ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 6ರಂದು ಮಧ್ಯಾಹ್ನ 12:30ಕ್ಕೆ ಮಧ್ಯಪ್ರದೇಶದಲ್ಲಿ ʻಸ್ವಾಮಿತ್ವʼ ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಈ ಯೋಜನೆಯಡಿ ಪ್ರಯೋಜನ ಪಡೆದ 1,71,000 ಫಲಾನುಭವಿಗಳಿಗೆ ಇ-ಆಸ್ತಿ ಕಾರ್ಡ್‌ಗಳನ್ನು ವಿತರಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಕೂಡ ಭಾಗವಹಿಸಲಿದ್ದಾರೆ.
ʻಸ್ವಾಮಿತ್ವʼ ಯೋಜನೆಯ ಕುರಿತು
ʻಸ್ವಾಮಿತ್ವʼವು ಪಂಚಾಯತ್ ರಾಜ್ ಸಚಿವಾಲಯದ ಕೇಂದ್ರ ವಲಯದ ಯೋಜನೆಯಾಗಿದ್ದು, ಇದು ಗ್ರಾಮೀಣ ಜನವಸತಿ ಪ್ರದೇಶಗಳ ನಿವಾಸಿಗಳಿಗೆ ಆಸ್ತಿ ಹಕ್ಕುಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ನಗರ ಪ್ರದೇಶಗಳಲ್ಲಿನ ಜನರಂತೆ ಗ್ರಾಮೀಣ ಪ್ರದೇಶದ ಜನರಿಗೂ ಸಾಲ ಮತ್ತಿತರ ಆರ್ಥಿಕ ಪ್ರಯೋಜನಗಳನ್ನು ಪಡೆಯಲು ತಮ್ಮ ಆಸ್ತಿಯನ್ನು ಆರ್ಥಿಕ ಸಾಧನವಾಗಿ (ಅಡಮಾನ) ಬಳಸಲು ದಾರಿ ಮಾಡಿಕೊಡುತ್ತದೆ. ಅತ್ಯಾಧುನಿಕ ಡ್ರೋನ್-ತಂತ್ರಜ್ಞಾನದ ಸಮೀಕ್ಷೆಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಜನರ ವಾಸ ಪ್ರದೇಶವನ್ನು ಪುನರ್‌ವಿಂಗಡಿಸುವ ಗುರಿಯನ್ನು ಇದು ಹೊಂದಿದೆ. ಈ ಯೋಜನೆಯು ದೇಶದಲ್ಲಿ ಡ್ರೋನ್ ತಯಾರಿಕೆ ಪರಿಸರ ವ್ಯವಸ್ಥೆಗೂ ಉತ್ತೇಜನ ನೀಡಿದೆ.
मध्य प्रदेश के ग्रामीण क्षेत्रों के हजारों लोग कल ई-प्रॉपर्टी कार्ड के साथ अपनी संपत्ति का मालिकाना हक प्राप्त करेंगे। दोपहर 12.30 बजे वीडियो कॉन्फ्रेंसिंग के जरिए ऐसे कई लाभार्थियों से संवाद का सुअवसर भी मिलेगा। https://t.co/YhjIzBhaWb
— Narendra Modi (@narendramodi) October 5, 2021