ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (PMRBP) ಪುರಸ್ಕೃತರೊಂದಿಗೆ ಜನವರಿ 24 ರಂದು ಸಂಜೆ 4 ಗಂಟೆಗೆ ತಮ್ಮ ನಿವಾಸ, 7 LKM ನಲ್ಲಿ ಮಾತನಾಡಲಿದ್ದಾರೆ.
ನಾವೀನ್ಯತೆ, ಸಮಾಜ ಸೇವೆ, ವಿದ್ವತ್ತು, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಮತ್ತು ಶೌರ್ಯ ಎಂಬ ಆರು ವಿಭಾಗಗಳಲ್ಲಿ ಅಸಾಧಾರಣ ಸಾಧನೆಗೈದ ಮಕ್ಕಳಿಗೆ ಭಾರತ ಸರ್ಕಾರವು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ನೀಡುತ್ತದೆ. ಪುರಸ್ಕೃತರಿಗೆ ಪ್ರಶಸ್ತಿ, ರೂ.1 ಲಕ್ಷ ನಗದು ಮತ್ತು ಪ್ರಮಾಣಪತ್ರವನ್ನು ಬಹುಮಾನದ ರೂಪದಲ್ಲಿ ನೀಡಲಾಗುತ್ತದೆ. ಈ ವರ್ಷ, ದೇಶಾದ್ಯಂತ 11 ಮಕ್ಕಳನ್ನು ಬಾಲ ಶಕ್ತಿ ಪುರಸ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ PMRBP-2023 ಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ 6 ಬಾಲಕರು ಮತ್ತು 5 ಬಾಲಕಿಯರು ಸೇರಿದ್ದಾರೆ.