾರಾಟವು ನಾಲ್ಕು ಪಟ್ಟು ಹೆಚ್ಚಳಕ್ಕೆ ಸಾಕ್ಷಿಯಾಗಿದೆ, ಆದರೆ ಗುಜರಾತ್ ನಲ್ಲಿ, ಖಾದಿಯ ಮಾರಾಟವು ಎಂಟು ಪಟ್ಟು ಬೃಹತ್ ಹೆಚ್ಚಳವಾಗಿದೆ.

ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ವಿಶಿಷ್ಟ ಕಾರ್ಯಕ್ರಮದಲ್ಲಿ, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಳಕೆಯಲ್ಲಿದ್ದ ಖಾದಿ ಮತ್ತು ಅದರ ಪ್ರಾಮುಖ್ಯತೆಯನ್ನು ಗೌರವಿಸಲು ಖಾದಿ ಉತ್ಸವವನ್ನು ಆಯೋಜಿಸಲಾಗಿದೆ. ಅಹಮದಾಬಾದ್ ನ ಸಾಬರಮತಿ ನದಿತಟದಲ್ಲಿ ಉತ್ಸವವನ್ನು ಆಯೋಜಿಸಲಾಗಿದೆ ಮತ್ತು ಗುಜರಾತ್ ನ ವಿವಿಧ ಜಿಲ್ಲೆಗಳಿಂದ 7500 ಮಹಿಳಾ ಖಾದಿ ಕುಶಲಕರ್ಮಿಗಳು ಒಂದೇ ಸಮಯದಲ್ಲಿ ಮತ್ತು ಒಂದೇ ಸ್ಥಳದಲ್ಲಿ ಚರಖಾ ನೂಲುವ ( ಮರದ ಚರಖಾದಿಂದ ನೂಲು ತೆಗೆಯುವ) ವಿಶೇಷ ಕಾರ್ಯಕ್ರಮವಿದೆ. 1920 ರಿಂದ ವಿವಿಧ ತಲೆಮಾರುಗಳು ಬಳಸಿದ 22 ಚರಖಾಗಳನ್ನು ಪ್ರದರ್ಶಿಸುವ "ಚರಖಾಗಳ ವಿಕಸನ" ವನ್ನು ಪ್ರಾತ್ಯಕ್ಷಿಕೆ –ಪ್ರದರ್ಶನ ಕೂಡಾ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ - ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಳಸಿದ ಚರಖಾಗಳನ್ನು ಸಂಕೇತಿಸುವ "ಯೆರವಾಡ ಚರಖಾ" ದಂತಹ ಚರಖಾಗಳ ಪ್ರದರ್ಶನ ಒಳಗೊಂಡಿರುತ್ತದೆ, ಇಂದು ಬಳಸಲಾಗುವ ಇತ್ತೀಚಿನ ಆವಿಷ್ಕಾರಗಳು ಮತ್ತು ಅಧುನಿಕ ತಂತ್ರಜ್ಞಾನದೊಂದಿಗೆ ಚರಖಾಗಳ ಪ್ರದರ್ಶನ ಒಳಗೊಂಡಿರುತ್ತದೆ. ಪೊಂದೂರು ಖಾದಿ ಉತ್ಪಾದನೆಯ ಪ್ರದರ್ಶನವೂ ಇಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಗುಜರಾತ್ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ನೂತನ ಕಚೇರಿ ಕಟ್ಟಡ ಮತ್ತು ಸಾಬರಮತಿಯಲ್ಲಿ ಸೇತುವೆಯನ್ನು ಕೂಡಾ ಉದ್ಘಾಟಿಸಲಿದ್ದಾರೆ.

ಭುಜ್ ನಲ್ಲಿ ಪ್ರಧಾನಮಂತ್ರಿಯವರು

ಪ್ರಧಾನಮಂತ್ರಿಯವರು ಭುಜ್ ಜಿಲ್ಲೆಯಲ್ಲಿ ಸ್ಮೃತಿ ವಾನ್ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಮಂತ್ರಿಯವರು ರೂಪಿಸಿರುವ ಸ್ಮೃತಿ ವಾನ್ ಒಂದು ರೀತಿಯ ನೂತನ ಉಪಕ್ರಮವಾಗಿದೆ. ಭುಜ್ ನಲ್ಲಿ ಕೇಂದ್ರಬಿಂದುವಾಗಿ ಸಂಭವಿಸಿದ 2001 ರ ಭೀಕರ ಭೂಕಂಪದ ಸಮಯದಲ್ಲಿ ಪ್ರಾಣ ಕಳೆದುಕೊಂಡ (ಸುಮಾರು 13,000 ಜನರ ಸಾವಿನ ) ನಂತರ ಪನಶ್ಚೇತನಕ್ಕಾಗಿ ಜನರು ತೋರಿಸಿದ ಸ್ಥಿತಿಸ್ಥಾಪಕತ್ವದ ಮನೋಭಾವವನ್ನು ಆಚರಿಸಲು ಸುಮಾರು 470 ಎಕರೆ ಪ್ರದೇಶದಲ್ಲಿ ಇದನ್ನು ನಿರ್ಮಿಸಲಾಗಿದೆ. ಈ ವಿಶೇಷ ಸ್ಮಾರಕವು ಭೂಕಂಪದ ಸಮಯದಲ್ಲಿ ಪ್ರಾಣ ಕಳೆದುಕೊಂಡ ಜನರ ಹೆಸರನ್ನು ಹೊಂದಿದೆ.

ಅತ್ಯಾಧುನಿಕ ಸ್ಮೃತಿ ವ್ಯಾನ್ ಭೂಕಂಪದ ವಸ್ತುಸಂಗ್ರಹಾಲಯವು ಮರುಜನ್ಮ (ಪುನರ್ಜನ್ಮ), ಮರುಸಂಶೋಧನೆ, ಮರುಸ್ಥಾಪನೆ, ಪುನರ್ನಿರ್ಮಾಣ, ಮರುಚಿಂತನೆ, ಪುನರುಜ್ಜೀವನ ಮತ್ತು ನವೀಕರಿಸಿ – ಎಂದು ಏಳು ವಿಷಯಗಳನ್ನು ಆಧರಿಸಿ ಏಳು ಬ್ಲಾಕ್ ಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಬ್ಲಾಕ್ ಭೂಮಿಯ ವಿಕಸನ ಮತ್ತು ಪ್ರತಿ ಬಾರಿ ಜಯಿಸಲು ಭೂಮಿಯ ಸಾಮರ್ಥ್ಯವನ್ನು ಚಿತ್ರಿಸುವ ಮರುಜನ್ಮ(ಪುನರ್ಜನ್ಮ)ದ ಥೀಮ್ ಅನ್ನು ಆಧರಿಸಿದೆ. ಎರಡನೇ ಬ್ಲಾಕ್ ಗುಜರಾತ್ ನ  ಭೂಗೋಳ ಮತ್ತು ದುರ್ಬಲವಾಗಿರುವ ವಿವಿಧ ನೈಸರ್ಗಿಕ ವಿಕೋಪಗಳನ್ನು ತೋರಿಸುತ್ತದೆ. ಮೂರನೇ ಬ್ಲಾಕ್ 2001 ರ ಭೂಕಂಪದ ನಂತರದ ತಕ್ಷಣದ ಪರಿಣಾಮಗಳನ್ನು ಪ್ರದರ್ಶಿಸುತ್ತದೆ.  ಈ ಬ್ಲಾಕ್ ನಲ್ಲಿರುವ ಗ್ಯಾಲರಿಗಳು ವ್ಯಕ್ತಿಗಳು ಮತ್ತು ಸಂಸ್ಥೆಗಳು ಕೈಗೊಂಡಿರುವ ಬೃಹತ್ ಪರಿಹಾರ ಪ್ರಯತ್ನಗಳನ್ನು ವಿವರಿಸುತ್ತವೆ. ನಾಲ್ಕನೇ ಬ್ಲಾಕ್ ಗುಜರಾತ್ ನ ಪುನರ್ನಿರ್ಮಾಣದ ಉಪಕ್ರಮಗಳು ಮತ್ತು 2001 ರ ಭೂಕಂಪದ ನಂತರದ ಯಶಸ್ಸಿನ ಕಥೆಗಳನ್ನು ಪ್ರದರ್ಶಿಸುತ್ತವೆ. ಐದನೇ ಬ್ಲಾಕ್ ಸಂದರ್ಶಕರನ್ನು ವಿವಿಧ ರೀತಿಯ ವಿಪತ್ತುಗಳ ಬಗ್ಗೆ ಮತ್ತು ಯಾವುದೇ ಸಮಯದಲ್ಲಿ ಯಾವುದೇ ರೀತಿಯ ವಿಪತ್ತಿಗೆ ಭವಿಷ್ಯದ ಸಿದ್ಧತೆಯ ಬಗ್ಗೆ ಯೋಚಿಸಲು ಮತ್ತು ಕಲಿಯಲು ಮಾಹಿತಿ ನೀಡಿ ಪ್ರೇರೇಪಿಸುತ್ತವೆ. ಸಿಮ್ಯುಲೇಟರ್ ಸಹಾಯದಿಂದ ಭೂಕಂಪದ ಅನುಭವವನ್ನು ಮರುಕಳಿಸಲು ಆರನೇ ಬ್ಲಾಕ್ ನಮಗೆ ಸಹಾಯ ಮಾಡುತ್ತವೆ. ಅನುಭವವನ್ನು 5ಡಿ ಸಿಮ್ಯುಲೇಟರ್ನಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಈ ಪ್ರಮಾಣದಲ್ಲಿ ನೆಲದ ವಾಸ್ತವತೆಯನ್ನು ಸಂದರ್ಶಕರಿಗೆ ನೀಡಲು ಉದ್ದೇಶಿಸಲಾಗಿದೆ. ಏಳನೇ ಬ್ಲಾಕ್ ಜನರಿಗೆ ನೆನಪಿಗಾಗಿ ಜಾಗವನ್ನು ಒದಗಿಸುತ್ತವೆ, ಅಲ್ಲಿ ಅವರು ಕಳೆದುಹೋದ ವ್ಯಕ್ತಿಗಳಿಗೆ  ಗೌರವ ಸಲ್ಲಿಸಬಹುದು.

ಪ್ರಧಾನಮಂತ್ರಿಯವರು ಭುಜ್ ನಲ್ಲಿ ಸುಮಾರು 4400 ಕೋಟಿ ರೂಪಾಯಿಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಪ್ರಧಾನಮಂತ್ರಿಯವರು ಸರ್ದಾರ್ ಸರೋವರ ಯೋಜನೆಯ ಕಛ್ ಶಾಖಾ ಕಾಲುವೆಯನ್ನು ಉದ್ಘಾಟಿಸಲಿದ್ದಾರೆ. ಕಾಲುವೆಯ ಒಟ್ಟು ಉದ್ದ ಸುಮಾರು 357 ಕಿ.ಮೀ. ಕಾಲುವೆಯ ಒಂದು ಭಾಗವನ್ನು 2017 ರಲ್ಲಿ ಪ್ರಧಾನಮಂತ್ರಿ ಅವರು ಉದ್ಘಾಟಿಸಿದ್ದರು ಮತ್ತು ಉಳಿದ ಭಾಗವನ್ನು ಈಗ ಉದ್ಘಾಟನೆ ಮಾಡಲಾಗುತ್ತಿದೆ. ಕಾಲುವೆಯು ಕಛ್ ನಲ್ಲಿ ನೀರಾವರಿ ಸೌಲಭ್ಯಗಳನ್ನು ಒದಗಿಸಲು ಮತ್ತು ಕಛ್ ಜಿಲ್ಲೆಯ ಎಲ್ಲಾ 948 ಹಳ್ಳಿಗಳು ಮತ್ತು 10 ಪಟ್ಟಣಗಳಲ್ಲಿ ಕುಡಿಯುವ ನೀರನ್ನು ಒದಗಿಸಲು ಸಹಾಯ ಮಾಡುತ್ತದೆ. ಸರ್ಹಾದ್ ಡೈರಿಯ ಹೊಸ ಸ್ವಯಂಚಾಲಿತ ಹಾಲು ಸಂಸ್ಕರಣೆ ಮತ್ತು ಪ್ಯಾಕಿಂಗ್ ಘಟಕ ಸೇರಿದಂತೆ ವಿವಿಧ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ; ಪ್ರಾದೇಶಿಕ ವಿಜ್ಞಾನ ಕೇಂದ್ರ, ಭುಜ್; ಗಾಂಧಿಧಾಮದಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕನ್ವೆನ್ಷನ್ ಸೆಂಟರ್; ಅಂಜಾರ್ ನಲ್ಲಿ ವೀರ್ ಬಾಲ ಸ್ಮಾರಕ; ನಖತ್ರಾನಾದಲ್ಲಿ ಭುಜ್ 2 ಸಬ್ಸ್ಟೇಷನ್ ಇತ್ಯಾದಿ ಇದರಲ್ಲಿ ಸೇರಿದೆ. ಪ್ರಧಾನಮಂತ್ರಿ ಅವರು ಭುಜ್-ಭೀಮಸರ್ ರಸ್ತೆ ಸೇರಿದಂತೆ ರೂ. 1500 ಕೋಟಿಗಿಂತ ಅಧಿಕ ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.  

ಗಾಂಧಿನಗರದಲ್ಲಿ ಪ್ರಧಾನಮಂತ್ರಿಯವರು

ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ನಡೆಯಲಿರುವ ಭಾರತದಲ್ಲಿ ಸುಜುಕಿಯ 40 ವರ್ಷಗಳ ಸುದೀರ್ಘ ಕಾಲಾವಧಿಯ ಸ್ಮರಣಾರ್ಥ ವಿಶೇಷ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಭಾರತದಲ್ಲಿ ಸುಜುಕಿ ಸಮೂಹದ ಎರಡು ಪ್ರಮುಖ ಯೋಜನೆಗಳಿಗೆ ( ಗುಜರಾತ್ ನ ಹಂಸಲ್ಪುರದಲ್ಲಿ ಸುಜುಕಿ ಮೋಟಾರ್ ಗುಜರಾತ್ ಎಲೆಕ್ಟ್ರಿಕ್ ವೆಹಿಕಲ್ ಬ್ಯಾಟರಿ ಉತ್ಪಾದನಾ ಸೌಲಭ್ಯ ಮತ್ತು ಹರಿಯಾಣದ ಖಾರ್ಖೋಡಾದಲ್ಲಿ ಮಾರುತಿ ಸುಜುಕಿಯ ಮುಂಬರುವ ವಾಹನ ಉತ್ಪಾದನಾ ಸೌಲಭ್ಯ ) ಅಡಿಪಾಯ ಹಾಕಲಿದ್ದಾರೆ.

ಗುಜರಾತ್ ನ ಹಂಸಲ್ಪುರದಲ್ಲಿ ಸುಜುಕಿ ಮೋಟಾರ್ ಗುಜರಾತ್ ಎಲೆಕ್ಟ್ರಿಕ್ ವೆಹಿಕಲ್ ಬ್ಯಾಟರಿ ಉತ್ಪಾದನಾ ಸೌಲಭ್ಯವನ್ನು ಸುಮಾರು ರೂ. 7,300 ಕೋಟಿ ಗಳ ಹೂಡಿಕೆಯೊಂದಿಗೆ ಸ್ಥಾಪಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಅಡ್ವಾನ್ಸ್ ಕೆಮಿಸ್ಟ್ರಿ ಸೆಲ್ ಬ್ಯಾಟರಿಗಳನ್ನು ತಯಾರಿಸಲು ಹರಿಯಾಣದ ಖಾರ್ಖೋಡಾದಲ್ಲಿರುವ ವರ್ಷಕ್ಕೆ 10 ಲಕ್ಷ ಪ್ರಯಾಣಿಕ ವಾಹನಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿರುವ ವಾಹನ ತಯಾರಿಕಾ ಘಟಕ ಸ್ಥಾಪಿಸಲಾಗಿದೆ. ಇದು ವಿಶ್ವದ ಒಂದೇ ಸ್ಥಳದಲ್ಲಿ ಅತಿದೊಡ್ಡ ಪ್ರಯಾಣಿಕ ವಾಹನ ಉತ್ಪಾದನಾ ಸೌಲಭ್ಯಗಳಲ್ಲಿ ಒಂದಾಗಿದೆ. ಮೊದಲ ಹಂತದ ಯೋಜನೆಯು ಸುಮಾರು ರೂ. 11,000 ಕೋಟಿ ಹೂಡಿಕೆಯನ್ನು ಹೊಂದಿದೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
The world is keenly watching the 21st-century India: PM Modi

Media Coverage

The world is keenly watching the 21st-century India: PM Modi
NM on the go

Nm on the go

Always be the first to hear from the PM. Get the App Now!
...
PM Modi prays at Somnath Mandir
March 02, 2025

The Prime Minister Shri Narendra Modi today paid visit to Somnath Temple in Gujarat after conclusion of Maha Kumbh in Prayagraj.

|

In separate posts on X, he wrote:

“I had decided that after the Maha Kumbh at Prayagraj, I would go to Somnath, which is the first among the 12 Jyotirlingas.

Today, I felt blessed to have prayed at the Somnath Mandir. I prayed for the prosperity and good health of every Indian. This Temple manifests the timeless heritage and courage of our culture.”

|

“प्रयागराज में एकता का महाकुंभ, करोड़ों देशवासियों के प्रयास से संपन्न हुआ। मैंने एक सेवक की भांति अंतर्मन में संकल्प लिया था कि महाकुंभ के उपरांत द्वादश ज्योतिर्लिंग में से प्रथम ज्योतिर्लिंग श्री सोमनाथ का पूजन-अर्चन करूंगा।

आज सोमनाथ दादा की कृपा से वह संकल्प पूरा हुआ है। मैंने सभी देशवासियों की ओर से एकता के महाकुंभ की सफल सिद्धि को श्री सोमनाथ भगवान के चरणों में समर्पित किया। इस दौरान मैंने हर देशवासी के स्वास्थ्य एवं समृद्धि की कामना भी की।”