ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 23ರಂದು ಸಂಜೆ 6.30ಕ್ಕೆ ಕೆಂಪು ಕೋಟೆಯಲ್ಲಿ ನಡೆಯುವ 'ಪರಾಕ್ರಮ ದಿನಾಚರಣೆʼ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ ದಿಗ್ಗಜರ ಕೊಡುಗೆಯನ್ನು ಸ್ಮರಿಸುವ ಗೌರವಿಸಲು ನಿಟ್ಟಿನಲ್ಲಿ ಪ್ರಧಾನಮಂತ್ರಿಯವರ ದೂರದೃಷ್ಟಿಯ ಚಿಂತನೆಯ ಫಲವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು 2021ರಲ್ಲಿ "ಪರಾಕ್ರಮ ದಿನಾಚರಣೆ"ಯಾಗಿ ಆಚರಿಸಲು ಶುರುವಾಯಿತು. ಈ ವರ್ಷ ಕೆಂಪು ಕೋಟೆಯಲ್ಲಿ ನಡೆಯಲಿರುವ ಐತಿಹಾಸಿಕ ಸ್ಮರಣೀಯ ಸಂದರ್ಭಗಳನ್ನು ಮೆಲುಕು ಹಾಕುವ ಹಾಗೂ ವೈವಿಧ್ಯದ ಸಾಂಸ್ಕೃತಿಕ ಅಭಿವ್ಯಕ್ತಿಯ ಅದ್ಭುತ ಅನಾವರಣವಾಗಲಿದೆ. ಈ ಚಟುವಟಿಕೆಗಳು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಆಜಾದ್ ಹಿಂದ್ ಫೌಜ್‌ನ ಭವ್ಯ ಪರಂಪರೆಯ ಧ್ಯೊತಕವಾಗಿರುತ್ತದೆ. ನೇತಾಜಿ ಮತ್ತು ಆಜಾದ್ ಹಿಂದ್ ಫೌಜ್‌ನ ಗಮನಾರ್ಹ ಪ್ರಯಾಣವನ್ನು ನಿರೂಪಿಸುವ ಅಪರೂಪದ ಛಾಯಾಚಿತ್ರಗಳು ಮತ್ತು ದಾಖಲೆಗಳ ಪ್ರದರ್ಶನಗಳ ಮೂಲಕ ಅವರ ಕೊಡುಗೆ, ತ್ಯಾಗವನ್ನು ಸ್ಮರಿಸಲು ನೆರವಾಗಲಿದೆ. ಈ ಆಚರಣೆಯು ಜನವರಿ 31ರವರೆಗೆ ನಡೆಯಲಿದೆ.
ಈ ಆಚರಣೆ ಕಾರ್ಯಕ್ರಮದಲ್ಲೇ ಪ್ರಧಾನ ಮಂತ್ರಿ ಅವರು "ಭಾರತ ಪರ್ವ"ಕ್ಕೆ ಚಾಲನೆ ನೀಡಲಿದ್ದಾರೆ. ಇದು ಸಹ ಜನವರಿ 23ರಿಂದ 31ರವರೆಗೆ ನಡೆಯಲಿದೆ. ಇದು ಗಣರಾಜ್ಯೋತ್ಸವದ ಸ್ತಬ್ಧಚಿತ್ರಗಳು ಹಾಗೂ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ದೇಶದ ವೈವಿಧ್ಯತೆಯ ಶ್ರೀಮಂತಿಕೆಯನ್ನು ಅನಾವರಣಗೊಳಿಸಲಿದೆ. 26 ಸಚಿವಾಲಯಗಳು ಮತ್ತು ಇಲಾಖೆಗಳ ಪ್ರಯತ್ನದ ಜತೆಗೆ ನಾಗರಿಕ ಕೇಂದ್ರಿತ ಉಪಕ್ರಮಗಳು, ಸ್ಥಳೀಯ, ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳಿಗೆ ಧ್ವನಿ ನೀಡಲಿವೆ. ಇದು ಕೆಂಪು ಕೋಟೆಯ ಮುಂಭಾಗದಲ್ಲಿರುವ ರಾಮ್ ಲೀಲಾ ಮೈದಾನ ಮತ್ತು ಮಾಧವ್ ದಾಸ್ ಪಾರ್ಕ್‌ನಲ್ಲಿ ನಡೆಯಲಿದೆ.