ರಕ್ಷಣಾ ಇಲಾಖೆಯಲ್ಲಿ ಸ್ವಾವಲಂಬನೆ, ವಡೋದರದಲ್ಲಿ ಸಿ-295 ಯುದ್ಧ ವಿಮಾನ ಉತ್ಪಾದನಾ ಸೌಲಭ್ಯಕ್ಕೆ ಶಿಲಾನ್ಯಾಸ ನೆರವೇರಿಸಲಿರುವ ಪ್ರಧಾನಮಂತ್ರಿ
ದೇಶದಲ್ಲಿ ಇದು ಮೊದಲ ಖಾಸಗಿ ವಲಯದ ಯುದ್ಧ ವಿಮಾನ ಉತ್ಪಾದನಾ ಸೌಲಭ್ಯವಾಗಲಿದೆ
ಈ ಪ್ರದೇಶದಲ್ಲಿ ನೀರಿನ ಪೂರೈಕೆಯನ್ನು ವೃದ್ಧಿಸುವ ಸಲುವಾಗಿ 8000 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿರುವ ಯೋಜನೆ ಥರಾಡ್, ಬನಸ್ಕಾಂತದಲ್ಲಿ ಪ್ರಾರಂಭ
ಜಂಬುಗೋಡ, ಪಂಚಮಹಲ್ ನಲ್ಲಿ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕು ಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
ಅಹ್ಮದಾಬಾದ್ ನ ಅಸರ್ವದಲ್ಲಿ 2,900 ಕೋಟಿ ರೂಪಾಯಿ ವೆಚ್ಚದ ರೈಲ್ವೆ ಯೋಜನೆಗಳನ್ನು ಸಮರ್ಪಿಸಲಿರುವ ಪ್ರಧಾನಮಂತ್ರಿ
ಕೇವಾಡಿಯಾದಲ್ಲಿ ರಾಷ್ಟ್ರೀಯ ಏಕತಾ ದಿನ ಸಂಭ್ರಮದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಮಂತ್ರಿ
ಆರಂಭ್ 4.0 ರಡಿ 97 ನೇ ಸಾಮಾನ್ಯ ಪ್ರತಿಷ್ಟಾನ ಕೋರ್ಸ್ ನ ಅಧಿಕಾರಿ ಹುದ್ದೆಯ ತರಬೇತುದಾರರನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಮಂತ್ರಿ
ಕೇವಾಡಿಯಾದಲ್ಲಿ ಜಟಿಲ ಉದ್ಯಾನವನ ಮತ್ತು ಮಿಯಾವಕಿ – ಎರಡು ಹೊಸ ಪ್ರವಾಸಿ ಆಕರ್ಷಣೀಯ ತಾಣಗಳನ್ನು ಸಮರ್ಪಿಸಲಿರುವ ಪ್ರಧಾನಮಂತ್ರಿ
ರಾಜಸ್ಥಾನದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರು ಮತ್ತು ಬೆಳಕಿಗೆ ಬಾರದ ಬುಡಕಟ್ಟು ನಾಯಕರಿಗೆ ಗೌರವ ಸಲ್ಲಿಸುವ ‘ಮಂಗ್ರಾಹ್ ಧಮ್ ಕಿ ಗೌರವ್ ಗಾಥ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಮಂತ್ರ

2022 ರ ಅಕ್ಟೋಬರ್ 30 ರಿಂದ ನವೆಂಬರ್ 1 ರ ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಅವರು ಗುಜರಾತ್ ಮತ್ತು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಅಕ್ಟೋಬರ್ 30 ರಂದು ಪ್ರಧಾನಮಂತ್ರಿ ಅವರು ವಡೋದರದಲ್ಲಿ ಸಿ-295 ಯುದ್ಧ ವಿಮಾನ ಉತ್ಪಾದನಾ ಸೌಲಭ್ಯಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.  

ಅಕ್ಟೋಬರ್ 31 ರಂದು ಪ್ರಧಾನಮಂತ್ರಿ ಅವರು ಕೇವಾಡಿಯಾಗೆ ಭೇಟಿ ನೀಡಲಿದ್ದಾರೆ. ಬಳಿಕ ಸರ್ದಾರ್ ಪಟೇಲ್ ಅವರ ಏಕತಾ ಪ್ರತಿಮೆಗೆ ಅವರು ಗೌರವ ಸಮರ್ಪಿಸಲಿದ್ದಾರೆ. ತರುವಾಯ ಅವರು ರಾಷ್ಟ್ರೀಯ ಏಕತಾ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆರಂಭ್ 4.0 ರಡಿ 97 ನೇ ಸಾಮಾನ್ಯ ಪ್ರತಿಷ್ಟಾನ ಕೋರ್ಸ್ ನ ಅಧಿಕಾರಿ ಹುದ್ದೆಗಳ ತರಬೇತುದಾರರನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಮಾತನಾಡಲಿದ್ದಾರೆ. ಬಳಿಕ ಪ್ರಧಾನಮಂತ್ರಿ ಅವರು ಬನಸ್ಕಂತಾ ಜಿಲ್ಲೆಯ ಥರಾಡ್ ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.  ಅಹ್ಮದಾಬಾದ್ ನಲ್ಲಿ ಪ್ರಮುಖ ರೈಲ್ವೆ ಯೋಜನೆಗಳನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ನವೆಂಬರ್ 1 ರಂದು ಪ್ರಧಾನಮಂತ್ರಿ ಅವರು ರಾಜಸ್ಥಾನದ ಮನ್ಸ್ ವಾರ ಜಿಲ್ಲೆಯಯಲ್ಲಿ  ‘ಮಂಗರಹ್ ಧಮ್ ಕಿ ಗೌರವ್ ಗಾಥ’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದಾದ ನಂತರ ಗುಜರಾತ್ ನ ಪಂಚಮಹಲ್ ನ ಜಂಬುಗ್ಹೋಡದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ವಡೋದರದಲ್ಲಿ ಪ್ರಧಾನಮಂತ್ರಿ

ದೇಶದ ಮೊದಲ ಯುದ್ಧ ವಿಮಾನ ಉತ್ಪಾದನಾ ಸೌಲಭ್ಯವಾದ ಸಿ-295 ಯುದ್ಧ ವಿಮಾನ ಉತ್ಪಾದನಾ ಸೌಲಭ್ಯ ಕೇಂದ್ರಕ್ಕೆ ಪ್ರಧಾನಮಂತ್ರಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಸೌಲಭ್ಯವನ್ನು ಸ್ಪೇನ್ ನ ಏರ್ ಡಿಫೆನ್ಸ್ ಅಂಡ್ ಸ್ಪೇಸ್ ಹಾಗೂ ಟಾಟಾ ಅಡ್ವಾನ್ಸಡ್ ನಡುವೆ ಭಾರತೀಯ ವಾಯುಪಡೆಗೆ 40 ಸಿ-295 ಯುದ್ಧ ವಿಮಾನಗಳನ್ನು ಉತ್ಪಾದಿಸುತ್ತಿದ್ದು, ವಿಮಾನಗಳ ಬಳಕೆಗೆ ಅನುವು ಮಾಡಿಕೊಡಲಾಗುತ್ತಿದೆ. ಈ ಸೌಲಭ್ಯ ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಹಾಗೂ ಖಾಸಗಿ ವಲಯವನ್ನು ರಕ್ಷಣಾ ಇಲಾಖೆಗೆ ಮುಕ್ತಗೊಳಿಸುವ ಸಾಮರ್ಥ್ಯಕ್ಕೆ ಇದು ನೆರವಾಗಲಿದೆ. ಸ್ವಾವಲಂಬಿ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬಾಹ್ಯಾಕಾಶ ಕೈಗಾರಿಕಾ ವಲಯದಲ್ಲಿ ಆಯೋಜಿಸಲಾದ ತಾಂತ್ರಿಕ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ದಾಪುಗಾಲಿಡುವ ಪ್ರದರ್ಶನ ಕೇಂದ್ರಕ್ಕೆ ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ ಭೇಟಿ ನೀಡಲಿದ್ದಾರೆ.   

ಕೇವಾಡಿಯಾದಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಅವರ ದೂರದೃಷ್ಟಿ ನಾಯಕತ್ವದ ಪಥದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನವನ್ನು 2014 ರಿಂದ ಏಕತಾ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಅಕ್ಟೋಬರ್ 31 ರಂದು ರಾಷ್ಟ್ರೀಯ ಏಕತಾ ದಿನವನ್ನು ಆಚರಿಸುತ್ತಿದ್ದು, ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಸಮರ್ಪಣಾ ಭಾವದಿಂದ ಬಲಪಡಿಸುವ ಉದ್ದೇಶ ಹೊಂದಲಾಗಿದೆ. ಕೇವಾಡಿಯಾದ ಏಕತಾ ಪ್ರತಿಮೆ ಬಳಿ ಆಯೋಜಿಸಿರುವ ರಾಷ್ಟ್ರೀಯ ಏಕತಾ ದಿನ ಸಂಭ್ರಮದಲ್ಲಿ ಪ್ರಧಾನಮಂತ್ರಿ ಅವರು ಭಾಗಿಯಾಗಲಿದ್ದಾರೆ. ರಾಷ್ಟ್ರೀಯ ಏಕತಾ ದಿನದ ಕಾರ್ಯಕ್ರಮದಲ್ಲಿ ಬಿ.ಎಸ್.ಎಫ‍್ ಒಳಗೊಂಡಂತೆ ಐದು ರಾಜ್ಯಗಳ ಪೊಲೀಸ್ ಪಡೆಗಳು, ಉತ್ತರ ವಲಯ [ಹರ್ಯಾಣ], ಪಶ್ಚಿಮ ವಲಯ [ಮಧ್ಯ ಪ್ರದೇಶ], ದಕ್ಷಿಣ ವಲಯ [ತೆಲಂಗಾಣ], ಪೂರ್ವ ವಲಯ [ಒಡಿಶಾ] ಮತ್ತು ಈಶಾನ್ಯ ವಲಯ [ತ್ರಿಪುರ] ತಲಾ ಒಂದೊಂದು ಪಡೆಗಳು ಪಾಲ್ಗೊಳ್ಳಲಿವೆ. ಇದಲ್ಲದೇ 2022 ರ ಕಾಮನ್ ವೆಲ್ತ್ ಕ್ರೀಡಾಕೂಟ 2022 ರಲ್ಲಿ ಪೊಲೀಸ್ ಕ್ರೀಡಾ ಪದಕಗಳನ್ನು ಗೆದ್ದ ಆರು ಪೊಲೀಸ್ ಪಡೆಗಳು ಸಹ ಪಾಲ್ಗೊಳ್ಳಲಿವೆ.  

ಅಂಬಾಜಿ ಪ್ರದೇಶದ ಬುಡಕಟ್ಟು ಮಕ್ಕಳ ಸಂಗೀತ ಬ್ಯಾಂಡ್ ಪ್ರದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದೆ. ಬ್ಯಾಂಡ್ ಸದಸ್ಯರು ಒಂದು ಕಾಲದಲ್ಲಿ ಅಂಬಾಜಿ ದೇವಾಲಯದಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು. ಕಳೆದ ತಿಂಗಳು ಅಂಬಾಜಿಗೆ ಪ್ರಧಾನಮಂತ್ರಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಈ ಮಕ್ಕಳು ಅವರ ಸಮ್ಮುಖದಲ್ಲಿ ಪ್ರದರ್ಶನ ನೀಡಿದ್ದರು.  ಎನ್.ಸಿ.ಸಿಯಿಂದ ‘ಹಮ್ ಏಕ್ ಹೈ ಹಮ್ ಶ್ರೇಷ್ಠ್ ಹೈ’ ವಿಷಯ ಕುರಿತು ವಿಶೇಷ ಪ್ರದರ್ಶನ ಏರ್ಪಡಿಸಿದ್ದು, ಇದು ಕೂಡ ಗಮನ ಸೆಳೆಯುವ ಕಾರ್ಯಕ್ರಮದಲ್ಲಿ ಒಂದಾಗಿದೆ ಮತ್ತು ಏಕ್ ಭಾರತ್ ಶ್ರೇಷ್ಠ್ ಭಾರತ್ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದ್ದು, ಇಲ್ಲಿ ಏಕ್ ಭಾರತ್ ಶ್ರೇಷ್ಠ್ ಭಾರತ್ ನಡಿ ಜೋಡಿ ರಾಜ್ಯಗಳು ತನ್ನ ಸಂಸ್ಕೃತಿಯನ್ನು ಅನಾವರಣಗೊಳಿಸಲಿವೆ. ಆರಂಭ್ 4.0 ರಡಿ 97 ನೇ ಸಾಮಾನ್ಯ ಪ್ರತಿಷ್ಠಾನ ಕೋರ್ಸ್ ನ ಅಧಿಕಾರಿ ವರ್ಗದ ಹುದ್ದೆಯ ತರಬೇತುದಾರರನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಮಾತನಾಡಲಿದ್ದಾರೆ.  ಆರಂಭ್ ನ 4 ನೇ ಆವೃತ್ತಿಯನ್ನು “ಡಿಜಿಟಲ್ ಆಡಳಿತ: ಅಡಿಪಾಯ ಮತ್ತು ಗಡಿಗಳು” ಎಂಬ ವಿಷಯದ ಮೇಲೆ ಆಯೋಜಿಸಲಾಗಿದೆ. ಸಾರ್ವಜನಿಕ ಸೇವೆಯನ್ನ ಬಲಪಡಿಸಲು ಮತ್ತು ಕೊನೆಯ ಹಂತದವರೆಗೆ ವಿತರಣೆಯನ್ನು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿ ಮಾಡಲು ಮತ್ತು ತಾಂತ್ರಿಕ ಪರಿಹಾರಗಳನ್ನು ಬಳಸಿಕೊಳ್ಳುವ ಕುರಿತು ಅಧಿಕಾರಿಗಳಿಗೆ ತರಬೇತಿ ನೀಡಲು ನೆರವಾಗಲಿದೆ. 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 13 ಸೇವೆಗಳ 455 ಅಧಿಕಾರಿಗಳು ಈ ಬ್ಯಾಚ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ  

ಕೇವಾಡಿಯಾದಲ್ಲಿ ಜಟಿಲ ಉದ್ಯಾನವನ ಮತ್ತು ಮಿಯಾವಕಿ ಎಂಬ ಎರಡು ಹೊಸ ಪ್ರವಾಸಿ ಆಕರ್ಷಣೀಯ ತಾಣಗಳನ್ನು ಪ್ರಧಾನಮಂತ್ರಿ ಅವರು ಸಮರ್ಪಣೆ ಮಾಡಲಿದ್ದಾರೆ. ಜಟಿಲ ಉದ್ಯಾನವನ 3 ಎಕರೆ ಪ್ರದೇಶ ವಿಸ್ತಾರ ಹೊಂದಿದ್ದು, ಇದು ದೇಶದಲ್ಲಿಯೇ ಅತಿ ದೊಡ್ಡ ಜಟಿಲ ಉದ್ಯಾನವನವಾಗಿದೆ. ಇದು 2.1 ಕಿಲೋಮೀಟರ್ ಪಾದಚಾರಿ ಮಾರ್ಗವನ್ನು ಸಹ ಒಳಗೊಂಡಿದೆ. ಇದನ್ನು ಶ್ರೀಯಂತ್ರ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದು ಈ ಪ್ರದೇಶಕ್ಕೆ ಧನಾತ್ಮಕ ಶಕ್ತಿ ತುಂಬುತ್ತದೆ ಎಂದು ನಂಬಲಾಗಿದೆ. ಉದ್ಯಾನವನದಲ್ಲಿ 1.8 ಲಕ್ಷ ಗಿಡಗಳನ್ನು ನೆಟ್ಟಿದ್ದು, ಈ ಭೂ ಪ್ರದೇಶದ ಸೌಂದರ್ಯ ಹೆಚ್ಚಳಕ್ಕೆ ಇದು ನೆರವಾಗಿದೆ. ಮಿಯಾವಕಿ ಅರಣ‍್ಯವನ್ನು ಎರಡು ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಸ್ಥಳೀಯ ಉದ್ಯಾನ, ಮರದ ಉದ್ಯಾನ, ಹಣ್ಣಿನ ಉದ್ಯಾನ, ಔಷಧೀಯ ಉದ್ಯಾನ, ಮಿಶ್ರ ಜಾತಿಯ ಮಿಯಾವಕಿ ವಿಭಾಗ, ಡಿಜಿಟಲ್ ಪುನರ್ಮನನ ಕೇಂದ್ರಗಳನ್ನು ಇದು ಹೊಂದಿದೆ. ಜಪಾನಿನ ಸಸ್ಯ ಶಾಸ್ತ್ರಜ್ಞ ಅಕಿರಾ ಮಿಯಾವಕಿ ಅವರು ಅಭಿವೃದ್ಧಿಪಡಿಸಿದ ತಂತ್ರವನ್ನು ಬಳಸಿಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಕಡಿಮೆ ಸಮಯದಲ್ಲಿ ದಟ್ಟವಾದ ಸ್ಥಳೀಯ ಕಾಡುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.  

ಬನಸ್ಕಂತಾದಲ್ಲಿ ಪ್ರಧಾನಮಂತ್ರಿ

ಥರಾಡ್ ನ  ಬನಸ್ಕಂತಾಗೆ ಪ್ರಧಾನಮಂತ್ರಿ ಅವರು ಭೇಟಿ ನೀಡಲಿದ್ದಾರೆ. ಸಾರ್ವಜನಿಕ ಸಮಾರಂಭದಲ್ಲಿ 8000 ಕೋಟಿ ರೂಪಾಯಿ ಮೊತ್ತದ ಕುಡಿಯುವ ನೀರಿನ ಯೋಜನೆಗಳ ಕೆಲಸಕ್ಕೆ ಚಾಲನೆ ನೀಡಲಿದ್ದಾರೆ. 1,560 ಕೋಟಿ ರೂಪಾಯಿ ಮೊತ್ತದ ನರ್ಮದಾ ಮುಖ್ಯ ಕಾಲುವೆಯಿಂದ ದಂತಿವಾಡಾ ಕೊಳವೆ ಮಾರ್ಗದ ಕಸರಾಗೆ ಸಂಪರ್ಕ ಕಲ್ಪಿಸುವ ಹಲವಾರು ಕಾಮಗಾರಿಗಳಿಗೆ ಪ್ರಧಾನಮಂತ್ರಿ ಅವರು ಶಂಕು ಸ್ಥಾಪನೆ ಮಾಡಲಿದ್ದಾರೆ. ಈ ಯೋಜನೆಯಿಂದ ನೀರಿನ ಪೂರೈಕೆ ಹೆಚ್ಚಳವಾಗಲಿದೆ ಮತ್ತು ರೈತರಿಗೂ ಸಹ ನೀರಿನ ಪ್ರಯೋಜನವನ್ನು ಕಲ್ಪಿಸುತ್ತದೆ. ಇದೇ ಕಾರ್ಯಕ್ರಮ ಸಂದರ್ಭದಲ್ಲಿ ಹಲವಾರು ಯೋಜನೆಗಳನ್ನು ಪ್ರಕಟಿಸಲಾಗುತ್ತಿದ್ದು, ಸುಜಲಾಂ ಸಫಲಾಂ ಕಾಲುವೆ ಬಲಗೊಳಿಸುವ, ಕರ್ಮಾವತಿ ಸರೋವರದಿಂದ ಮುಕ್ತೇಶ್ವರ ಆಣೆಕಟ್ಟೆಯಿಂದ ಮೊಧೇರ -ಮೋತಿ ದುವ ಕೊಳವೆ ಮಾರ್ಗ ವಿಸ್ತರಣೆ ಕಾಮಗಾರಿ ಕೈಗೊಳ್ಳುವ,  ಸಂತಲ್ಪುರ್ ತಾಲ್ಲೂಕಿನ 11 ಹಳ್ಳಿಗಳಿಗೆ ಏತ ನೀರಾವರಿ ಸೌಲಭ್ಯ ಕಲ್ಪಿಸುವ ಕಾಮಗಾರಿ ತೆಗೆದುಕೊಳ್ಳುವ ಹಾಗೂ ಇತರೆ ಕಾಮಗಾರಿಗಳನ್ನು ಇದು ಒಳಗೊಂಡಿದೆ.  

ಅಹ್ಮದಾಬಾದ್ ನಲ್ಲಿ ಪ್ರಧಾನಮಂತ್ರಿ

ಅಹ್ಮದಾಬಾದ್ ನಲ್ಲಿ ಪ್ರಧಾನಮಂತ್ರಿ ಅವರು 2900 ಕೋಟಿ ರೂಪಾಯಿ ವೆಚ್ಚದ ಎರಡು ರೈಲ್ವೆ ಯೋಜನೆಗಳನ್ನು ಅಸರ್ವಾದಲ್ಲಿ ಸಮರ್ಪಿಸಲಿದ್ದಾರೆ. ಅಹ್ಮದಾಬಾದ್ [ಅಸರ್ವಾ] – ಹಿಮ್ಮಂತ್ ನಗರ್ – ಉದಯ್ ಪುರ್ ಗೇಜ್ ಮಾರ್ಗ ಬದಲಾವಣೆ ಹಾಗೂ ಲುನಿಧರ್ – ಜತೆಲ್ಸರ್ ಗೇಜ್ ಪರಿವರ್ತನೆ ಮಾರ್ಗ ಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಭಾವನ್ ನಗರ್ – ಜೆತಲ್ಸಾರ್ ಮತ್ತು ಅಸರ್ವಾ – ಉದಯ್ ಪುರ್ ನ ಎರಡು ಹೊಸ ಮಾರ್ಗಗಳಿಗೆ ಪ್ರಧಾನಮಂತ್ರಿ ಅವರು ಹಸಿರು ನಿಶಾನೆ ತೋರಲಿದ್ದಾರೆ.

ದೇಶಾದ್ಯಂತ ಯುನಿ ಗೇಜ್ ರೈಲು ವ್ಯವಸ್ಥೆ ಹೊಂದುವ ದೃಷ್ಟಿಯಿಂದ ರೈಲ್ವೆಯು ಅಸ್ತಿತ್ವದಲ್ಲಿರುವ ಬ್ರಾಡ್ ಗೇಜ್ ಅಲ್ಲದ ರೈಲ್ವೆ ಮಾರ್ಗಗಳನ್ನು ಬ್ರಾಡ್ ಗೇಜ್ ಗೆ ಪರಿವರ್ತಿಸುತ್ತಿದೆ. ಈ ಯೋಜನೆಗಳನ್ನು ಸಮರ್ಪಿಸುತ್ತಿರುವುದರಿಂದ ಪ್ರಧಾನಮಂತ್ರಿ ಅವರು ದೇಶವನ್ನು ಮತ್ತೊಂದು ಹೊಸ ದಿಕ್ಕಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಅಹ್ಮದಾಬಾದ್ [ಅಸರ್ವ] – ಹಿಮ್ಮಂತ್ ನಗರ್ – ಉದಯ್ ಪುರ್ ಗೇಜ್ ಪರಿವರ್ತನೆ ಮಾರ್ಗ ಸುಮಾರು 300 ಕಿಲೋಮೀಟರ್ ಉದ್ದವಿದೆ. ಇದರಿಂದ ಸಂಪರ್ಕ ಸುಧಾರಣೆಯಾಗಲಿದೆ ಮತ್ತು ಪ್ರವಾಸಿಗರು, ವ್ಯಾಪಾರಿಗಳು, ಉತ್ಪಾದಕ ಘಟಕಗಳು ಮತ್ತು ಈ ವಲಯದಲ್ಲಿ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ. ಉದ್ಯೋಗಾವಕಾಶಗಳ ಸೃಷ್ಟಿಗೆ ಪುಷ್ಟಿ ದೊರೆಯಲಿದೆ ಮತ್ತು ಈ ವಲಯದಲ್ಲಿ ಸಾಮಾಜಿಕ – ಆರ್ಥಿಕ ಬೆಳವಣಿಗೆಗೆ ಸಹಾಯವಾಗಲಿದೆ. 58 ಕಿಲೋಮೀಟರ್ ಲುನಿಧರ್-ಜೆತಲ್ಸರ್ ಗೇಜ್ ಪರಿವರ್ತನೆ ಮಾರ್ಗದಿಂದ ಪಿಪವವ್ ಬಂದರು ಮತ್ತು ವರೆವಲ್ ನ ಭಾವ್ ನಗರ ಹಾಗೂ ಪೋರ್ ಬಂದರು ಮಾರ್ಗಕ್ಕೆ ಇದು ಸನಿಹವಾಗಲಿದೆ. ಇದರಿಂದ ಈ ವಲಯದಲ್ಲಿ ಸರಕು ಸಾಗಾಣೆ ಸಾಮರ್ಥ್ಯ ವೃದ್ಧಿಯಾಗಲಿದ್ದು, ಇದರಿಂದ ಕನಲುಸ್ – ರಾಜ್ ಕೋಟ್ – ವಿರಮ್ ಗಮ್ ಮಾರ್ಗದ ಒತ್ತಡವನ್ನು ಕಡಿಮೆ ಮಾಡಲಿದೆ. ಇದರಿಂದ ಗಿರ್ ಅಭಯಾರಣ್ಯ, ಸೋಮನಾಥ ದೇವಾಲಯ, ದಿಯು ಮತ್ತು ಗಿರ್ನರ್ ಬೆಟ್ಟಪ್ರದೇಶಗಳಿಗೆ ತಡೆರಹಿತ ಸಂಪರ್ಕ ಸಾಧ್ಯವಾಗಲಿದ್ದು, ಈ ವಲಯದಲ್ಲಿ ಪ್ರವಾಸೋದ್ಯಮಕ್ಕೆ ಪುಷ್ಟಿ ದೊರೆಯಲಿದೆ.   

ಪಂಚಮಹಲ್ ನಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಅವರು ಪಂಚಮಹಲ್ ನ ಜಂಬುಘೋಡದಲ್ಲಿ 860 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ. ಗೋಧ‍್ರಾದಲ್ಲಿ ಅವರು ಹೊಸ ಶ್ರೀ ಗೋವಿಂದ ಗುರು ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಸಮರ್ಪಣೆ ಮಾಡಲಿದ್ದಾರೆ. ಅವರು ಸಂತ ಜೊರಿಯಾ ಪರಮೇಶ್ವರ್ ಪ್ರಾಥಮಿಕ ಶಾಲೆ ಮತ್ತು ವೇದಕ್ ನ ಸ್ಮಾರಕ ಹಾಗೂ ರಾಜ ರುಪ್ ಸಿಂಗ್ ನಾಯಕ್ ಪ್ರಾಥಮಿಕ ಶಾಲೆ ಮತ್ತು ದಂದಿಯಾಪುರದಲ್ಲಿನ ಸ್ಮಾರಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಗೋಧ್ರಾದಲ್ಲಿ ಕೇಂದ್ರೀಯ ವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಪ್ರಧಾನಮಂತ್ರಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಗೋಧ‍್ರಾ ವೈದ್ಯಕೀಯ ಕಾಲೇಜಿಗೆ ಅವರು ಇದೇ ಸಂದರ್ಭದಲ್ಲಿ ಶಿಲಾನ್ಯಾಸ ನೆರವೇರಿಸಲಿದ್ದಾರೆ ಹಾಗೂ 680 ಕೋಟಿ ರೂಪಾಯಿ ವೆಚ್ಚದ ಕೌಶಲ್ಯ – ದಿ ಸ್ಕಿಲ್ ಯೂನಿವರ್ಸಿಟಿ ವಿಸ್ತರಣೆ ಕಾಮಗಾರಿಗೂ ಚಾಲನೆ ನೀಡಲಿದ್ದಾರೆ.

ಬನ್ಸಾವಾರದಲ್ಲಿ ಪ್ರಧಾನಮಂತ್ರಿ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರ ಹಲವಾರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಜ್ಞಾತವಾಗಿ ಭಾಗಿಯಾದ ಬುಡಕಟ್ಟು ನಾಯಕರನ್ನು ಪರಿಚಯಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ನವೆಂಬರ್ 15 ರಂದು “ಜನ್ ಜಾತೀಯ ಗೌರವ್ ದಿವಸ್’ [ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮ ದಿನ]  ಆಚರಿಸುತ್ತಿದೆ. ಬುಡಕಟ್ಟು ಜನಾಂಗ ಸಮಾಜಕ್ಕೆ ನೀಡಿರುವ ಕೊಡುಗೆಗೆ ಮಾನ್ಯತೆ ನೀಡಲು ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ತ್ಯಾಗ ಬಲಿದಾನದ ಬಗ್ಗೆ ಅರಿವು ಹೆಚ್ಚಿಸಲು ದೇಶಾದ್ಯಂತ ಬುಡಕಟ್ಟು ಸಮುದಾಯದ ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದು, ರಾಜಸ್ಥಾನದ ಬನ್ಸ್ ವಾರಾದಲ್ಲಿ ‘ಮಂಗರಹ್ ಧಮ್ ಕಿ ಗೌರವ್ ಗೀತಾ’ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಪಾಲ್ಗೊಳ್ಳಲಿದ್ದು. ಬುಡಕಟ್ಟು ಜನಾಂಗದ ಅಜ್ಞಾತ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಭಿಲ್ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಗೋವಿಂದ್ ಗುರು ಅವರಿಗೆ ಗೌರವ ಸಮರ್ಪಿಸಲಿದ್ದಾರೆ ಹಾಗೂ ಈ ವಲಯದಲ್ಲಿ ಬುಡಕಟ್ಟು ಜನಾಂಗ ಹೆಚ್ಚಿರುವ ಮತ್ತು ಭಿಲ್ ಆದಿ ವಾಸಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮಂಗರಹ್ ಬೆಟ್ಟ ಪ್ರದೇಶ, ರಾಜಸ್ಥಾನ, ಗುಜರಾತ್ ಹಾಗೂ ಮಧ್ಯ ಪ್ರದೇಶ ರಾಜ್ಯಗಳಲ್ಲಿ ಭಿಲ್ ಸಮುದಾಯ ವಿಶೇಷ ಮಹತ್ವವನ್ನು ಹೊಂದಿದೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿಯೂ ಭಿಲ್ ಹಾಗೂ ಇತರೆ ಬುಡಕಟ್ಟು ಸಮುದಾಯಗಳು ಭಾಗಿಯಾಗಿತ್ತು ಮತ್ತು 1913 ರ ನವೆಂಬರ್ 17 ರಂದು ಮಂಗರಹ್ ಬೆಟ್ಟ ಪ್ರದೇಶದಲ್ಲಿ ಗುರು ಗೋವಿಂದ ಅವರ ಸಾರಥ್ಯದಲ್ಲಿ 1.5 ಲಕ್ಷ ಬುಡಕಟ್ಟು ಜನಾಂಗ ಜಮಾಯಿಸಿತ್ತು. ಬ್ರಿಟಿಷರು ಈ ಸಭೆಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಇದು ಮಂಗರಹ್ ಹತ್ಯಾಕಾಂಡಕ್ಕೆ ಕಾರಣವಾಯಿತು. ಅಲ್ಲಿ ಸುಮಾರು 1500 ಮಂದಿ ಬುಡಕಟ್ಟು ಜನ ಹುತಾತ್ಮರಾದರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi