ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು, ಬಿಹಾರದ ಒಂಬತ್ತು ಹೆದ್ದಾರಿ ಯೋಜನೆಗಳಿಗೆ 2020ರ ಸೆಪ್ಟೆಂಬರ್ 21ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಎಲ್ಲ 45,945 ಗ್ರಾಮಗಳಿಗೆ ಆಫ್ಟಿಕಲ್ ಫೈಬರ್ ಇಂಟರ್ನೆಟ್ ಸೇವೆಯ ಮೂಲಕ ಸಂಪರ್ಕ ಕಲ್ಪಿಸುವ ಆಫ್ಟಿಕಲ್ ಫೈಬರ್ ಕೆಬಲ್ ಸೇವೆಯನ್ನು ಉದ್ಘಾಟಿಸಲಿದ್ದಾರೆ.
ಹೆದ್ದಾರಿ ಯೋಜನೆಗಳು
ಈ ಒಂಬತ್ತು ಹೆದ್ದಾರಿ ಯೋಜನೆಗಳು 350 ಕಿಲೋ ಮೀಟರ್ ಉದ್ದದ್ದಾಗಿದ್ದು, 14,258 ಕೋಟಿ ರೂಪಾಯಿ ವೆಚ್ಚದ್ದಾಗಿವೆ.
ಬಿಹಾರದ ಅಭಿವೃದ್ಧಿಗೆ ಹಾದಿ ಮಾಡಿಕೊಡಲಿರುವ ಈ ರಸ್ತೆಗಳು ರಾಜ್ಯದಲ್ಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಉತ್ತಮ ಸಂಪರ್ಕ, ಅನುಕೂಲತೆ ಮತ್ತು ಆರ್ಥಿಕ ಪ್ರಗತಿ ಹೆಚ್ಚಿಸುತ್ತವೆ.ಜಾರ್ಖಂಡ್ ಮತ್ತು ಉತ್ತರ ಪ್ರದೇಶದಂತಹ ನೆರೆಯ ರಾಜ್ಯಗಳೊಂದಿಗೆ ಗಣನೀಯವಾಗಿ ಜನರ ಮತ್ತು ಸರಕುಗಳ ಸಾಗಾಟವೂ ಸುಧಾರಿಸಲಿದೆ.
ಪ್ರಧಾನಮಂತ್ರಿಯವರು 2015ರಲ್ಲಿ ಬಿಹಾರದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಇದರಲ್ಲಿ 54,700 ಕೋಟಿ ರೂ. ಮೌಲ್ಯದ 75 ಯೋಜನೆಗಳು ಸೇರಿದ್ದು, ಈ ಪೈಕಿ 13 ಯೋಜನೆಗಳು ಪೂರ್ಣಗೊಂಡಿದ್ದರೆ, 38 ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ ಮತ್ತು ಇತರ ಯೋಜನೆಗಳು ಡಿಪಿಆರ್/ಬಿಡ್ಡಿಂಗ್/ಮಂಜೂರಾತಿ ಹಂತದಲ್ಲಿವೆ.
ಈ ಯೋಜನೆಗಳು ಪೂರ್ಣಗೊಳ್ಳುವುದರೊಂದಿಗೆ ಬಿಹಾರದ ಎಲ್ಲ ನದಿಗಳೂ 21ನೇ ಶತಮಾನದ ನಿರ್ದಿಷ್ಟತೆಗನುಗುಣವಾಗಿ ಸೇತುವೆಯನ್ನು ಹೊಂದಿರುವುದು ಖಚಿತವಾಗುತ್ತದೆ ಮತ್ತು ಎಲ್ಲ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳೂ ಅಗಲೀಕರಣಗೊಂಡು ಬಲವರ್ಧಿತವಾಗುತ್ತವೆ.
ಪ್ರಧಾನಮಂತ್ರಿ ಪ್ಯಾಕೇಜ್ ಅಡಿಯಲ್ಲಿ, ಗಂಗಾನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಗಳ ಸಂಖ್ಯೆ 17 ಆಗಿದ್ದು, ಮಾರ್ಗಗಳ ಸಾಮರ್ಥ್ಯ 62 ಆಗಿದೆ. ಇದರೊಂದಿಗೆ ಸರಾಸರಿ ರಾಜ್ಯದಲ್ಲಿ ನದಿಗಳ ಮೇಲಿನ ಸೇತುವೆ ಪ್ರತಿ 25 ಕಿ.ಮೀ.ಗೆ ಒಂದಾಗಲಿದೆ.
ಈ ಯೋಜನೆಯು ರಾ.ಹೆ.31ರಲ್ಲಿ ಭಕ್ತಿಯಾರ್ಪುರ –ರಜೌಲಿ ವಿಭಾಗದಲ್ಲಿನ 47.23 ಕಿ.ಮೀ.ಗಳ 1149.55 ಕೋಟಿ ರೂಪಾಯಿ ವೆಚ್ಚದ ಚತುಷ್ಪಥ ಯೋಜನೆ, ರಾ.ಹೆ. 31ರಲ್ಲಿ 2,650.76 ಕೋಟಿ ರೂ. ವೆಚ್ಚದ 50.89 ಕಿ.ಮೀ.ಗಳ ಭಕ್ತಿಯಾರ್ಪುರ –ರಜೌಲಿ ವಲಯದ ಚತುಷ್ಪಥ, ಅರಾ – ಮೊಹಾನಿಯಾ ವಲಯದ ರಾ.ಹೆ.30ರಲ್ಲಿ ಇಪಿಸಿ ಮಾದರಿಯಲ್ಲಿ 885.41 ಕೋಟಿ ರೂ. ವೆಚ್ಚದಲ್ಲಿ 54.53 ಕಿ.ಮೀ ಚತುಷ್ಪಥ, ಅರಾ – ಮೊಹಾನಿಯಾ ವಲಯದ ರಾ.ಹೆ.30ರಲ್ಲಿ ಇಪಿಸಿ ಮಾದರಿಯಲ್ಲಿ 855.93 ಕೋಟಿ ರೂ. ವೆಚ್ಚದಲ್ಲಿ 60.80 ಕಿ.ಮೀ ಚತುಷ್ಪಥ, ನರೇನ್ಪುರ್ – ಪುರ್ನಿಯಾ ವಲಯದ ರಾ.ಹೆ. 131 ಎಯಲ್ಲಿ ಎಚ್.ಎ.ಎಂ. ಮಾದರಿಯಲ್ಲಿ 2288 ಕೋಟಿ ರೂ. ವೆಚ್ಚದಲ್ಲಿ 49 ಕಿ.ಮೀಗಳ ಚತುಷ್ಪಥ, ರಾ.ಹೆ. 131 ಜಿಯಲ್ಲಿ ಇಪಿಸಿ ಮಾದರಿಯಲ್ಲಿ 913.15 ಕೋಟಿ ರೂ. ವೆಚ್ಚದಲ್ಲಿ ಪಾಟ್ನಾ – ವರ್ತುಲ ರಸ್ತೆ (ಕನೌಲಿ–ರಾಮನಗರ)ದ 39 ಕಿ.ಮೀ. ಷಟ್ಪಥ, 2926.42 ಕೋಟಿ ರೂ. ವೆಚ್ಚದಲ್ಲಿ ರಾ.ಹೆ. 19ರಲ್ಲಿ ಪಾಟ್ನಾದಲ್ಲಿ ಗಂಗಾ ನದಿಗೆ ಅಡ್ಡಲಾಗಿ (ಹಾಲಿ ಎಂ.ಜಿ. ಸೇತುವೆಗೆ ಪರ್ಯಾಯವಾಗಿ) 14.5 ಕಿ.ಮೀ ನೂತನ ಚತುಷ್ಪಥ ಸೇತುವೆ, ಕೋಸಿ ನದಿಗೆ ಅಡ್ಡಲಾಗಿ ರಾ.ಹೆ.106ರಲ್ಲಿ ಇಪಿಸಿ ಮಾದರಿಯಲ್ಲಿ 1478.40 ಕೋಟಿ ರೂ ವೆಚ್ಚದಲ್ಲಿ 2 ಪಾದಚಾರಿ ರಸ್ತೆಯೊಂದಿಗೆ ಹೊಸ 28.93 ಕಿ.ಮೀ ಚತುಷ್ಪಥ ಸೇತುವೆ ಮತ್ತು ಗಂಗಾ ನದಿಗೆ ಅಡ್ಡಲಾಗಿ ರಾ.ಹೆ.131 ಬಿಯಲ್ಲಿ 1110.23 ಕೋಟಿ ರೂ. ವೆಚ್ಚದಲ್ಲಿ(ಹಾಲಿ ವಿಕ್ರಮಶಿಲಾ ಸೇತುವೆಗೆ ಪರ್ಯಾಯವಾಗಿ) ಹೊಸ 4.445 ಕಿ.ಮೀ. ಚತುಷ್ಪಥ ಸೇತುವೆ ನಿರ್ಮಾಣವನ್ನು ಒಳಗೊಂಡಿದ್ದು
ಆಪ್ಟಿಕಲ್ ಫೈಬರ್ ಇಂಟರ್ನೆಟ್ ಸೇವೆ
ಇದು ಬಿಹಾರದ ಎಲ್ಲಾ 45,945 ಹಳ್ಳಿಗಳನ್ನು ಒಳಗೊಂಡ ಪ್ರತಿಷ್ಠಿತ ಯೋಜನೆಯಾಗಿದ್ದು, ಡಿಜಿಟಲ್ ಕ್ರಾಂತಿಯು ರಾಜ್ಯದ ದೂರದ ಮೂಲೆಯನ್ನೂ ತಲುಪಲು ಅನುವು ಮಾಡಿಕೊಡುತ್ತದೆ.
ಟೆಲಿಕಾಂ ಇಲಾಖೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್.ಸಿ) ಸಂಯೋಜಿತ ಪ್ರಯತ್ನದಿಂದ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ.
ಬಿಹಾರ ರಾಜ್ಯದ ಉದ್ದಗಲದಲ್ಲಿ 34,821 ಸಿಎಸ್.ಸಿ. ಕೇಂದ್ರಗಳಿವೆ. ಅವರು ಈ ಕಾರ್ಯಪಡೆಯನ್ನು ಈ ಯೋಜನೆಯ ಅನುಷ್ಠಾನಕ್ಕೆ ಮಾತ್ರವೇ ಅಲ್ಲದೆ, ಅದನ್ನು ಬಿಹಾರದ ಪ್ರತಿ ಗ್ರಾಮದಲ್ಲಿ ವೃತ್ತಿಪರವಾಗಿ ಶ್ರೀಸಾಮಾನ್ಯರಿಗೂ ಆಪ್ಟಿಕ್ ಫೈಬರ್ ಇಂಟರ್ನೆಟ್ ಸೇವೆ ಒದಗಿಸಲು ಬಳಸಿಕೊಳ್ಳಲಾಗುವುದು. ಪ್ರಾಥಮಿಕ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಆಶಾ ಕಾರ್ಯಕರ್ತರು, ಜೀವಿಕಾ ದೀದಿ ಇತ್ಯಾದಿ ಸರ್ಕಾರಿ ಸಂಸ್ಥೆಗಳಿಗೆ 1 ವೈ–ಫೈ ಮತ್ತು 5 ಉಚಿತ ಸಂಪರ್ಕಗಳನ್ನು ಅನುಷ್ಠಾನಗೊಳಿಸುವ ಯೋಜನೆಯೂ ಇದರಲ್ಲಿ ಸೇರಿದೆ.
ಈ ಯೋಜನೆಯು ಇ–ಶಿಕ್ಷಣ, ಇ–ಕೃಷಿ, ಟೆಲಿ–ಮೆಡಿಸಿನ್, ಟೆಲಿ–ಕಾನೂನು ಮತ್ತು ಇತರ ಸಾಮಾಜಿಕ ಭದ್ರತಾ ಯೋಜನೆಗಳಂತಹ ಡಿಜಿಟಲ್ ಸೇವೆಗಳನ್ನು ಬಿಹಾರದ ಎಲ್ಲಾ ನಾಗರಿಕರಿಗೆ ಗುಂಡಿಯನ್ನು ಒತ್ತುವುದರಿಂದ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ.