ಸೌರಾಷ್ಟ್ರ ಪಟೇಲ್ ಸೇವಾ ಸಮಾಜದ ವಸತಿ ನಿಲಯ ಹಂತ – 1 ರ ಕಟ್ಟಡದ ಭೂಮಿ ಪೂಜೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 15 ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ನೆರವೇರಿಸಲಿದ್ದಾರೆ.
ವಸತಿ ನಿಲಯದ ಕಟ್ಟಡ 1,500 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಒದಗಿಸಲಿದೆ. ವಿದ್ಯಾರ್ಥಿಗಳಿಗಾಗಿಯೇ ಮೀಸಲಾದ ಗ್ರಂಥಾಲಯ ಮತ್ತು ಸಭಾಂಗಣವನ್ನು ಇದು ಒಳಗೊಂಡಿದೆ. ವಸತಿ ನಿಲಯ ಹಂತ – 11 ರ ಕಟ್ಟಡದಲ್ಲಿ 500 ವಿದ್ಯಾರ್ಥಿನೀಯರಿಗೆ ಅವಕಾಶ ಕಲ್ಪಿಸುತ್ತಿದ್ದು, ಇದರ ಕೆಲಸ ಮುಂದಿನ ವರ್ಷ ಕಾರ್ಯಾರಂಭವಾಗಲಿದೆ.
ಸೌರಾಷ್ಟ್ರ ಪಟೇಲ್ ಸೇವಾ ಸಮಾಜ್ ಕುರಿತು;
ಸಮಾಜದಲ್ಲಿನ ದುರ್ಬಲ ವರ್ಗಗಳಿಗೆ ಶಿಕ್ಷಣ ಮತ್ತು ಸಮಾಜಿಕ ಪರಿವರ್ತನೆ ತರುವ ಉದ್ದೇಶದಿಂದ 1983 ರಲ್ಲಿ ಈ ಸಂಸ್ಥೆ ಸ್ಥಾಪನೆಯಾಗಿದ್ದು, ಇದು ನೋಂದಾಯಿತ ಟ್ರಸ್ಟ್ ಆಗಿದೆ. ವಿದ್ಯಾರ್ಥಿಗಳನ್ನು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ಇಲ್ಲಿ ನೆರವು ದೊರೆಯುತ್ತಿದೆ ಮತ್ತು ಕೌಶಲ್ಯ ಅಭಿವೃದ್ಧಿ ಪಡೆಯಲು ಮತ್ತು ಉದ್ಯಮಶೀಲರಾಗಲು ಸಹ ಇದು ವೇದಿಕೆಯಾಗಿದೆ,
ಈ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಅವರು ಸಹ ಪಾಲ್ಗೊಳ್ಳಲಿದ್ದಾರೆ.