ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2020ರ ಅಕ್ಟೋಬರ್ 26ರಂದು ಸಂಜೆ 6 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನೀತಿ ಆಯೋಗ ಮತ್ತು ಪೆಟ್ರೋಲಿಯಂ ಸಚಿವಾಲಯ ಆಯೋಜಿಸಿರುವ ವಾರ್ಷಿಕ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿರುವ ಜಾಗತಿಕ ಅನಿಲ ಮತ್ತು ತೈಲ ಕಂಪನಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಜಾಗತಿಕ ತೈಲ ಮತ್ತು ಅನಿಲ ವಲಯದಲ್ಲಿ ಭಾರತ ಅತ್ಯಂತ ಪ್ರಮುಖ ಪಾಲುದಾರನಾಗಿದ್ದು, ಕಚ್ಚಾ ತೈಲ ಬಳಕೆಯಲ್ಲಿ 3ನೇ ಅತಿದೊಡ್ಡ ರಾಷ್ಟ್ರ ಹಾಗೂ ಎಲ್ಎನ್ ಜಿ ಆಮದಿನಲ್ಲಿ 4ನೇ ಅತಿದೊಡ್ಡ ರಾಷ್ಟ್ರವಾಗಿದೆ. ಭಾರತದ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ಸಕಾರಾತ್ಮಕ ಗ್ರಾಹಕರಿಂದ ಸಕ್ರಿಯ ಮತ್ತು ಪಾಲುದಾರಿಕೆಗಾಗಿ ಜಾಗತಿಕ ತೈಲ ಮತ್ತು ಅನಿಲ ಮೌಲ್ಯ ಸರಣಿಯನ್ನು ವೃದ್ಧಿಸಲು ನೀತಿ ಆಯೋಗ 2016ರಲ್ಲಿ ಮೊದಲ ಬಾರಿಗೆ ಭಾರತದ ಪ್ರಧಾನಮಂತ್ರಿಗಳೊಂದಿಗೆ ಜಾಗತಿಕ ಅನಿಲ ಮತ್ತು ತೈಲ ಕಂಪನಿಗಳ ಸಿಇಒಗಳ ದುಂಡುಮೇಜಿನ ಸಭೆಯನ್ನು ಆಯೋಜಿಸಿತ್ತು.
ಸುಮಾರು 40 ರಿಂದ 50 ಜಾಗತಿಕ ಸಿಇಒಗಳು ಮತ್ತು ಪ್ರಮುಖ ಪಾಲುದಾರರು ಜಾಗತಿಕ ತೈಲ ಮತ್ತು ಅನಿಲ ವಲಯಕ್ಕೆ ರೂಪ ನೀಡುವುದಲ್ಲದೆ, ಪ್ರತಿ ವರ್ಷ ಸಭೆ ಸೇರಿ, ಪ್ರಧಾನಮಂತ್ರಿಗಳೊಂದಿಗೆ ಅವಕಾಶಗಳು ಮತ್ತು ವಿಚಾರಗಳ ಕುರಿತಂತೆ ಸಂವಾದ ಹಾಗೂ ಚರ್ಚೆ ನಡೆಸಲಿದ್ದಾರೆ. ವಾರ್ಷಿಕ ಜಾಗತಿಕ ಸಿಇಒಗಳ ಸಂವಾದದ ಪರಿಣಾಮವಾಗಿ ಸುದೀರ್ಘ ಸಮಾಲೋಚನೆ, ಗುಣಮಟ್ಟದ ಸಲಹೆಗಳು ಮತ್ತು ಯಾವ ವಿಚಾರದಲ್ಲಿ ಗಂಭೀರವಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಕ್ರಮಗಳನ್ನು ಕೈಗೊಳ್ಳಲು ನೆರವಾಗಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ನೀತಿ ಆಯೋಗ ಆಯೋಜಿಸಿರುವ 5ನೇ ಸಭೆ ಇದಾಗಿದೆ. ಈ ವರ್ಷ ಪ್ರಮುಖ ತೈಲ ಮತ್ತು ಅನಿಲ ಕಂಪನಿಗಳ ಸುಮಾರು 45 ಸಿಇಒಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಸಭೆಯ ಹಿಂದಿನ ಉದ್ದೇಶ ಎಂದರೆ ಜಾಗತಿಕ ವೇದಿಕೆಯಲ್ಲಿನ ಉತ್ತಮ ಪದ್ಧತಿಗಳನ್ನು ಅರ್ಥಮಾಡಿಕೊಳ್ಳುವುದು, ಸುಧಾರಣೆಗಳ ಬಗ್ಗೆ ಚರ್ಚಿಸುವುದು ಮತ್ತು ಭಾರತೀಯ ತೈಲ ಮತ್ತು ಅನಿಲ ಮೌಲ್ಯ ಸರಣಿಗೆ ಹೂಡಿಕೆಗಳನ್ನು ಹೆಚ್ಚಿಸುವ ಕುರಿತು ಕಾರ್ಯತಂತ್ರ ರೂಪಿಸುವುದಾಗಿದೆ. ವಾರ್ಷಿಕ ಸಮಾಲೋಚನೆ ಕ್ರಮೇಣ ಅತ್ಯಂತ ಪ್ರಮುಖ ಕಾರ್ಯಕ್ರಮವಾಗಿ ರೂಪುಗೊಂಡಿದ್ದು, ಅಲ್ಲಿ ಕೇವಲ ಬೌದ್ಧಿಕ ಚರ್ಚೆ ನಡೆಯುವುದಷ್ಟೇ ಅಲ್ಲದೆ, ಅವು ಕಾರ್ಯರೂಪಕ್ಕೂ ಸಹ ಬರಲಿವೆ.ವಿಶ್ವದ 3ನೇ ಅತಿದೊಡ್ಡ ಇಂಧನ ಬಳಕೆದಾರ ರಾಷ್ಟ್ರವಾಗಿರುವ ಭಾರತದ ವರ್ಚಸ್ಸು ಕೂಡ ಇದರಿಂದ ವೃದ್ಧಿಯಾಗುತ್ತಿದೆ. ತೈಲ ಮತ್ತು ಅನಿಲ ವಲಯದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು 2030ರ ವೇಳೆಗೆ ಸುಮಾರು 300 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯಾಗುವ ನಿರೀಕ್ಷೆ ಇದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕು ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಅವರ ಪ್ರಾಸ್ತಾವಿಕ ಭಾಷಣದ ನಂತರ ತೈಲ ಮತ್ತು ಅನಿಲ ವಲಯದ ಸ್ಥೂಲ ನೋಟ ನೀಡುವ ಸಮಗ್ರ ಪ್ರಾತ್ಯಕ್ಷಿಕೆ ಪ್ರದರ್ಶನವಾಗಲಿದೆ ಮತ್ತು ಭಾರತೀಯ ತೈಲ ಮತ್ತು ಅನಿಲ ವಲಯದಲ್ಲಿ ಲಭ್ಯವಿರುವ ಅವಕಾಶಗಳು ಹಾಗೂ ಮುಂದಿನ ಯೋಜನೆಗಳ ಕುರಿತು ವಿವರಣೆ ನೀಡಲಾಗುವುದು.
ಆನಂತರ ಜಾಗತಿಕ ಸಿಇಒಗಳು ಮತ್ತು ತಜ್ಞರೊಂದಿಗೆ ಸಂವಾದ ಗೋಷ್ಠಿ ನಡೆಯಲಿದೆ. ಪ್ರಮುಖ ಜಾಗತಿಕ ತೈಲ ಮತ್ತು ಅನಿಲ ಕಂಪನಿಗಳಾದ ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿ ಸಿಇಒ ಮತ್ತು ಯುಎಇನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೈಗಾರಿಕಾ ಸಚಿವ ಗೌರವಾನ್ವಿತ ಡಾ. ಸುಲ್ತಾನ್ ಅಹ್ಮದ್ ಅಲ್ ಜಬೇರ್, ಕತಾರ್ ನ ಇಂಧನ ವ್ಯವಹಾರಗಳ ರಾಜ್ಯ ಸಚಿವ ಗೌರವಾನ್ವಿತ ಸಾದ್ ಶರೀದ ಅಲ್-ಕಾಬಿ, ಕತಾರ್ ಪೆಟ್ರೋಲಿಯಂ ಕಂಪನಿಯ ಸಿಇಒ ಮತ್ತು ಅಧ್ಯಕ್ಷರು, ಉಪಾಧ್ಯಕ್ಷರು, ಆಸ್ಟ್ರಿಯಾದ ಒಪೆಕ್ ನ ಮಹಾಪ್ರಧಾನ ಕಾರ್ಯದರ್ಶಿ ಗೌರವಾನ್ವಿತ ಮೊಹಮ್ಮದ್ ಸಾನುಸಿ ಬರ್ಕಿಂಡೋ ಅವರು ತೈಲ ಮತ್ತು ಅನಿಲ ವಲಯಕ್ಕೆ ಸಂಬಂಧಿಸಿದಂತೆ ನಡೆಯುವ ಗೋಷ್ಠಿಯ ನೇತೃತ್ವವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.
ರಷ್ಯಾದ ರೋಸ್ನೆಫ್ಟ್ ನ ಸಿಇಒ ಮತ್ತು ಅಧ್ಯಕ್ಷ ಡಾ. ಇಗೋರ್ ಸೆಚಿನ್, ಬಿಪಿ ಲಿಮಿಟೆಡ್ ನ ಸಿಇಒ ಶ್ರೀ ಬರ್ನಾರ್ಡ್ ಲೂನಿ, ಫ್ರಾನ್ಸ್ ನ ಟೋಟಲ್ ಎಸ್.ಎ.ನ ಸಿಇಒ ಮತ್ತು ಅಧ್ಯಕ್ಷ ಶ್ರೀ ಪ್ಯಾಟ್ರಿಕ್ ಪೌಯನ್ನೆ , ವೇದಾಂತ ರಿಸೋರ್ಸ್ ಲಿಮಿಟೆಡ್ ನ ಅಧ್ಯಕ್ಷ ಶ್ರೀ ಅನಿಲ್ ಅಗರ್ ವಾಲ್, ಆರ್ ಐಎಲ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಮುಖೇಶ್ ಅಂಬಾನಿ, ಫ್ರಾನ್ಸ್ ನ ಅಂತಾರಾಷ್ಟ್ರೀಯ ಇಂಧನ ಏಜೆನ್ಸಿಯ ಕಾರ್ಯಕಾರಿ ನಿರ್ದೇಶಕ ಡಾ. ಫಾತಿಹ್ ಬಿರೋಲ್, ಸೌದಿ ಅರೆಬಿಯಾದ ಅಂತಾರಾಷ್ಟ್ರೀಯ ಇಂಧನ ವೇದಿಕೆಯ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಜೋಸೆಫ್ ಮೆಕ್ ಮೊನಿಗ್ಲೆ, ಜಿಎಫ್ ಸಿಎಫ್ ನ ಪ್ರಧಾನ ಕಾರ್ಯದರ್ಶಿ ಯೂರಿ ಸೆಂಟ್ಯುರಿನ್ ಅವರುಗಳು ಕೂಡ ಗೌರವಾನ್ವಿತ ಪ್ರಧಾನಮಂತ್ರಿಗಳೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ಪ್ರಮುಖ ತೈಲ ಮತ್ತು ಅನಿಲ ಕಂಪನಿಗಳಾದ ಲಿಯಾಂಡೆಲ್ ಬಾಸಲ್, ಟೆಲ್ಲುರಿಯನ್, ಷ್ಲಂಬರ್ಗರ್, ಬೇಕರ್ ಹ್ಯೂಸ್, ಜೆರಾ, ಎಮರ್ಸನ್ ಮತ್ತು ಎಕ್ಸ್-ಕೋಲ್, ಭಾರತೀಯ ತೈಲ ಮತ್ತು ಅನಿಲ ಕಂಪನಿಗಳು ಕೂಡ ತಮ್ಮ ಮುನ್ನೋಟವನ್ನು ಹಂಚಿಕೊಳ್ಳಲಿವೆ.
ಇದಕ್ಕೂ ಮುನ್ನ ಪ್ರಧಾನಮಂತ್ರಿ ಅವರು, ಸೆರಾ ವೀಕ್ ಆಯೋಜಿಸಿರುವ 4ನೇ ಭಾರತೀಯ ಇಂಧನ ವೇದಿಕೆಯನ್ನು ಉದ್ಘಾಟಿಸಲಿದ್ದಾರೆ. ಕ್ರಿಟಿಕಲ್ ಇನ್ಫಾರ್ಮೇಶನ್ ಅನಾಲಿಟಿಕ್ಸ್ ಮತ್ತು ಸೊಲ್ಯೂಶನ್ ನ ಜಾಗತಿಕ ಕಂಪನಿಯಾದ ಎಚ್ಐಎಸ್ ಮಾರ್ಕಿಟ್ ಇದರ ಆತಿಥ್ಯವನ್ನುವಹಿಸಿದೆ. ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಗುಂಪಿನ ಭಾಷಣಕಾರರು ಮತ್ತು ಭಾರತ ಮತ್ತು ಸುಮಾರು 30 ದೇಶಗಳ ಪ್ರಾದೇಶಿಕ ಇಂಧನ ಕಂಪನಿಗಳು, ಇಂಧನ ಸಂಬಂಧಿ ಕೈಗಾರಿಕೆಗಳು, ಸಂಸ್ಥೆಗಳು ಮತ್ತು ಸರ್ಕಾರಗಳ ಪ್ರತಿನಿಧಿಗಳು ಒಂದು ಸಾವಿರದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಉದ್ಘಾಟನಾ ಭಾಷಣಕಾರರಲ್ಲಿ ಇವರು ಸೇರಿದ್ದಾರೆ:
• ಎಚ್.ಆರ್.ಎಚ್. ಅಬ್ದುಲ್ ಅಜೀಜ್ ಬಿನ್ ಸಲ್ಮಾನ್ ಎಐ ಸೌದ್ – ಸೌದಿ ಅರೆಬಿಯಾ ಸಾಮ್ರಾಜ್ಯದ ಇಂಧನ ಸಚಿವರು ಮತ್ತು
• ಡಾನ್ ಬ್ರೌಲೆಟ್ -ಅಮೆರಿಕದ ಇಂಧನ ಕಾರ್ಯದರ್ಶಿ
• ಡಾ. ಡೇನಿಯಲ್ ಯರ್ಗಿನ್ – ಎಚ್ಐಎಸ್ ಮರ್ಕಿಟ್ ಉಪಾಧ್ಯಕ್ಷರು ಹಾಗೂ ಸೆರಾ ವೀಕ್ ಅಧ್ಯಕ್ಷರು
ಭಾರತ ಇಂಧನ ವೇದಿಕೆಯಲ್ಲಿ ಪ್ರಮುಖವಾಗಿ ಚರ್ಚೆಯಾಗುವ ವಿಷಯಗಳಲ್ಲಿ ಇವು ಸೇರಿವೆ: ಭಾರತದ ಭವಿಷ್ಯದ ಇಂಧನ ಬೇಡಿಕೆ ಮೇಲೆ ಸಾಂಕ್ರಾಮಿಕದ ಪರಿಣಾಮ; ಭಾರತದ ಆರ್ಥಿಕ ಪ್ರಗತಿಗೆ ಸುರಕ್ಷಿತ ಪೂರೈಕೆ; ಇಂಧನ ಪರಿವರ್ತನೆ ಮತ್ತು ಭಾರತಕ್ಕೆ ಹವಾಮಾನ ವೈಪರೀತ್ಯದ ವಿಷಯ; ಭಾರತದ ಇಂಧನ ಮಾರುಕಟ್ಟೆಯಲ್ಲಿ ನೈಸರ್ಗಿಕ ಅನಿಲ; ಮುಂದಿನ ಹಾದಿ; ಸಂಸ್ಕರಣೆ ಮತ್ತು ಪೆಟ್ರೋ ಕೆಮಿಕಲ್ಸ್; ಹೆಚ್ಚುವರಿಯ ಮಧ್ಯೆ ಕಾರ್ಯತಂತ್ರಗಳು, ಆವಿಷ್ಕಾರದ ವೇಗ; ಜೈವಿಕ ಇಂಧನ, ಹೈಡ್ರೋಜನ್, ಸಿಸಿಎಸ್, ಎಲೆಕ್ಟ್ರಾನಿಕ್ ವಾಹನಗಳು ಮತ್ತು ಡಿಜಿಟಲ್ ಪಾವತಿ ಹಾಗೂ ಮಾರುಕಟ್ಟೆ ಮತ್ತು ನಿಯಂತ್ರಣ ಸುಧಾರಣೆ; ಮುಂದಿನ ಹಾದಿ ?