ದೇಶಾದ್ಯಂತ 48 ನೋಡಲ್ ಕೇಂದ್ರಗಳಲ್ಲಿ ನಡೆಯಲಿರುವ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನ ಗ್ರ್ಯಾಂಡ್ ಫಿನಾಲೆಯಲ್ಲಿ 12,000 ಕ್ಕೂ ಹೆಚ್ಚು ಭಾಗವಹಿಸುವ ನಿರೀಕ್ಷೆ
25 ಸಚಿವಾಲಯಗಳು ಪೋಸ್ಟ್ ಮಾಡಿದ 231 ಸಮಸ್ಯೆ ಹೇಳಿಕೆಗಳನ್ನು ನಿಭಾಯಿಸಲಿರುವ ವಿದ್ಯಾರ್ಥಿಗಳು
ಈ ವರ್ಷದ ಹ್ಯಾಕಥಾನ್‌ನಲ್ಲಿ, 44,000 ತಂಡಗಳಿಂದ 50,000 ಕ್ಕೂ ಹೆಚ್ಚು ಐಡಿಯಾಗಳನ್ನು ಸ್ವೀಕರಿಸಲಾಗಿದೆ - SIH ನ ಮೊದಲ ಆವೃತ್ತಿಗೆ ಹೋಲಿಸಿದರೆ ಸುಮಾರು ಏಳು ಪಟ್ಟು ಹೆಚ್ಚು
ಭಾಗವಹಿಸುವವರು ಬಾಹ್ಯಾಕಾಶ ತಂತ್ರಜ್ಞಾನ, ಸ್ಮಾರ್ಟ್ ಶಿಕ್ಷಣ, ವಿಪತ್ತು ನಿರ್ವಹಣೆ, ರೊಬೊಟಿಕ್ಸ್ ಮತ್ತು ಡ್ರೋನ್‌ಗಳು, ಪರಂಪರೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಪರಿಹಾರ ನೀಡುವ ನಿರೀಕ್ಷೆ ಇದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 19ನೇ ಡಿಸೆಂಬರ್ 2023 ರಂದು ರಾತ್ರಿ 9:30 ಗಂಟೆಗೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2023 ರ ಗ್ರಾಂಡ್ ಫಿನಾಲೆಯಲ್ಲಿ ಭಾಗವಹಿಸುವವರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಎಲ್ಲರನ್ನೂ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಯುವಜನರ ನೇತೃತ್ವದ ಅಭಿವೃದ್ಧಿ ಹಾಗೂ ಪ್ರಧಾನಮಂತ್ರಿಯವರ ದೂರದೃಷ್ಟಿ ಯೋಜನೆಯಡಿ  ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (SIH) ವಿದ್ಯಾರ್ಥಿಗಳಿಗೆ ಸಚಿವಾಲಯಗಳು ಮತ್ತು ಇಲಾಖೆಗಳು, ಕೈಗಾರಿಕೆಗಳು ಮತ್ತು ಇತರ ಸಂಸ್ಥೆಗಳ ಒತ್ತುವ ಸಮಸ್ಯೆಗಳನ್ನು ಪರಿಹರಿಸಲು ವೇದಿಕೆಯನ್ನು ಒದಗಿಸಲಾಗುತ್ತಿದೆ. ಇದರೊಂದು ರಾಷ್ಟ್ರವ್ಯಾಪಿ ಉಪಕ್ರಮವಾಗಿದೆ. 2017 ರಲ್ಲಿ ಪ್ರಾರಂಭವಾದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಯುವ ನವೋದ್ಯಮಿಗಳಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸಿದೆ. ಕಳೆದ ಐದು ಆವೃತ್ತಿಗಳಲ್ಲಿ, ಅನೇಕ ನವೀನ ಪರಿಹಾರಗಳು ವಿವಿಧ ಡೊಮೇನ್‌ಗಳಲ್ಲಿ ಹೊರಹೊಮ್ಮಿವೆ ಮತ್ತು ಸ್ಥಾಪಿತ ಸ್ಟಾರ್ಟ್‌ಅಪ್‌ಗಳಾಗಿ ಹೊರಹೊಮ್ಮಿವೆ.

ಈ ವರ್ಷ, SIH ನ ಗ್ರ್ಯಾಂಡ್ ಫಿನಾಲೆಯು ಡಿಸೆಂಬರ್ 19 ರಿಂದ 23 ರವರೆಗೆ ನಡೆಯಲಿದೆ. SIH 2023 ರಲ್ಲಿ, 44,000 ತಂಡಗಳಿಂದ 50,000 ಕ್ಕೂ ಹೆಚ್ಚು ಐಡಿಯಾಗಳನ್ನು ಸ್ವೀಕರಿಸಲಾಗಿದೆ, ಇದು SIH ನ ಮೊದಲ ಆವೃತ್ತಿಗೆ ಹೋಲಿಸಿದರೆ ಸುಮಾರು ಏಳು ಪಟ್ಟು ಹೆಚ್ಚಾಗಿದೆ. ದೇಶದಾದ್ಯಂತ 48 ನೋಡಲ್ ಕೇಂದ್ರಗಳಲ್ಲಿ ನಡೆಯಲಿರುವ ಗ್ರ್ಯಾಂಡ್ ಫಿನಾಲೆಯಲ್ಲಿ 12,000 ಕ್ಕೂ ಹೆಚ್ಚು ಮಂದಿ ಭಾಗವಹಿಸು ನಿರೀಕ್ಷ ಇದೆ ಮತ್ತು 2500 ಕ್ಕೂ ಹೆಚ್ಚು ಮಾರ್ಗದರ್ಶಕರು ಭಾಗವಹಿಸಲಿದ್ದಾರೆ. ಬಾಹ್ಯಾಕಾಶ ತಂತ್ರಜ್ಞಾನ, ಸ್ಮಾರ್ಟ್ ಶಿಕ್ಷಣ, ವಿಪತ್ತು ನಿರ್ವಹಣೆ, ರೊಬೊಟಿಕ್ಸ್ ಮತ್ತು ಡ್ರೋನ್‌ಗಳು, ಪರಂಪರೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಪರಿಹಾರಗಳನ್ನು ಒದಗಿಸಲು ಒಟ್ಟು 1282 ತಂಡಗಳನ್ನು ಈ ವರ್ಷ ಗ್ರ್ಯಾಂಡ್ ಫಿನಾಲೆಗಾಗಿ ಆಯ್ಕೆ ಮಾಡಲಾಗಿದೆ.

ಭಾಗವಹಿಸುವ ತಂಡಗಳು 25 ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ 51 ಇಲಾಖೆಗಳು ಪೋಸ್ಟ್ ಮಾಡಿದ 231 ಸಮಸ್ಯೆ ಹೇಳಿಕೆಗಳಿಗೆ (176 ಸಾಫ್ಟ್‌ವೇರ್ ಮತ್ತು 55 ಹಾರ್ಡ್‌ವೇರ್) ಪರಿಹಾರಗಳನ್ನು ಒದಗಿಸಲಿವೆ.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2023 ರ ಒಟ್ಟು ಬಹುಮಾನ ಮೊತ್ತ 2 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ. ಪ್ರತಿ ವಿಜೇತ ತಂಡಕ್ಕೆ ಪ್ರತಿ ಸಮಸ್ಯೆ ಹೇಳಿಕೆಗೆ ರೂ 1 ಲಕ್ಷ ರೂ. ನಗದು ಬಹುಮಾನವನ್ನು ನೀಡಲಾಗುತ್ತದೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
25% of India under forest & tree cover: Government report

Media Coverage

25% of India under forest & tree cover: Government report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi