ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಡಿಸೆಂಬರ್ 16ರಂದು ಸುಮಾರು ಬೆಳಗ್ಗೆ 10:30ಕ್ಕೆ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವರ್ಣಿಮ್ ವಿಜಯ್ ಮಶಾಲ್ ಅವರ ಗೌರವ ಮತ್ತು ಸ್ವಾಗತ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
1971ರ ಯುದ್ಧದಲ್ಲಿ ಭಾರತದ ವಿಜಯ ಮತ್ತು ಬಾಂಗ್ಲಾದೇಶದ ರಚನೆಯ 50 ವರ್ಷಗಳ ಸ್ಮರಣಾರ್ಥ ಸ್ವರ್ಣಿಮ್ ವಿಜಯ್ ವರ್ಷ್ ಆಚರಣೆಯ ಭಾಗವಾಗಿ, ಕಳೆದ ವರ್ಷ ಡಿಸೆಂಬರ್ 16ರಂದು, ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಶಾಶ್ವತ ಜ್ಯೋತಿಯಿಂದ ಸ್ವರ್ಣಿಮ್ ವಿಜಯ್ ಮಶಾಲ್ ಅನ್ನು ಬೆಳಗಿಸಿದರು. ಅವರು ವಿವಿಧ ದಿಕ್ಕುಗಳಲ್ಲಿ ಸಂಚರಿಸಬೇಕಾದ ನಾಲ್ಕು ಜ್ಯೋತಿಗಳನ್ನು ಬೆಳಗಿಸಿದ್ದರು. ಅಂದಿನಿಂದ, ಈ ನಾಲ್ಕು ಜ್ಯೋತಿಗಳು ಸಿಯಾಚಿನ್, ಕನ್ಯಾಕುಮಾರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲೋಂಗೆವಾಲಾ, ರಾನ್ ಆ್ ಕಚ್, ಅಗರ್ತಲಾ ಸೇರಿದಂತೆ ದೇಶದ ಉದ್ದಗಲವನ್ನು ವ್ಯಾಪಿಸಿವೆ. ಜ್ಯೋತಿಗಳನನು ಪ್ರಮುಖ ಯುದ್ಧ ಪ್ರದೇಶಗಳಿಗೆ ಕೊಂಡೊಯ್ಯಲಾಯಿತಲ್ಲದೆ, ಶೌರ್ಯ ಪ್ರಶಸ್ತಿ ವಿಜೇತರು ಮತ್ತು 1971ರ ಯುದ್ಧದಲ್ಲಿ ಪಾಲ್ಗೊಂಡ ಹಿರಿಯರ ಮನೆಗಳಿಗೂ ಕೊಂಡೊಯ್ಯಲಾಗಿದೆ.
2021ರ ಡಿಸೆಂಬರ್ 16ರಂದು ಗೌರವ ಸಮಾರಂಭದ ಸಮಯದಲ್ಲಿ, ಈ ನಾಲ್ಕು ಜ್ಯೋತಿಗಳನ್ನು ಪ್ರಧಾನ ಮಂತ್ರಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಶಾಶ್ವತ ಜ್ಯೋತಿಯೊಂದಿಗೆ ವಿಲೀನಗೊಳಿಸುತ್ತಾರೆ.