ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 19ರಂದು ಬೆಳಿಗ್ಗೆ 10.30ಕ್ಕೆ ನವದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ರಾಷ್ಟ್ರೀಯ ಕಲಿಕಾ ವಾರ “ಕರ್ಮಯೋಗಿ ಸಪ್ತಾಹ’ ವನ್ನು ಉದ್ಘಾಟಿಸಲಿದ್ದಾರೆ.
ಮಿಷನ್ ಕರ್ಮಯೋಗಿ ಅನ್ನು 2020ರ ಸೆಪ್ಟಂಪರ್ ನಲ್ಲಿ ಆರಂಭಿಸಲಾಗಿತ್ತು ಮತ್ತು ಅಲ್ಲಿಂದೀಚೆಗೆ ಅದು ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಅದು ಜಾಗತಿಕ ದೂರದೃಷ್ಟಿಯೊಂದಿಗೆ ಭಾರತೀಯ ನೈತಿಕತೆ ಮೌಲ್ಯಗಳು ಬೇರೂರಿರುವ ಭವಿಷ್ಯದ-ಸಿದ್ಧ ನಾಗರಿಕ ಸೇವಕರನ್ನು ಒದಗಿಸುತ್ತದೆ.
ರಾಷ್ಟ್ರೀಯ ಕಲಿಕಾ ವಾರ(ಎನ್ ಎಲ್ ಡಬ್ಲೂ) ನಾಗರಿಕ ಸೇವಕರಿಗೆ ವೈಯಕ್ತಿಕ ಮತ್ತು ಸಾಂಸ್ಥಿಕ ಸಾಮರ್ಥ್ಯದ ಅಭಿವೃದ್ಧಿಯಡೆಗೆ ತಾಜಾ ಮಾಹಿತಿಯನ್ನು ಒದಗಿಸುವ ಒಂದು ರೀತಿಯ ದೊಡ್ಡ ಕಾರ್ಯಕ್ರಮವಾಗಿದೆ. ಈ ಉಪಕ್ರಮವು ಕಲಿಕೆ ಮತ್ತು ಅಭಿವೃದ್ಧಿಗೆ ಹೊಸ ಬದ್ಧತೆಯನ್ನು ಉತ್ತೇಜಿಸುತ್ತದೆ. ಎನ್ ಎಲ್ ಡಬ್ಲೂ "ಒಂದು ಸರ್ಕಾರ" ಸಂದೇಶವನ್ನು ರಚಿಸುವ ಗುರಿಯನ್ನು ಹೊಂದಿದೆ, ಪ್ರತಿಯೊಬ್ಬರನ್ನು ರಾಷ್ಟ್ರೀಯ ಗುರಿಗಳೊಂದಿಗೆ ಒಟ್ಟುಗೂಡಿಸುತ್ತದೆ ಮತ್ತು ಜೀವನವಿಡೀ ಕಲಿಕೆಯನ್ನು ಉತ್ತೇಜಿಸುತ್ತದೆ.
ವೈಯಕ್ತಿಕ ಭಾಗವಹಿಸುವವರು ಮತ್ತು ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಿಂದ ವಿವಿಧ ರೀತಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಲಿಕೆಗೆ ಎನ್ ಎಲ್ ಡಬ್ಲೂ ಬದ್ಧವಾಗಿದೆ. ಎನ್ ಎಲ್ ಡಬ್ಲೂ ವೇಳೆ ಪ್ರತಿ ಕರ್ಮಯೋಗಿಯು ಕನಿಷ್ಟ 4 ಗಂಟೆಗಳ ಸಾಮರ್ಥ್ಯ-ಸಂಯೋಜಿತ ಕಲಿಕೆಯ ಗುರಿಯನ್ನು ಸಾಧಿಸಲು ಬದ್ಧರಾಗಿರುತ್ತಾರೆ. ಭಾಗವಹಿಸುವವರು ಐಗಾಟ್, ವೆಬಿನಾರ್‌ಗಳಲ್ಲಿ (ಸಾರ್ವಜನಿಕ ಉಪನ್ಯಾಸಗಳು/ನೀತಿ ಮಾಸ್ಟರ್‌ಕ್ಲಾಸ್‌ಗಳು) ಗಣ್ಯ ವ್ಯಕ್ತಿಗಳ ವೈಯಕ್ತಿಕ ಪಾತ್ರ-ಆಧಾರಿತ ಮಾದರಿಗಳ ಒಳಗೊಂಡ ಕಲಿಕೆ ಮೂಲಕ ಉದ್ದೇಶಿತ ಸಮಯವನ್ನು ಪೂರ್ಣಗೊಳಿಸಬಹುದು. ಸಪ್ತಾಹದ ವೇಳೆ, ಪ್ರಖ್ಯಾತ ಭಾಷಣಕಾರರು ತಮ್ಮ ಪ್ರಾಮುಖ್ಯತೆಯ ಕ್ಷೇತ್ರಗಳ ಕುರಿತು ಉಪನ್ಯಾಸಗಳನ್ನು ನೀಡುತ್ತಾರೆ ಮತ್ತು ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ನಾಗರಿಕ-ಕೇಂದ್ರಿತ ಸೇವಾ ವಿಲೇವಾರಿಗಾಗಿ ಕರ್ತವ್ಯನಿರ್ವಹಿಸಲು ಸಹಾಯ ಮಾಡುತ್ತಾರೆ. ಈ ಸಪ್ತಾಹದ ಸಮಯದಲ್ಲಿ, ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳು ನಿರ್ದಿಷ್ಟ ವಿಷಯಗಳಲ್ಲಿ ಸಾಮರ್ಥ್ಯಗಳನ್ನು ಹೆಚ್ಚಿಸಲು ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುತ್ತವೆ.