ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವೆಂಬರ್ 24ರಂದು ಸಂಜೆ 5:30ಕ್ಕೆ ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ 'ಒಡಿಶಾ ಪರ್ವ 2024' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಕೂಡಾ ಮಾಡಲಿದ್ದಾರೆ.
ಒಡಿಶಾ ಪರ್ವ ಎಂಬುದು ನವದೆಹಲಿಯ ಒಡಿಯಾ ಸಮಾಜ ಟ್ರಸ್ಟ್ ನಡೆಸುವ ಪ್ರಮುಖ ಕಾರ್ಯಕ್ರಮವಾಗಿದ್ದು, ಈ ಟ್ರಸ್ಟ್ ನ ಮೂಲಕ, ಅವರು ಒಡಿಯಾ ಪರಂಪರೆಯ ಸಂರಕ್ಷಣೆ ಮತ್ತು ಪ್ರಚಾರಕ್ಕೆ ಅಮೂಲ್ಯವಾದ ಬೆಂಬಲವನ್ನು ಒದಗಿಸುತ್ತಾರೆ. ಈ ಸಂಪ್ರದಾಯವನ್ನು ಮುಂದುವರಿಸಿರುವ ಟ್ರಸ್ಟ್, ಈ ವರ್ಷ ಒಡಿಶಾ ಪರ್ವವನ್ನು ನವೆಂಬರ್ 22 ರಿಂದ 24 ರವರೆಗೆ ಆಯೋಜಿಸಿದೆ. ಇದು ವರ್ಣರಂಜಿತ ಸಾಂಸ್ಕೃತಿಕ ರೂಪಗಳನ್ನು ಪ್ರದರ್ಶಿಸುವ ಒಡಿಶಾದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸುವುದಲ್ಲದೆ, ಒಡಿಶಾ ರಾಜ್ಯದ ರೋಮಾಂಚಕ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ನೀತಿಗಳನ್ನು ಪ್ರದರ್ಶಿಸುತ್ತದೆ. ವಿವಿಧ ಕ್ಷೇತ್ರಗಳಲ್ಲಿನ ಪ್ರಮುಖ ತಜ್ಞರು ಮತ್ತು ಪ್ರಖ್ಯಾತ ವೃತ್ತಿಪರರ ನೇತೃತ್ವದಲ್ಲಿ ರಾಷ್ಟ್ರೀಯ ಸೆಮಿನಾರ್ ಅಥವಾ ಸಮಾವೇಶವನ್ನು ಸಹ ನಡೆಸಲಾಗುವುದು.