ಪ್ರಧಾನಮಂತ್ರಿಯವರು ಸಬರಕಾಂತದಲ್ಲಿರುವ ಸಬರ್ ಡೈರಿಯಲ್ಲಿ 1,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಹು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವರು
ಈ ಪ್ರದೇಶದಲ್ಲಿ ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸಲು ಮತ್ತು ಸ್ಥಳೀಯ ರೈತರು ಮತ್ತು ಹಾಲು ಉತ್ಪಾದಕರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುವ ಯೋಜನೆಗಳು
ಪ್ರಧಾನಮಂತ್ರಿಯವರು 44ನೇ ಚೆಸ್ ಒಲಿಂಪಿಯಾಡ್ ಅನ್ನು ಉದ್ಘಾಟಿಸಲಿದ್ದಾರೆ
ಚೆಸ್ ಒಲಿಂಪಿಯಾಡ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ; ಭಾರತವು ತನ್ನ ಅತಿದೊಡ್ಡ ತಂಡವನ್ನು ಸ್ಪರ್ಧೆಯಲ್ಲಿ ಕಣಕ್ಕಿಳಿಸುತ್ತಿದೆ
ಪ್ರಧಾನಮಂತ್ರಿಯವರು ಅಣ್ಣಾ ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವದಲ್ಲಿ ಭಾಗವಹಿಸುವರು
ಪ್ರಧಾನಮಂತ್ರಿಯವರು ಗಾಂಧಿನಗರದಲ್ಲಿರುವ ಗಿಫ್ಟ್ ಸಿಟಿಯಲ್ಲಿ ಐಎಫ್‌ಎಸ್‌ಸಿಎ ಪ್ರಧಾನ ಕಛೇರಿಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ
ಪ್ರಧಾನಮಂತ್ರಿಯವರು ಗಿಫ್ಟ್ ಸಿಟಿಯಲ್ಲಿ ಭಾರತದ ಮೊದಲ ಇಂಟರ್‌ನ್ಯಾಷನಲ್ ಬುಲಿಯನ್ ಎಕ್ಸ್ಚೇಂಜ್ – ಐಐಬಿಎಕ್ಸ್‌ ಅನ್ನು ಉದ್ಘಾಟಿಸಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜುಲೈ 28-29, 2022 ರಂದು ಗುಜರಾತ್ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಜುಲೈ 28ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಪ್ರಧಾನಮಂತ್ರಿಯವರು ಸಬರಕಾಂತದ ಗಧೋಡಾ ಚೌಕಿಯಲ್ಲಿ ಸಬರ್ ಡೈರಿಯ ಬಹು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ನಂತರ, ಪ್ರಧಾನಮಂತ್ರಿಯವರು ಚೆನ್ನೈಗೆ ಪ್ರಯಾಣ ಬೆಳೆಸುವರು ಮತ್ತು ಸಂಜೆ 6 ಗಂಟೆಗೆ ಚೆನ್ನೈನ ಜೆಎಲ್ಎನ್ ಒಳಾಂಗಣ ಕ್ರೀಡಾಂಗಣದಲ್ಲಿ 44ನೇ ಚೆಸ್ ಒಲಿಂಪಿಯಾಡ್ ಅನ್ನು ಉದ್ಘಾಟಿಸಲಿದ್ದಾರೆ.

ಜುಲೈ 29ರಂದು ಬೆಳಗ್ಗೆ 10 ಗಂಟೆಗೆ ಪ್ರಧಾನಮಂತ್ರಿಯವರು ಅಣ್ಣಾ ವಿಶ್ವವಿದ್ಯಾಲಯದ 42ನೇ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ನಂತರ ಅವರು ಗಿಫ್ಟ್ ಸಿಟಿಗೆ ಭೇಟಿ ನೀಡಲು ಗಾಂಧಿನಗರಕ್ಕೆ ಪ್ರಯಾಣಿಸಲಿದ್ದಾರೆ, ಅಲ್ಲಿ ಅವರು ಸಂಜೆ 4ಗಂಟೆಗೆ ವಿವಿಧ ಯೋಜನೆಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.

ಗುಜರಾತ್ ನಲ್ಲಿ ಪ್ರಧಾನಮಂತ್ರಿ

    ಸರ್ಕಾರದ ಪ್ರಮುಖ ಗಮನವು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವುದು ಮತ್ತು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಹೆಚ್ಚು ಉತ್ಪಾದಕವನ್ನಾಗಿಸುವುದು. ಈ ದಿಸೆಯಲ್ಲಿ ಮತ್ತೊಂದು ಹೆಜ್ಜೆಯಾಗಿ, ಜುಲೈ 28 ರಂದು ಪ್ರಧಾನಮಂತ್ರಿಯವರು ಸಬರ್ ಡೈರಿಗೆ ಭೇಟಿ ನೀಡಲಿದ್ದಾರೆ ಮತ್ತು 1,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಬಹು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ಸ್ಥಳೀಯ ರೈತರು ಮತ್ತು ಹಾಲು ಉತ್ಪಾದಕರನ್ನು ಸಬಲೀಕರಣಗೊಳಿಸುತ್ತವೆ ಮತ್ತು ಅವರ ಆದಾಯವನ್ನು ಹೆಚ್ಚಿಸುತ್ತವೆ. ಇದು ಈ ಪ್ರದೇಶದ ಗ್ರಾಮೀಣ ಆರ್ಥಿಕತೆಗೆ ಉತ್ತೇಜನವನ್ನು ನೀಡುತ್ತದೆ.

ಪ್ರತಿ ದಿನ ಸುಮಾರು 120 ಮಿಲಿಯನ್ ಟನ್ (ಎಂಟಿಪಿಡಿ) ಸಾಮರ್ಥ್ಯದ ಸಬರ್ ಡೈರಿಯಲ್ಲಿ ಪೌಡರ್ ಘಟಕವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇಡೀ ಯೋಜನೆಯ ಒಟ್ಟು ವೆಚ್ಚ ರೂ. 300 ಕೋಟಿ ಗಿಂತ ಹೆಚಾಗಿದೆ. ಘಟಕದ ವಿನ್ಯಾಸವು ಜಾಗತಿಕ ಆಹಾರ ಸುರಕ್ಷತೆ ಮಾನದಂಡಗಳನ್ನು ಪೂರೈಸುತ್ತದೆ. ಇದು ಬಹುತೇಕ ಶೂನ್ಯ ಹೊರಸೂಸುವಿಕೆಯೊಂದಿಗೆ ಹೆಚ್ಚು ಶಕ್ತಿಯ ದಕ್ಷತೆಯನ್ನು ಹೊಂದಿದೆ. ಘಟಕವು ಆಧುನಿಕ ಮತ್ತು ಸಂಪೂರ್ಣ ಸ್ವಯಂಚಾಲಿತ ಬೃಹತ್ ಪ್ಯಾಕಿಂಗ್ ಲೈನ್ ಅನ್ನು ಹೊಂದಿದೆ.

ಪ್ರಧಾನಮಂತ್ರಿಯವರು ಸಬರ್ ಡೈರಿಯಲ್ಲಿ ಅಸೆಪ್ಟಿಕ್ ಮಿಲ್ಕ್ ಪ್ಯಾಕೇಜಿಂಗ್ ಘಟಕವನ್ನು ಉದ್ಘಾಟಿಸಲಿದ್ದಾರೆ. ಇದು ಅತ್ಯಾಧುನಿಕ ಘಟಕವಾಗಿದ್ದು, ದಿನಕ್ಕೆ 3 ಲಕ್ಷ ಲೀಟರ್ ಸಾಮರ್ಥ್ಯ ಹೊಂದಿದೆ. ಸುಮಾರು 125 ಕೋಟಿ ರೂ.ಗಳ ಒಟ್ಟು ಹೂಡಿಕೆಯೊಂದಿಗೆ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.ಘಟಕವು ಹೆಚ್ಚು ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನದೊಂದಿಗೆ ಆಧುನಿಕ ಯಾಂತ್ರೀಕೃತಗೊಂಡ ವ್ಯವಸ್ಥೆಯನ್ನು ಹೊಂದಿದೆ. ಈ ಯೋಜನೆಯು ಹಾಲು ಉತ್ಪಾದಕರಿಗೆ ಉತ್ತಮ  ಹಣದ ಗಳಿಕೆಯನ್ನು  ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿಯವರು ಸಬರ್ ಚೀಸ್ ಮತ್ತು ವೇ ಡ್ರೈಯಿಂಗ್ ಪ್ಲಾಂಟ್ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಯೋಜನೆಯ ಅಂದಾಜು ವೆಚ್ಚ ಸುಮಾರು ರೂ. 600 ಕೋಟಿ.  ಘಟಕವು  ಚೆಡ್ಡರ್ ಚೀಸ್ (20 MTPD), ಮೊಝ್ಝಾರೆಲ್ಲಾ ಚೀಸ್ (10 MTPD) ಮತ್ತು ಸಂಸ್ಕರಿಸಿದ ಚೀಸ್ (16 MTPD) ಅನ್ನು ತಯಾರಿಸುತ್ತದೆ. ಚೀಸ್ ತಯಾರಿಕೆಯ ಸಮಯದಲ್ಲಿ ಉತ್ಪತ್ತಿಯಾಗುವ ಮಜ್ಜಿಗೆ 40 MTPD ಸಾಮರ್ಥ್ಯವನ್ನು ಹೊಂದಿರುವ ವೇ ಡ್ರೈಯಿಂಗ್ ಘಟಕದಲ್ಲಿ ಒಣಗಿಸಲಾಗುವುದು.

ಸಬರ್ ಡೈರಿಯು ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (ಜಿಸಿಎಮ್‌ಎಮ್‌ಎಫ್‌) ನ ಒಂದು ಭಾಗವಾಗಿದೆ, ಇದು ಅಮುಲ್ ಬ್ರಾಂಡ್‌ನ ಅಡಿಯಲ್ಲಿ ಸಂಪೂರ್ಣ ಶ್ರೇಣಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸುತ್ತದೆ ಮತ್ತು ಮಾರಾಟ ಮಾಡುತ್ತದೆ.

ಜುಲೈ 29 ರಂದು ಗಾಂಧಿನಗರದಲ್ಲಿರುವ ಗಿಫ್ಟ್ ಸಿಟಿಗೆ ಪ್ರಧಾನಮಂತ್ರಿಯವರು ಭೇಟಿ ನೀಡಲಿದ್ದಾರೆ. ಗಿಫ್ಟ್‌ ನಗರವನ್ನು (ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ) ಭಾರತಕ್ಕೆ ಮಾತ್ರವಲ್ಲದೆ ವಿಶ್ವಕ್ಕೆ ಹಣಕಾಸು ಮತ್ತು ತಂತ್ರಜ್ಞಾನ ಸೇವೆಗಳಿಗೆ ಒಂದು ಸಂಯೋಜಿತ ಕೇಂದ್ರವಾಗಿ ರೂಪಿಸಲಾಗಿದೆ.

ಭಾರತದಲ್ಲಿನ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳಲ್ಲಿ (ಐಎಫ್‌ಎಸ್‌ಸಿ) ಹಣಕಾಸು ಉತ್ಪನ್ನಗಳು, ಹಣಕಾಸು ಸೇವೆಗಳು ಮತ್ತು ಹಣಕಾಸು ಸಂಸ್ಥೆಗಳ ಅಭಿವೃದ್ಧಿ ಮತ್ತು ನಿಯಂತ್ರಣಕ್ಕಾಗಿ ಏಕೀಕೃತ ನಿಯಂತ್ರಕವಾದ ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರದ (ಐಎಫ್‌ಎಸ್‌ಸಿಎ) ಪ್ರಧಾನ ಕಛೇರಿಯ ಕಟ್ಟಡದ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಲಿದ್ದಾರೆ. ಪ್ರಮುಖ ಅಂತಾರಾಷ್ಟ್ರೀಯ ಹಣಕಾಸು ಕೇಂದ್ರವಾಗಿ ಜಿಐಎಫ್‌ಟಿ-ಐಎಫ್‌ಎಸ್‌ ಸಿ ಯ ಬೆಳೆಯುತ್ತಿರುವ ಪ್ರಾಮುಖ್ಯತೆ ಮತ್ತು ಸ್ಥಾನವನ್ನು   ಪ್ರತಿಬಿಂಬಿಸುವ ಈ ಕಟ್ಟಡವನ್ನು ಆಕರ್ಷಕ ರಚನೆಯಾಗಿ ರೂಪಿಸಲಾಗಿದೆ.

ಪ್ರಧಾನಮಂತ್ರಿಯವರು ಇಂಡಿಯಾ ಇಂಟರ್‌ನ್ಯಾಶನಲ್ ಬುಲಿಯನ್ ಎಕ್ಸ್‌ಚೇಂಜ್ (ಐಐಬಿಎಕ್ಸ್) ಅನ್ನು ಪ್ರಾರಂಭಿಸಲಿದ್ದಾರೆ, ಜಿಐಎಫ್‌ಟಿ-ಐಎಫ್‌ಎಸ್‌ ಸಿಯಲ್ಲಿ ಭಾರತದ ಮೊದಲ ಅಂತರರಾಷ್ಟ್ರೀಯ ಬುಲಿಯನ್ ಎಕ್ಸ್‌ಚೇಂಜ್. ಐಐಬಿಎಕ್ಸ್ ಭಾರತದಲ್ಲಿ ಚಿನ್ನದ ಆರ್ಥಿಕತೆಗೆ ಉತ್ತೇಜನವನ್ನು   ನೀಡುವುದರ ಜೊತೆಗೆ ಜವಾಬ್ದಾರಿಯುತ ಮೂಲ ಮತ್ತು ಗುಣಮಟ್ಟದ ಭರವಸೆಯೊಂದಿಗೆ ಸಮರ್ಥ ಬೆಲೆಯ ಅನ್ವೇಷಣೆಯನ್ನು ಸುಗಮಗೊಳಿಸುತ್ತದೆ. ಇದು ಜಾಗತಿಕ ಬುಲಿಯನ್ ಮಾರುಕಟ್ಟೆಯಲ್ಲಿ ತನ್ನ ತಕ್ಕದಾದ ಸ್ಥಾನವನ್ನು ಪಡೆಯಲು ಮತ್ತು ಸಮಗ್ರತೆ ಮತ್ತು ಗುಣಮಟ್ಟದೊಂದಿಗೆ ಜಾಗತಿಕ ಮೌಲ್ಯ ಸರಪಳಿಯನ್ನು ಪೂರೈಸಲು ಭಾರತಕ್ಕೆ ಅಧಿಕಾರ ನೀಡುತ್ತದೆ. ಜಾಗತಿಕ ಬೆಳ್ಳಿಯ ಬೆಲೆಯ ಮೇಲೆ ಪ್ರಭಾವ ಬೀರಲು ಭಾರತವನ್ನು ಪ್ರಮುಖ ಗ್ರಾಹಕನನ್ನಾಗಿ ಸಕ್ರಿಯಗೊಳಿಸಲು ಭಾರತ ಸರ್ಕಾರದ ಬದ್ಧತೆಯನ್ನು ಐಐಬಿಎಕ್ಸ್ ಶಕ್ತಗೊಳಿಸುತ್ತದೆ.
 
ಪ್ರಧಾನಮಂತ್ರಿಯವರು ಎನ್‌ಎಸ್‌ಇ ಐಎಫ್‌ಎಸ್‌ಸಿ-ಎಸ್‌ಜಿಎಕ್ಸ್‌-ಕನೆಕ್ಟ್ ಅನ್ನು ಸಹ ಉದ್ಘಾಟಿಸಲಿದ್ದಾರೆ. ಇದು ಗಿಫ್ಟ್  ಇಂಟರ್‌ ನ್ಯಾಷನಲ್ ಫೈನಾನ್ಷಿಯಲ್ ಸರ್ವೀಸಸ್ ಸೆಂಟರ್ (ಐಎಫ್‌ಎಸ್‌ಸಿ) ಮತ್ತು ಸಿಂಗಾಪುರ್ ಎಕ್ಸ್ಚೇಂಜ್ ಲಿಮಿಟೆಡ್ (ಎಸ್‌ಜಿಎಕ್ಸ್) ನಲ್ಲಿ ಎನ್‌ಎಸ್‌ಇ ನ ಅಂಗಸಂಸ್ಥೆಯ ನಡುವಿನ ಚೌಕಟ್ಟಾಗಿದೆ. ಕನೆಕ್ಟ್ ಅಡಿಯಲ್ಲಿ, ಸಿಂಗಾಪುರ್ ಎಕ್ಸ್‌ಚೇಂಜ್‌ನ ಸದಸ್ಯರು ಇರಿಸಿರುವ ನಿಫ್ಟಿ ಉತ್ಪನ್ನಗಳ ಮೇಲಿನ ಎಲ್ಲಾ ಆರ್ಡರ್‌ಗಳನ್ನು ಎನ್‌ಎಸ್‌ಇ-ಐಎಫ್‌ಎಸ್‌ಸಿ ಆರ್ಡರ್ ಮ್ಯಾಚಿಂಗ್ ಮತ್ತು ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗೆ ರವಾನಿಸಲಾಗುತ್ತದೆ ಮತ್ತು ಹೊಂದಾಣಿಕೆ ಮಾಡಲಾಗುತ್ತದೆ. ಭಾರತದಿಂದ ಮತ್ತು ಅಂತರರಾಷ್ಟ್ರೀಯ ನ್ಯಾಯವ್ಯಾಪ್ತಿಯಲ್ಲಿ ಬ್ರೋಕರ್-ಡೀಲರ್‌ಗಳು ಭಾಗವಹಿಸುವ ನಿರೀಕ್ಷೆಯಿದೆ. 
ಇ ಕನೆಕ್ಟ್ ಮೂಲಕ ವ್ಯಾಪಾರ ಉತ್ಪನ್ನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ. ಇದು ಜಿಐಎಫ್‌ಟಿ-ಐಎಫ್‌ಎಸ್‌ ಸಿಯಲ್ಲಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಹಣಕಾಸಿನ ಸ್ಥಿತಿಯನ್ನು (ದ್ರವ್ಯತೆಯನ್ನು) ಗಾಢವಾಗಿಸುತ್ತದೆ, ಹೆಚ್ಚು ಅಂತರರಾಷ್ಟ್ರೀಯ  ಪಾಲುದಾರರನ್ನು  ತರುತ್ತದೆ ಮತ್ತು ಜಿಐಎಫ್‌ಟಿ- ಐಎಫ್‌ಎಸ್‌ಸಿಯಲ್ಲಿನ ಆರ್ಥಿಕ ಪರಿಸರ ವ್ಯವಸ್ಥೆಯ ಮೇಲೆ ಧನಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ.

ತಮಿಳುನಾಡಿನಲ್ಲಿ ಪ್ರಧಾನಮಂತ್ರಿ

   44ನೇ ಚೆಸ್ ಒಲಿಂಪಿಯಾಡ್ ಜುಲೈ 28 ರಂದು ಭವ್ಯ ಉದ್ಘಾಟನೆಗೆ ಸಾಕ್ಷಿಯಾಗಲಿದ್ದು, ಚೆನ್ನೈನ ಜೆಎಲ್‌ಎನ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಉದ್ಘಾಟನಾ ಸಮಾರಂಭದಲ್ಲಿ   ಪ್ರಧಾನಮಂತ್ರಿ ಇದನ್ನು ಉದ್ಘಾಟಿಸಲಿದ್ದಾರೆ.

ಜೂನ್ 19, 2022 ರಂದು ಹೊಸದಿಲ್ಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ ಟಾರ್ಚ್  ರಿಲೇಗೆ ಪ್ರಧಾನಮಂತ್ರಿಯವರು ಚಾಲನೆ ನೀಡಿದರು. ಜ್ಯೋತಿಯು 40 ದಿನಗಳ ಕಾಲ ದೇಶದ 75 ಪ್ರಮುಖ ಸ್ಥಳಗಳಿಗೆ ಸುಮಾರು 20,000 ಕಿಲೋಮೀಟರ್‌ಗಳನ್ನು ಪ್ರಯಾಣಿಸಿತು. ಜ್ಯೋತಿಯ ಪ್ರಯಾಣವು ಸ್ವಿಟ್ಜರ್ಲೆಂಡ್‌ನ ಎಫ್‌ಐಡಿಇ ಕೇಂದ್ರ ಕಚೇರಿಗೆ ಹೋಗುವ ಮೊದಲು ಮಹಾಬಲಿಪುರಂನಲ್ಲಿ ಕೊನೆಗೊಳ್ಳುತ್ತದೆ.

44ನೇ ಚೆಸ್ ಒಲಿಂಪಿಯಾಡ್ ಚೆನ್ನೈನಲ್ಲಿ ಜುಲೈ 28 ರಿಂದ ಆಗಸ್ಟ್ 9, 2022 ರವರೆಗೆ ನಡೆಯುತ್ತಿದೆ. 1927 ರಿಂದ ಆಯೋಜಿಸಲಾಗುತ್ತಿರುವ ಪ್ರತಿಷ್ಠಿತ ಸ್ಪರ್ಧೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಮತ್ತು 30 ವರ್ಷಗಳ ನಂತರ ಏಷ್ಯಾದಲ್ಲಿ ಆಯೋಜಿಸಲಾಗುತ್ತಿದೆ. 187 ದೇಶಗಳು ಭಾಗವಹಿಸುವ ಮೂಲಕ, ಇದು ಯಾವುದೇ ಚೆಸ್ ಒಲಿಂಪಿಯಾಡ್‌ನಲ್ಲಿ ಅತಿದೊಡ್ಡ ಸ್ಪರ್ಧೆಯಾಗಿದೆ. 6 ತಂಡಗಳಾದ್ಯಂತ 30 ಆಟಗಾರರನ್ನು ಒಳಗೊಂಡಿರುವ ಸ್ಪರ್ಧೆಯಲ್ಲಿ ಭಾರತವು ತನ್ನ ಅತಿದೊಡ್ಡ ತಂಡವನ್ನು ಕಣಕ್ಕಿಳಿಸಿದೆ.

ಜುಲೈ 29 ರಂದು ಚೆನ್ನೈನಲ್ಲಿ ಪ್ರತಿಷ್ಠಿತ ಅಣ್ಣಾ ವಿಶ್ವವಿದ್ಯಾಲಯದ 42 ನೇ ಘಟಿಕೋತ್ಸವದಲ್ಲಿ ಪ್ರಧಾನ ಮಂತ್ರಿಯವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 69 ಚಿನ್ನದ ಪದಕ ವಿಜೇತರಿಗೆ ಚಿನ್ನದ ಪದಕ ಹಾಗೂ ಪ್ರಮಾಣ ಪತ್ರ ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಅಣ್ಣಾ ವಿಶ್ವವಿದ್ಯಾಲಯವನ್ನು  1978ರ ಸೆಪ್ಟೆಂಬರ್ 4ರಂದು ಸ್ಥಾಪಿಸಲಾಯಿತು. ಇದಕ್ಕೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ ಹೆಸರನ್ನು ಇಡಲಾಗಿದೆ. ಇದು 13 ಘಟಕ ಕಾಲೇಜುಗಳು, 494 ಸಂಯೋಜಿತ ಕಾಲೇಜುಗಳು ತಮಿಳುನಾಡಿನಲ್ಲಿವೆ ಮತ್ತು ತಿರುನೇಲ್ವೇಲಿ, ಮಧುರೈ ಮತ್ತು ಕೊಯಮತ್ತೂರಿನಲ್ಲಿ  ತಲಾ ಒಂದು ಪ್ರಾದೇಶಿಕ ಕ್ಯಾಂಪಸ್‌ಗಳನ್ನು ಹೊಂದಿದೆ. 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...

Prime Minister Shri Narendra Modi paid homage today to Mahatma Gandhi at his statue in the historic Promenade Gardens in Georgetown, Guyana. He recalled Bapu’s eternal values of peace and non-violence which continue to guide humanity. The statue was installed in commemoration of Gandhiji’s 100th birth anniversary in 1969.

Prime Minister also paid floral tribute at the Arya Samaj monument located close by. This monument was unveiled in 2011 in commemoration of 100 years of the Arya Samaj movement in Guyana.