ಭವಿಷ್ಯದ ದೃಷ್ಟಿ ಮತ್ತು ಮಾರ್ಗೋಪಾಯಗಳನ್ನು ಕುರಿತು ಚರ್ಚಿಸಲು ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಪಾಲುದಾರರು ನಾಳೆ ಸಂಜೆ ನಡೆಸಲಿರುವ ಮಂಥನ ಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
ಸಾಲ ಉತ್ಪನ್ನಗಳು ಮತ್ತು ಅವುಗಳ ವಿತರಣೆಗೆ ಸಮರ್ಥ ಮಾದರಿಗಳು, ತಂತ್ರಜ್ಞಾನದ ಮೂಲಕ ಆರ್ಥಿಕ ಸಬಲೀಕರಣ, ಆರ್ಥಿಕ ವಲಯದ ಸ್ಥಿರತೆ ಮತ್ತು ಸುಸ್ಥಿರತೆಗಾಗಿ ವಿವೇಕಯುತ ಅಭ್ಯಾಸಗಳು ಸಭೆಯ ಕಾರ್ಯಸೂಚಿಯಲ್ಲಿರುವ ವಿಷಯಗಳಾಗಿವೆ.
ಎಂಎಸ್ಎಂಇಗಳು ಸೇರಿದಂತೆ ಮೂಲಸೌಕರ್ಯ, ಕೃಷಿ, ಸ್ಥಳೀಯ ತಯಾರಿಕೆಗೆ ಹಣಕಾಸು ಒದಗಿಸುವ ಮೂಲಕ ಭಾರತದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವಲ್ಲಿ ಬ್ಯಾಂಕಿಂಗ್ ವಲಯವು ಪ್ರಮುಖ ಪಾತ್ರ ವಹಿಸಿದೆ. ಆರ್ಥಿಕ ಸೇರ್ಪಡೆ ತಂತ್ರಜ್ಞಾನದ ಮೂಲಕ ಆರ್ಥಿಕ ಸಬಲೀಕರಣದಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸುತ್ತಿದೆ.
ಸರ್ಕಾರದ ಹಿರಿಯ ಅಧಿಕಾರಿಗಳು ಸಹ ಸಂವಾದದಲ್ಲಿ ಭಾಗವಹಿಸಲಿದ್ದಾರೆ.