ಉತ್ತರ ಪ್ರದೇಶದ ಲಖನೌದಲ್ಲಿ ಫೆಬ್ರವರಿ 5, 2020 ರಂದು ನಡೆಯಲಿರುವ ರಕ್ಷಣಾ ಉತ್ಪನ್ನ DefExpo 2020 ಸಮಾರಂಭದ ಉದ್ಘಾಟನೆಯ ಅಧ್ಯಕ್ಷತೆಯನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ವಹಿಸಲಿದ್ದಾರೆ.
ಇದು ದ್ವೈವಾರ್ಷಿಕ ಬೃಹತ್ ರಕ್ಷಣಾ ಉತ್ಪನ್ನ DefExpo 11 ನೇ ಆವೃತ್ತಿಯಾಗಿದೆ. 1000 ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಪ್ರದರ್ಶಿಸಲು ಪೈಪೋಟಿಯಲ್ಲಿದ್ದು ಇದು ಈವರೆಗೆ ಭಾರತದಲ್ಲಿ ನಡೆದ ಪ್ರದರ್ಶನಗಳಲ್ಲೇ ಅತ್ಯಂತ ದೊಡ್ಡದಾಗಿದೆ.
‘ಭಾರತ: ಉದಯೋನ್ಮುಖ ರಕ್ಷಣಾ ಉತ್ಪಾದನಾ ಕೇಂದ್ರ’ ಎಂಬುದು ಈ ಪ್ರದರ್ಶನದ ವಿಷಯವಸ್ತುವಾಗಿದೆ. ರಕ್ಷಣಾ ಕ್ಷೇತ್ರದ ಪ್ರಮುಖ ತಂತ್ರಜ್ಞಾನಗಳನ್ನು ಒಂದೇ ಸೂರಿನಡಿ ತರುವುದು ಮತ್ತು ಸರ್ಕಾರ, ಖಾಸಗಿ ಉತ್ಪಾದಕರು ಹಾಗೂ ಸ್ಟಾರ್ಟ್ ಅಪ್ ಗಳಿಗೆ ಅಸಂಖ್ಯಾತ ಅವಕಾಶಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ದೇಶದ ವಾಯು ನೆಲೆ, ರಕ್ಷಣೆ ಮತ್ತು ಭದ್ರತಾ ಹಿತಾಸಕ್ತಿಗಳ ಸಂಪೂರ್ಣ ವಲಯವನ್ನು ಒಳಗೊಂಡಿರುತ್ತದೆ.
‘ರಕ್ಷಣಾ ವಲಯದ ಡಿಜಿಟಲೀಕರಣ’ ಎಂಬುದು ಪ್ರದರ್ಶನದ ಉಪ ವಿಷಯವಸ್ತುವಾಗಿದೆ. ಇದು ಮುಂಬರುವ ದಿನಗಳಲ್ಲಿ ಯುದ್ಧ ಭೂಮಿಯಲ್ಲಿ ಬಳಸಬಹುದಾದ ಹೊಸ ತಂತ್ರಜ್ಞಾನಗಳ ಅಳವಡಿಕೆ ಮೇಲೆಯೂ ಬೆಳಕು ಚೆಲ್ಲಲಿದೆ.
ಪ್ರಾರ್ಥನಾ ಕಾರ್ಯಕ್ರಮದ ನಂತರ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾರತ ಮತ್ತು ಉತ್ತರ ಪ್ರದೇಶ ಪೆವಿಲಿಯನ್ ಗಳಿಗೆ ಭೇಟಿ ನೀಡಲಿದ್ದಾರೆ.
ಸಾರ್ವಜನಿಕ ಮತ್ತು ಖಾಸಗಿ ವಲಯಗಳ ನಡುವಿನ ಧೃಡ ಸಹಭಾಗಿತ್ವವನ್ನು ವ್ಯಕ್ತಪಡಿಸುವ ‘ಇಂಡಿಯಾ ಪೆವಿಲಿಯನ್’ ಮುಂದಿನ ರಹದಾರಿಗೆ ಬಹು ಮುಖ್ಯವಾದ ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಸ್ ಎಂ ಇ)/ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂ ಎಸ್ ಎಂ ಇ) ನಾವೀಣ್ಯತೆಯ ಪರಿಸರ ವ್ಯವಸ್ಥೆಯನ್ನು ಪ್ರದರ್ಶಿಸಲಿದೆ.
ಉತ್ತರ ಪ್ರದೇಶ ಪೆವಿಲಿಯನ್ ಔದ್ಯಮಿಕ ಕೌಶಲ್ಯ ಮತ್ತು ರಾಜ್ಯದಲ್ಲಿ ಪರಿಗಣಿತ ರಕ್ಷಣಾ ಕಾರಿಡಾರ್ ನಲ್ಲಿ ಹೂಡಿಕೆದಾರರಿಗೆ ರಾಜ್ಯದ ಅಪಾರ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ. ಉತ್ತರ ಭಾರತದ ರಾಜ್ಯಗಳ ಶ್ರೀಮಂತ ಸಂಸ್ಕೃತಿ ಪ್ರದರ್ಶನಕ್ಕೆ ಉತ್ತರ ಪ್ರದೇಶ ಸರ್ಕಾರ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಸಮಾರಂಭ ನಡೆಯುವ ಸ್ಥಳದಲ್ಲಿ ವಿಶೇಷವಾಗಿ ನಿರ್ಮಿಸಿದ ಟೆಂಟ್ ಸಿಟಿ ಇಲ್ಲಿಗೆ ಭೇಟಿ ನೀಡುವವರಿಗೆ ವಿಶಿಷ್ಟ ಅನುಭವ ನೀಡಲಿದೆ.
ಎರಡು ಪೆವಿಲಿಯನ್ ಗಳಿಗೆ ಭೇಟಿ ನೀಡಿದ ನಂತರ ಪ್ರಧಾನ ಮಂತ್ರಿಯವರು ಭೂ ಸೇನೆಯ ಸಂಪೂರ್ಣ ಪ್ರದರ್ಶನ, ವಾಯು ಪಡೆಯ ವಿಮಾನ ಹಾರಾಟದ ಪ್ರದರ್ಶನ ಮತ್ತು ನೌಕಾಪಡೆಯ ಕಾರ್ಯತಂತ್ರ ಪ್ರದರ್ಶನಗಳ ಪ್ರದರ್ಶನದ ಅಧ್ಯಕ್ಷತೆವಹಿಸಲಿದ್ದಾರೆ.
ರಕ್ಷಣಾ ಉತ್ಪನ್ನ DefExpo 2020 ಸುಮಾರು 70 ಕ್ಕೂ ಹೆಚ್ಚು ರಾಷ್ಟ್ರಗಳು ಭಾಗವಹಿಸಲಿವೆ ಎಂಬ ನಿರೀಕ್ಷೆಯಿದ್ದು ಬೃಹತ್ ಅಂತಾರಾಷ್ಟ್ರೀಯ ರಕ್ಷಣಾ ಪ್ರದರ್ಶನಗಳ ಸರದಿಗೆ ಸೇರಲಿದೆ.
ಪ್ರದರ್ಶನದ ವೇಳೆ ಗಣನೀಯ ಸಂಖ್ಯೆಯಲ್ಲಿ ತಿಳುವಳಿಕೆ ಪತ್ರಕ್ಕೆ ಸಹಿ ಹಾಕುವ ನಿರೀಕ್ಷೆಯಿದ್ದು, ಹೊಸ ವ್ಯಾಪಾರ ಸಹಯೋಗಕ್ಕೆ ನಾಂದಿ ಹಾಡಲಿದೆ.