ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2020ರ 49 ವಿಜೇತರನ್ನು ನಾಳೆ ಅಂದರೆ 2020ರ ಜನವರಿ 24ರಂದು ಭೇಟಿ ಮಾಡಿ ಸಂವಾದ ನಡೆಸಲಿದ್ದಾರೆ.
49 ವಿಜೇತರಲ್ಲಿ ಜಮ್ಮು ಕಾಶ್ಮೀರ, ಮಣಿಪುರ, ಅರುಣಾಚಲ ಪ್ರದೇಶದ ತಲಾ ಒಬ್ಬರು ಸೇರಿದಂತೆ ಭಾರತದ ವಿವಿಧ ರಾಜ್ಯಗಳವರು ಇದ್ದಾರೆ.
ಈ ಮಕ್ಕಳು ಕಲೆ ಮತ್ತು ಸಂಸ್ಕೃತಿ, ನಾವಿನ್ಯತೆ, ಪಾಂಡಿತ್ಯ, ಸಮಾಜ ಸೇವೆ, ಶೌರ್ಯ ಮತ್ತು ಕ್ರೀಡಾ ಕ್ಷೇತ್ರದಲ್ಲಿ ವಿಜೇತರಾಗಿದ್ದಾರೆ.
ಭಾರತ ಸರ್ಕಾರವು ಮಕ್ಕಳು ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾಲುದಾರರೆಂದು ಗುರುತಿಸಿದೆ. ಅವರ ಭರವಸೆಗಳು ಮತ್ತು ಆಶೋತ್ತರಗಳನ್ನು ಗುರುತಿಸಿ ಅವರ ಸಾಧನೆಗೆ ಪುರಸ್ಕಾರ ನೀಡುತ್ತಿದೆ.
ಪ್ರತಿಯೊಂದು ಮಗುವೂ ಅಮೂಲ್ಯವಾಗಿದ್ದರೂ ಅವನ ಅಥವಾ ಅವಳ ಸಾಧನೆಯನ್ನು ಪ್ರಶಂಸಿಸಬೇಕಾಗಿದೆಯಾದರೂ, ಕೆಲವರ ಸಾಧನೆಗಳು ಹಲವರಿಗೆ ಸ್ಫೂರ್ತಿಯಾಗಿರುತ್ತವೆ.
ಈ ನಿಟ್ಟಿನಲ್ಲಿ ಸರ್ಕಾರ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಮಕ್ಕಳ ಅನುಪಮ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತಾ ಬಂದಿದೆ.
ಯಾವುದೇ ಮಗು ನಾವಿನ್ಯತೆ, ಪಾಂಡಿತ್ಯ, ಸಮಾಜ ಸೇವೆ, ಕಲೆ ಮತ್ತು ಸಂಸ್ಕೃತಿ, ಕ್ರೀಡೆ ಮತ್ತು ಶೌರ್ಯ ವಿಭಾಗದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದರೆ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅದೇ ರೀತಿ ಯಾವುದೇ ವ್ಯಕ್ತಿ ಮಗುವಿನ ಪ್ರತಿಭಾಪೂರ್ಣ ಸಾಧನೆಯ ಬಗ್ಗೆ ತಿಳಿದಿದ್ದರೆ ಪ್ರಶಸ್ತಿಗೆ ಶಿಫಾರಸು ಮಾಡಬಹುದು. ಉನ್ನತ ಮಟ್ಟದ ಸಮಿತಿ ಪ್ರತಿಯೊಂದು ಅರ್ಜಿಯನ್ನೂ ಎಚ್ಚರಿಕೆಯಿಂದ ಪರಿಶೀಲಿಸಿ ವಿಜೇತರನ್ನು ಆಯ್ಕೆ ಮಾಡುತ್ತದೆ.
ಭಾರತದ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್, ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಗಳನ್ನು 2020ರ ಜನವರಿ 22ರಂದು ಪ್ರದಾನ ಮಾಡಿದರು.
ಬುಡಕಟ್ಟು ಕಲಾವಿದರು, ಎನ್.ಸಿ.ಸಿ. ಕೆಡೆಟ್ ಗಳು, ಎನ್.ಎಸ್.ಎಸ್. ಕಾರ್ಯಕರ್ತರು ಮತ್ತು ಸ್ತಬ್ಧ ಚಿತ್ರ ಕಲಾವಿದರೊಂದಿಗೆ ಅಟ್ ಹೋಮ್ ನಲ್ಲಿ…
ಪ್ರಧಾನಮಂತ್ರಿಯವರು ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಲಿರುವ 1730 ಬುಡಕಟ್ಟು ಕಲಾವಿದರು, ಎನ್.ಸಿ.ಸಿ. ಕೆಡೆಟ್ ಗಳು, ಎನ್.ಎಸ್.ಎಸ್. ಕಾರ್ಯಕರ್ತರು ಮತ್ತು ಸ್ತಬ್ಧ ಚಿತ್ರ ಕಲಾವಿದರುಗಳೊಂದಿಗೆ 2020ರ ಜನವರಿ 24ರಂದು ಅಟ್ ಹೋಮ್ ಕಾರ್ಯಕ್ರಮದಲ್ಲಿ ಸಂವಾದ ನಡೆಸಲಿದ್ದಾರೆ.