ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಸೆಪ್ಟೆಂಬರ್ 10 ರಂದು ಬೆಳಿಗ್ಗೆ 10:30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ‘ಕೇಂದ್ರ-ರಾಜ್ಯ ವಿಜ್ಞಾನ ಸಮಾವೇಶ’ವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ದೇಶದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಅನುಕೂಲವಾಗುವಂತೆ ಪ್ರಧಾನಿ ಅವರ ನಿರಂತರ ಪ್ರಯತ್ನಗಳಿಗೆ ಅನುಗುಣವಾಗಿ, ಇದೇ ಮೊದಲ ಬಾರಿಗೆ ಆಯೋಜಿಸಿರುವ ಕೇಂದ್ರ-ರಾಜ್ಯಗಳ ನಡುವೆ ಸಮನ್ವಯ ಮತ್ತು ಸಹಯೋಗದ ಕಾರ್ಯವಿಧಾನಗಳನ್ನು ಬಲಪಡಿಸುತ್ತದೆ, ಸಹಕಾರಿ ಒಕ್ಕೂಟದ ಉತ್ಸಾಹದಲ್ಲಿ ದೇಶಾದ್ಯಂತ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಪೂರಕ ಶ್ರೇಷ್ಠ ವಾತಾವರಣವನ್ನು (ಎಸ್ಐಟಿ) ನಿರ್ಮಿಸುವ ಉದ್ದೇಶ ಹೊಂದಲಾಗಿದೆ.
ಅಹಮದಾಬಾದ್‌ನ ವಿಜ್ಞಾನ ನಗರಿಯಲ್ಲಿ ಸೆಪ್ಟಂಬರ್ 10-11ರಂದು ಎರಡು ದಿನಗಳ ಶೃಂಗಸಭೆಯನ್ನು ಆಯೋಜಿಸಲಾಗಿದೆ. ಇದು ಎಸ್ ಟಿಐ ಮುನ್ನೋಟ 2047 ಸೇರಿದಂತೆ ವಿವಿಧ ವಿಷಯಾಧಾರಿತ ಕ್ಷೇತ್ರಗಳ ಕುರಿತು ಗೋಷ್ಠಿಗಳನ್ನು ಒಳಗೊಂಡಿರುತ್ತದೆ; ರಾಜ್ಯಗಳಲ್ಲಿ ಎಸ್ ಟಿಐ ಗಾಗಿ ಭವಿಷ್ಯದ ಬೆಳವಣಿಗೆಯ ಮಾರ್ಗಗಳು ಮತ್ತು ದೂರದೃಷ್ಟಿ; ಆರೋಗ್ಯ - ಸರ್ವರಿಗೂ ಡಿಜಿಟಲ್ ಆರೋಗ್ಯ ರಕ್ಷಣೆ; 2030 ರ ವೇಳೆಗೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಖಾಸಗಿ ವಲಯದ ಹೂಡಿಕೆ ದುಪಟ್ಟುಗೊಳಿಸುವುದು; ಕೃಷಿ - ರೈತರ ಆದಾಯ ಸುಧಾರಿಸಲು ತಾಂತ್ರಿಕ ಮಧ್ಯಪ್ರವೇಶ; ನೀರು - ಕುಡಿಯುವ ನೀರಿನ ಉತ್ಪಾದನೆಯಲ್ಲಿ ನಾವೀನ್ಯತೆ; ಇಂಧನ- ಹೈಡ್ರೋಜನ್ ಮಿಷನ್‌ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಸೇರಿದಂತೆ ಎಲ್ಲರಿಗೂ ಶುದ್ಧ ಇಂಧನ ಲಭ್ಯತೆ; ದೇಶದ ಭವಿಷ್ಯದ ಆರ್ಥಿಕತೆಗಾಗಿ ಆಳವಾದ ಸಾಗರ ಮಿಷನ್ ಮತ್ತು ಕರಾವಳಿ ರಾಜ್ಯಗಳು/ಕೇಂದ್ರಾಡಳಿತ ಪ್ರದೆಶಗಳಿಗೆ ಅದರ ಪ್ರಸ್ತುತತೆ ಕುರಿತಂತೆ ಚರ್ಚೆಗಳು ನಡೆಯಲಿದೆ.
ಈ ಬಗೆಯ ಮೊದಲ ಶೃಂಗಸಭೆ ಗುಜರಾತ್ ಮುಖ್ಯಮಂತ್ರಿ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ (ಎಸ್ &ಟಿ)ಖಾತೆ ಸಹಾಯಕರ ಸಚಿವರು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು, ಕಾರ್ಯದರ್ಶಿಗಳು, ಉದ್ಯಮದ ನಾಯಕರು, ಉದ್ಯಮಿಗಳು, ಸರ್ಕಾರೇತರ ಸಂಸ್ಥೆಗಳು, ಯುವ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಲಿದೆ.