Quoteಈ ಕ್ಯಾಂಪಸ್, ಕ್ಯಾನ್ಸರ್ ರೋಗಿಗಳಿಗೆ ವಿಶೇಷವಾಗಿ ದೇಶದ ಪೂರ್ವ ಮತ್ತು ಈಶಾನ್ಯ ಭಾಗಗಳಿಂದ ಬಂದವರಿಗೆ ಸಮಗ್ರ ಆರೈಕೆ ಒದಗಿಸಲಿದೆ
Quoteದೇಶಾದ್ಯಂತ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸುವ ಮತ್ತು ನವೀಕರಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿಗೆ ಅನುಗುಣವಾಗಿ ಈ ಕ್ಯಾಂಪಸ್‌ ನಿರ್ಮಾಣಗೊಂಡಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಜನವರಿ 7ರಂದು ಮಧ್ಯಾಹ್ನ 1 ಗಂಟೆಗೆ ಕೋಲ್ಕತ್ತಾದಲ್ಲಿ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ (ಸಿಎನ್‌ಸಿಐ) ಎರಡನೇ ಕ್ಯಾಂಪಸ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.

ದೇಶದ ಎಲ್ಲಾ ಭಾಗಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸುವ ಮತ್ತು ನವೀಕರಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿಗೆ ಅನುಗುಣವಾಗಿ ʻಸಿಎನ್‌ಸಿಐʼನ ಎರಡನೇ ಕ್ಯಾಂಪಸ್ ಅನ್ನು ನಿರ್ಮಿಸಲಾಗಿದೆ. ʻಸಿಎನ್‌ಸಿಐʼನಲ್ಲಿ ಕ್ಯಾನ್ಸರ್ ರೋಗಿಗಳ ಭಾರಿ ದಟ್ಟಣೆಯ ಹಿನ್ನೆಲೆಯಲ್ಲಿ  ಕೆಲ ಸಮಯದಿಂದಲೂ ವಿಸ್ತರಣೆಯ ಅಗತ್ಯ ಕಂಡು ಬಂದಿತ್ತು. ಎರಡನೇ ಕ್ಯಾಂಪಸ್ ಮೂಲಕ ಈ ಅಗತ್ಯವನ್ನು ಪೂರೈಸಲಾಗುತ್ತಿದೆ.

ʻಸಿಎನ್‌ಸಿಐʼನ ಎರಡನೇ ಕ್ಯಾಂಪಸ್ ಅನ್ನು 530 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿದೆ. 75:25 ಅನುಪಾತದಲ್ಲಿ ಇದರ ವೆಚ್ಚವನ್ನು ಹಂಚಿಕೊಳ್ಳಲಾಗಿದ್ದು, ಸುಮಾರು 400 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಒದಗಿಸಿದೆ ಮತ್ತು ಉಳಿದ ಮೊತ್ತವನ್ನು ಪಶ್ಚಿಮ ಬಂಗಾಳ ಸರಕಾರ ಭರಿಸಿದೆ. ಕ್ಯಾನ್ಸರ್ ರೋಗನಿರ್ಣಯ, ಸ್ಟೇಜಿಂಗ್, ಚಿಕಿತ್ಸೆ ಮತ್ತು ಆರೈಕೆಗಾಗಿ ಅತ್ಯಾಧುನಿಕ ಮೂಲಸೌಕರ್ಯವನ್ನು ಹೊಂದಿರುವ 460 ಹಾಸಿಗೆಗಳ ಸಮಗ್ರ ಕ್ಯಾನ್ಸರ್ ಕೇಂದ್ರ ಇದಾಗಿದೆ. ನ್ಯೂಕ್ಲಿಯರ್ ಮೆಡಿಸಿನ್ (ಪಿಇಟಿ), 3.0 ಟೆಸ್ಲಾ ಎಂಆರ್‌ಐ, 128 ಸ್ಲೈಸ್ ಸಿ.ಟಿ ಸ್ಕ್ಯಾನರ್, ರೇಡಿಯೋ ನ್ಯೂಕ್ಲೈಡ್ ಥೆರಪಿ ಘಟಕ, ಎಂಡೋಸ್ಕೋಪಿ ವ್ಯವಸ್ಥೆ, ಆಧುನಿಕ ಬ್ರಾಕಿಥೆರಪಿ ಕೇಂದ್ರ ಮುಂತಾದ ಅತ್ಯಾಧುನಿಕ ಸೌಲಭ್ಯಗಳನ್ನು ಈ ಕ್ಯಾಂಪಸ್‌ ಹೊಂದಿದೆ. ಸುಧಾರಿತ ಕ್ಯಾನ್ಸರ್ ಸಂಶೋಧನಾ ಕೇಂದ್ರವಾಗಿಯೂ ಕ್ಯಾಂಪಸ್  ಕಾರ್ಯನಿರ್ವಹಿಸಲಿದೆ. ಕ್ಯಾನ್ಸರ್ ರೋಗಿಗಳಿಗೆ, ವಿಶೇಷವಾಗಿ ದೇಶದ ಪೂರ್ವ ಮತ್ತು ಈಶಾನ್ಯ ಭಾಗಗಳಿಂದ ಬಂದವರಿಗೆ ಸಮಗ್ರ ಆರೈಕೆಯನ್ನು ಒದಗಿಸುತ್ತದೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
For PM Modi, women’s empowerment has always been much more than a slogan

Media Coverage

For PM Modi, women’s empowerment has always been much more than a slogan
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 8 ಮಾರ್ಚ್ 2025
March 08, 2025

Citizens Appreciate PM Efforts to Empower Women Through Opportunities