ಜೂನ್ 24 ರ ಬೆಳಗ್ಗೆ 11 ಗಂಟೆಗೆ ಟಾಯ್ಕಥಾನ್ -2021 ರಲ್ಲಿ ಪಾಲ್ಗೊಂಡಿರುವವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ.
ಟಾಯ್ಕಥಾನ್ -2021 ಅನ್ನು ಜನವರಿ 5 ರಂದು ಶಿಕ್ಷಣ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಎಂ.ಎಸ್.ಎಂ.ಇ ಸಚಿವಾಲಯ, ಡಿಪಿಐಐಟಿ, ಜವಳಿ ಸಚಿವಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಎಐಸಿಟಿಇ ನಿಂದ ನವೀನ ಮಾದರಿಯ ಅಟಿಕೆಗಳು, ಆಟಗಳ ಕಲ್ಪನೆಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಲು ಅಭಿಯಾನ ಆರಂಭಿಸಲಾಗಿತ್ತು.
ಟಾಯ್ಕಥಾನ್ -2021 ರಲ್ಲಿ ಸುಮಾರು 1.2 ಲಕ್ಷ ಮಂದಿ ನೋಂದಣಿ ಮಾಡಿಕೊಂಡು 17,000 ಕ್ಕೂ ಹೆಚ್ಚು ಪರಿಕಲ್ಪನೆಗಳನ್ನು ಸಲ್ಲಿಸಿದ್ದರು. ಈ ಪೈಕಿ 1567 ಮಂದಿಯ ಪರಿಕಲ್ಪನೆಯನ್ನು ಆಯ್ಕೆಮಾಡಿ ಪಟ್ಟಿ ತಯಾರಿಸಿದ್ದು, ಜೂನ್ 22 ರಿಂದ ಜೂನ್ 24 ರ ವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಟಾಯ್ಕಥಾನ್ ಗ್ರಾಂಡ್ ಫಿನಾಲೆಯಲ್ಲಿ ಇವರು ಭಾಗವಹಿಸುತ್ತಿದ್ದಾರೆ. ಕೋವಿಡ್ – 19 ನಿರ್ಬಂಧಗಳಿಂದಾಗಿ ಈ ಗ್ರಾಂಡ್ ಫಿನಾಲೆ ಡಿಜಿಟಲ್ ಅಟಿಕೆಗಳ ಪರಿಕಲ್ಪನೆ ಹೊಂದಿರುವರನ್ನು ಒಳಗೊಂಡಿದ್ದು, ಡಿಜಿಟಲ್ ಅಲ್ಲದ ಪರಿಕಲ್ಪನೆ ಹೊಂದಿರುವವರಿಗೆ ಪ್ರತ್ಯೇಕವಾಗಿ ಭೌತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ದೇಶೀಯ ಮಾರುಕಟ್ಟೆ ಮತ್ತು ಜಾಗತಿಕ ಅಟಿಕೆ ಮಾರುಕಟ್ಟೆಯು ಭಾರತಕ್ಕೆ ಒಂದು ದೊಡ್ಡ ಅವಕಾಶವನ್ನು ನೀಡುತ್ತದೆ. ಟಾಯ್ಕಥಾನ್- 2021 ಭಾರತದಲ್ಲಿ ಅಟಿಕೆ ಮಾರುಕಟ್ಟೆಯ ವ್ಯಾಪಕ ಪಾಲನ್ನು ಹೊಂದಲು ಸಹಾಯ ಮಾಡುತ್ತದೆ ಮತ್ತು ಭಾರತದಲ್ಲಿ ಅಟಿಕೆ ಉದ್ಯಮವನ್ನು ವೃದ್ಧಿಸುವ ಗುರಿ ಹೊಂದಲಾಗಿದೆ.
ಕೇಂದ್ರ ಶಿಕ್ಷಣ ಸಚಿವರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.