"ಜನ ಔಷಧ ದಿನ"ದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 7ರಂದು ಮಧ್ಯಾಹ್ನ 12:30ಕ್ಕೆ ಜನ ಔಷಧ ಕೇಂದ್ರದ ಮಾಲೀಕರು ಮತ್ತು ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಸಂವಾದಕ್ಕೂ ಮುನ್ನ ಪ್ರಧಾನಮಂತ್ರಿಯವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದ ವಿಷಯ "ಜನ ಔಷಧ-ಜನೋಪಯೋಗಿ”.
ಜನರಿಕ್ ಔಷಧಗಳ ಬಳಕೆ ಮತ್ತು ʻಜನೌಷಧ ಪರಿಯೋಜನೆʼಯ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಾರ್ಚ್ 1ರಿಂದ ದೇಶಾದ್ಯಂತ ಜನೌಷಧ ಸಪ್ತಾಹ ಆಚರಿಸಲಾಗುತ್ತಿದೆ. ಈ ವಾರದಲ್ಲಿ ʻಜನೌಷಧ ಸಂಕಲ್ಪ ಯಾತ್ರೆʼ, ʻಮಾತೃ ಶಕ್ತಿ ಸಮ್ಮಾನ್ʼ, ʻಜನೌಷಧ ಬಾಲ ಮಿತ್ರʼ, ʻಜನೌಷಧ ಜನ ಜಾಗರಣ ಅಭಿಯಾನʼ, ʻಆವೋ ಜನ ಔಷಧ ಮಿತ್ರ ಬನಾಯೆʼ ಮತ್ತು ʻಜನೌಷಧ ಜನ ಆರೋಗ್ಯ ಮೇಳʼ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಔಷಧಗಳನ್ನು ಕೈಗೆಟುಕುವಂತೆ ಮತ್ತು ನಾಗರಿಕರಿಗೆ ಲಭ್ಯವಾಗುವಂತೆ ಮಾಡುವ ಪ್ರಧಾನಮಂತ್ರಿಯವರ ಆಶಯಕ್ಕೆ ಅನುಗುಣವಾಗಿ, ಈಗ ದೇಶಾದ್ಯಂತ 8600ಕ್ಕೂ ಹೆಚ್ಚು ಜನೌಷಧ ಮಳಿಗೆಗಳಿವೆ, ಇದು ಬಹುತೇಕ ಪ್ರತಿಯೊಂದು ಜಿಲ್ಲೆಯಲ್ಲೂ ವ್ಯಾಪಿಸಿವೆ.