ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 21-22, 2024 ರಂದು ಭೂತಾನ್ ದೇಶಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಈ ಭೇಟಿಯು ಭಾರತ ಮತ್ತು ಭೂತಾನ್ ನಡುವೆ ಆಗಾಗ ನಡೆಯುವ ಉನ್ನತ ಮಟ್ಟದ ವಿನಿಮಯದ ಸಂಪ್ರದಾಯಕ್ಕೆ ಅನುಗುಣವಾಗಿದೆ ಮತ್ತು ಭಾರತದ ನೆರೆಹೊರೆ ದೇಶಗಳ ಮೊದಲ ನೀತಿಗೆ ಪೂರಕವಾಗಿದೆ.
ಭೂತಾನ್ ಭೇಟಿಯ ಸಂದರ್ಭದಲ್ಲಿ, ಭೂತಾನ್ ನ ಮಹಾರಾಜ ಘನತೆವೆತ್ತ ಶ್ರೀ ಜಿಗ್ಮೆ ಖೇಸರ್ ನಾಮ್ ಗೈಲ್ ವಾಂಗ್ ಚುಕ್ ಮತ್ತು ಭೂತಾನ್ ನ ನಾಲ್ಕನೇ ಮಹಾರಾಜ ಘನತೆವೆತ್ತ ಶ್ರೀ ಹಿಸ್ ಮೆಜೆಸ್ಟಿ ಜಿಗ್ಮೆ ಸಿಂಗ್ಯೆ ವಾಂಗ್ ಚುಕ್ ಅವರು ಪ್ರಧಾನಮಂತ್ರಿಯವರನ್ನು ಸ್ವಾಗತಿಸಿ ಬರಮಾಡಿಕೊಳ್ಳಲಿದ್ದಾರೆ. ಇವರೊಂದಿಗೆ ಪ್ರಧಾನಮಂತ್ರಿಯವರು ಮಾತುಕತೆ ನಡೆಸಲಿದ್ದಾರೆ. ಭೂತಾನ್ ನ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ತ್ಶೆರಿಂಗ್ ಟೋಬ್ಗೇ ಅವರೊಂದಿಗೂ ಪ್ರಧಾನಮಂತ್ರಿಯವರು ಮಾತುಕತೆ ನಡೆಸಲಿದ್ದಾರೆ.
ನಂಬಿಕೆ, ತಿಳುವಳಿಕೆ ಮತ್ತು ಸದ್ಭಾವನೆಯಲ್ಲಿ ಬೇರೂರಿರುವ ಅನನ್ಯ ಮತ್ತು ನಿರಂತರ ಪಾಲುದಾರಿಕೆಯನ್ನು ಭಾರತ ಮತ್ತು ಭೂತಾನ್ ಪರಸ್ಪರ ಹಂಚಿಕೊಳ್ಳುತ್ತವೆ. ಎರಡೂ ದೇಶಗಳು ಪರಸ್ಪರ ಹಂಚಿಕೊಂಡ ಆಧ್ಯಾತ್ಮಿಕ ಪರಂಪರೆ ಮತ್ತು ಜನರೊಂದಿಗೆ ಉತ್ತಮ ಸಂಬಂಧಗಳು, ಭಾರತ ಮತ್ತು ಭೂತಾನ್ ನಡುವೆ ಪರಸ್ಪರ ದೀರ್ಘಕಾಲೀನ ಹಾಗೂ ವಿಶೇಷ ಸಂಬಂಧಗಳಿಗೆ ಆಳದ ಬಾಂಧವ್ಯತೆ ಮತ್ತು ಹೊಸ ಚೈತನ್ಯವನ್ನು ಸೇರಿಸುತ್ತವೆ. ಈ ಭೇಟಿಯು ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಆಸಕ್ತಿಯ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ನಮ್ಮ ಜನರ ಅನುಕೂಲಕ್ಕಾಗಿ ನಮ್ಮ ಅನುಕರಣೀಯ ಪಾಲುದಾರಿಕೆಯನ್ನು ವಿಸ್ತರಿಸುವ ಮತ್ತು ತೀವ್ರಗೊಳಿಸುವ ಮಾರ್ಗಗಳ ಕುರಿತು ಉದ್ದೇಶಪೂರ್ವಕವಾಗಿ ಎರಡೂ ಕಡೆಯವರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.