ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಜನವರಿ 2ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಐಐಎಂ ಸಂಬಲ್ಪುರ ಕಾಯಂ ಕ್ಯಾಂಪಸ್ ಗೆ ಶಂಕು ಸ್ಥಾಪನೆಯನ್ನು ನೆರವೇರಿಸಲಿದ್ದಾರೆ.
ಒಡಿಶಾದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಜೊತೆಗೆ ಕೇಂದ್ರ ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್, ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಶ್ರೀ ಪ್ರತಾಪ್ ಚಂದ್ರ ಸಾರಂಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಧಿಕಾರಿಗಳು, ಉದ್ಯಮದ ನಾಯಕರು, ಶೈಕ್ಷಣಿಕ ತಜ್ಞರು ಮತ್ತು ವಿದ್ಯಾರ್ಥಿಗಳು ಮಾಜಿ ವಿದ್ಯಾರ್ಥಿಗಳು ಹಾಗೂ ಐಐಎಂ ಸಂಬಲ್ಪುರದ ಬೋಧನಾ ಸಿಬ್ಬಂದಿ ಸೇರಿದಂತೆ ಸುಮಾರು 5ಸಾವಿರ ಆಹ್ವಾನಿತರು ಕಾರ್ಯಕ್ರಮದಲ್ಲಿ ವರ್ಚುವಲ್ ರೂಪದಲ್ಲಿ ಭಾಗವಹಿಸಲಿದ್ದಾರೆ.
ಐಐಎಂ ಸಂಬಲ್ಪುರ ಕುರಿತು
ಐಐಎಂ ಸಂಬಲ್ಪುರ, ಫ್ಲಿಪ್ಪಡ್ ಕ್ಲಾಸ್ ರೂಂ ಚಿಂತನೆಯನ್ನು ಜಾರಿಗೊಳಿಸುತ್ತಿರುವ ಮೊದಲ ಐಐಎಂ ಆಗಿದ್ದು, ಇಲ್ಲಿ ಮೂಲ ಪರಿಕಲ್ಪನೆಗಳನ್ನು ಡಿಜಿಟಲ್ ವಿಧಾನದ ಮೂಲಕ ಮತ್ತು ಕಲಿಕೆ ಅನುಭವದ ಮೂಲಕ ಉದ್ಯಮದಿಂದ ನೇರ ಯೋಜನೆಗಳನ್ನು ಜಾರಿಗೊಳಿಸಿ ತರಗತಿಗಳಲ್ಲಿ ತಿಳಿಸಿಕೊಡಲಾಗುವುದು. ಈ ಸಂಸ್ಥೆಯು ಎಂಬಿಎ ನಲ್ಲಿ ಶೇ.49ರಷ್ಟು ಹೆಣ್ಣು ಮಕ್ಕಳು (2019-20ನೇ ಸಾಲಿನಲ್ಲಿ )ಮತ್ತು ಎಂಬಿಎ ನಲ್ಲಿ ಶೇ.43 (2020-22ನೇ ಸಾಲಿನಲ್ಲಿ) ರ ಮೂಲಕ ಗರಿಷ್ಠ ಲಿಂಗ ವೈವಿಧ್ಯತೆಯಿಂದಾಗಿ ಇತರೆ ಎಲ್ಲ ಐಐಎಂಗಳನ್ನು ಹಿಂದಿಕ್ಕಿದೆ.