ಐತಿಹಾಸಿಕ ಬೋಡೊ ಒಪ್ಪಂದಕ್ಕೆ ಸಹಿ ಹಾಕಿದ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಫೆಬ್ರವರಿ 7, 2020 ರಂದು ಅಸ್ಸಾಂನ ಕೊಕ್ರಜಾರ್ ಗೆ ಭೇಟಿ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಬೋಡೊಲ್ಯಾಂಡ್‌ ಪ್ರಾಂತೀಯ ಪ್ರದೇಶ ಜಿಲ್ಲೆ (ಬಿಟಿಎಡಿ)ಗಳ ಮತ್ತು ಅಸ್ಸಾಂನ ಒಟ್ಟು 4,00,000 ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದ ವೈವಿಧ್ಯತೆಯನ್ನು ಪ್ರದರ್ಶಿಸಲು ಅಸ್ಸಾಂನ ಜನಾಂಗೀಯ ಗುಂಪುಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಜ್ಯ ಸರ್ಕಾರವು ಆಯೋಜಿಸುತ್ತಿದೆ.

ಬೋಡೊ ಒಪ್ಪಂದಕ್ಕೆ ಸಂಬಂಧಪಟ್ಟ ಪ್ರಮುಖರನ್ನು ಒಂದೇ ಚೌಕಟ್ಟಿನಲ್ಲಿ ಸೇರಿಸುವ ಮೂಲಕ ಈ ವರ್ಷದ ಜನವರಿಯಲ್ಲಿ ಸಹಿ ಹಾಕಿದ ಐತಿಹಾಸಿಕ ಬೋಡೊ ಒಪ್ಪಂದವನ್ನು ಶ್ಲಾಘಿಸಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಒಪ್ಪಂದಕ್ಕೆ ಜನವರಿ 27, 2020ರಂದು ನವದೆಹಲಿಯಲ್ಲಿ ಸಹಿ ಹಾಕಲಾಯಿತು.

ಪ್ರಧಾನ ಮಂತ್ರಿ ತಮ್ಮ ವೈಯಕ್ತಿಕ ಟ್ವೀಟ್ನಲ್ಲಿ ಈ ದಿನವನ್ನು “ಭಾರತಕ್ಕೆ ಬಹಳ ವಿಶೇಷವಾದ ದಿನ” ಎಂದು ಬಣ್ಣಿಸಿದ್ದಾರೆ ಮತ್ತು ಈ ಒಪ್ಪಂದವು “ಬೋಡೊ ಜನರಿಗೆ ಭಾರಿ ಬದಲಾವಣೆಯುಳ್ಳ ಫಲಿತಾಂಶಗಳಿಗೆ ಕಾರಣವಾಗುತ್ತದೆ, ಇದು ಶಾಂತಿ, ಸಾಮರಸ್ಯ ಮತ್ತು ಒಗ್ಗಟ್ಟಿನ ಹೊಸ ಶಕೆಯನ್ನು ಆರಂಭಿಸುತ್ತದೆ” ಎಂದು ಹೇಳಿದ್ದಾರೆ.

ಈ ಒಪ್ಪಂದವು ಪ್ರಧಾನಮಂತ್ರಿಯವರ “ಸಬ್ಕಾ ಸಾಥ್ ಸಬ್ಕಾ ವಿಕಾಸ್”ನ ದೃಷ್ಟಿಕೋನ ಮತ್ತು ಈಶಾನ್ಯದ ಸಮಗ್ರ ಅಭಿವೃದ್ಧಿಯ ಬದ್ಧತೆಗೆ ಅನುಗುಣವಾಗಿ, ಐದು ದಶಕಗಳ ಹಳೆಯ ಬೋಡೊ ಬಿಕ್ಕಟ್ಟನ್ನು ಶಮನಗೊಳಿಸಿದೆ.

ಪ್ರಧಾನ ಮಂತ್ರಿಯವರು, ತಮ್ಮ ಟ್ವೀಟ್ನಲ್ಲಿ, “ಬೋಡೊ ಒಪ್ಪಂದವು ಅನೇಕ ಕಾರಣಗಳಿಂದಾಗಿ ಮುಖ್ಯವಾಗಿದೆ. ಈ ಹಿಂದೆ ಸಶಸ್ತ್ರ ಪ್ರತಿರೋಧ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದವರು ಈಗ ಮುಖ್ಯವಾಹಿನಿಗೆ ಬಂದು ನಮ್ಮ ರಾಷ್ಟ್ರದ ಪ್ರಗತಿಗೆ ಸಹಕರಿಸಲಿದ್ದಾರೆ. ”

ಅದರಂತೆ, ಎನ್ ಡಿ ಎಫ್ ಬಿ ಯ ವಿವಿಧ ಬಣಗಳ 1615 ಕ್ಕೂ ಹೆಚ್ಚು ಕಾರ್ಯಕರ್ತರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿದ್ದಾರೆ ಮತ್ತು ಒಪ್ಪಂದಕ್ಕೆ ಸಹಿ ಹಾಕಿದ ಎರಡು ದಿನಗಳಲ್ಲಿ ಮುಖ್ಯವಾಹಿನಿಗೆ ಸೇರಿಕೊಂಡಿದ್ದಾರೆ.

“ಬೋಡೊ ಗುಂಪುಗಳೊಂದಿಗಿನ ಒಪ್ಪಂದವು ಬೋಡೊ ಜನರ ವಿಶಿಷ್ಟ ಸಂಸ್ಕೃತಿಯನ್ನು ಮತ್ತಷ್ಟು ರಕ್ಷಿಸುತ್ತದೆ ಮತ್ತು ಜನಪ್ರಿಯಗೊಳಿಸುತ್ತದೆ. ಅವರು ವ್ಯಾಪಕ ಶ್ರೇಣಿಯ ಅಭಿವೃದ್ಧಿ ಆಧಾರಿತ ಉಪಕ್ರಮಗಳನ್ನು ಪಡೆಯುತ್ತಾರೆ. ಬೋಡೊ ಜನರು ತಮ್ಮ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಸಹಾಯ ಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡಲು ನಾವು ಬದ್ಧರಾಗಿದ್ದೇವೆ ”ಎಂದು ಪ್ರಧಾನ ಮಂತ್ರಿಯವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

1500 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಅನ್ನು ಈ ಪ್ರದೇಶದ ಅಭಿವೃದ್ಧಿಗೆ ಮೀಸಲಿಡಲಾಗಿದೆ.

35,000 ಕ್ಕೂ ಹೆಚ್ಚು ಬ್ರೂ-ರೇಂಗ್ ನಿರಾಶ್ರಿತರಿಗೆ ಪರಿಹಾರ ಮತ್ತು ಸಹಾಯವನ್ನು ಒದಗಿಸಲು ಭಾರತ ಸರ್ಕಾರ ಮತ್ತು ತ್ರಿಪುರಾ ಹಾಗೂ ಮಿಜೋರಾಂ ಸರ್ಕಾರಗಳು ಇತ್ತೀಚೆಗೆ ಸಹಿ ಮಾಡಿದ ಬ್ರೂ-ರೇಂಗ್ ಒಪ್ಪಂದವು ಮತ್ತು ತ್ರಿಪುರದಲ್ಲಿ ಎನ್‌ಎಲ್‌ಎಫ್‌ಟಿಯ 85 ಕ್ಕೂ ಹೆಚ್ಚು ಕಾರ್ಯಕರ್ತರ ಶರಣಾಗತಿಯು ಈಶಾನ್ಯದ ಒಟ್ಟಾರೆ ಅಭಿವೃದ್ಧಿ ಮತ್ತು ಶಾಂತಿಗಾಗಿ ಪ್ರಧಾನಮಂತ್ರಿಯವರ ನಿರಂತರ ಬದ್ಧತೆ ಮತ್ತು ದೂರದೃಷ್ಟಿಗೆ ಸಾಕ್ಷಿಯಾಗಿದೆ.

ಗಣರಾಜ್ಯೋತ್ಸವದಂದು “ಮನ್ ಕಿ ಬಾತ್” ಕಾರ್ಯಕ್ರಮದ ಮೂಲಕ ರಾಷ್ಟ್ರದೊಂದಿಗಿನ ಸಂವಾದದಲ್ಲಿ, ಹಿಂಸಾಚಾರದ ಹಾದಿಯಲ್ಲಿರುವ ಎಲ್ಲರಿಗೂ ಮುಖ್ಯವಾಹಿನಿಗೆ ಮರಳಲು ಮತ್ತು ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಪ್ರಧಾನ ಮಂತ್ರಿಯವರು ಕರೆ ನೀಡಿದ್ದರು.

“ಗಣರಾಜ್ಯೋತ್ಸವದ ಈ ಮಹತ್ವವಾದ ಸಂದರ್ಭದಲ್ಲಿ, ಹಿಂಸಾಚಾರ ಮತ್ತು ಶಸ್ತ್ರಾಸ್ತ್ರಗಳ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುತ್ತಿರುವ ದೇಶದ ಯಾವುದೇ ಭಾಗದಲ್ಲಿರುವ ಯಾರಿಗಾದರೂ ಮುಖ್ಯವಾಹಿನಿಗೆ ಮರಳಲು ನಾನು ಮನವಿ ಮಾಡುತ್ತಿದ್ದೇನೆ. ಅವರು ತಮ್ಮ ಸಾಮರ್ಥ್ಯದಲ್ಲಿ ಮತ್ತು ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸುವ ಈ ದೇಶದ ಸಾಮರ್ಥ್ಯದಲ್ಲಿ ನಂಬಿಕೆ ಹೊಂದಿರಬೇಕು” ಎಂದು ಅವರು ಹೇಳಿದರು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Modi blends diplomacy with India’s cultural showcase

Media Coverage

Modi blends diplomacy with India’s cultural showcase
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 23 ನವೆಂಬರ್ 2024
November 23, 2024

PM Modi’s Transformative Leadership Shaping India's Rising Global Stature