Quoteಹಿಂದಿನ ರಾಜಪಥವು ಕರ್ತವ್ಯ ಮಾರ್ಗವಾಗಿ ಅಧಿಕಾರದ ಚಿತ್ರಾತ್ಮಕ ಸಂತೇಕವಾಗಿ ಪರಿವರ್ತನೆಯಾಗುತ್ತಿದ್ದು, ಸಾರ್ವಜನಿಕ ಮಾಲೀಕತ್ವ ಮತ್ತು ಸಬಲೀಕರಣದ ಸ್ಪಷ್ಟ ಉದಾಹರಣೆ ಎಂಬುದನ್ನು ಸಂಕೇತಿಸಲಿದೆ
Quoteಪ್ರಧಾನಮಂತ್ರಿ ಅವರ 'ಪಂಚ ಪ್ರಾಣ' ಸೂತ್ರಕ್ಕೆ ಅನುಗುಣವಾಗಿ: 'ವಸಾಹತುಶಾಹಿ ಮನಸ್ಥಿತಿಯ ಕುರುಹುಗಳನ್ನು ತೆಗೆದುಹಾಕಲಿದೆ'
Quoteಸುಧಾರಿತ ಸಾರ್ವಜನಿಕ ಸ್ಥಳಗಳು ಮತ್ತು ವಾಕ್‌ವೇಗಳೊಂದಿಗೆ ಹುಲ್ಲುಹಾಸುಗಳು, ಹೆಚ್ಚುವರಿ ಹಸಿರು ಸ್ಥಳಗಳು, ನವೀಕರಿಸಿದ ಕಾಲುವೆಗಳು, ಸುಧಾರಿತ ಸಂಕೇತಗಳು, ಹೊಸ ಸೌಕರ್ಯ ಬ್ಲಾಕ್‌ಗಳು ಮತ್ತು ಮಾರಾಟ ಕಿಯೋಸ್ಕ್‌ಗಳು ಸೇರಿದಂತೆ ಸುಧಾರಿತ ಸಾರ್ವಜನಿಕ ಸ್ಥಳಗಳನ್ನು ಪ್ರದರ್ಶಿಸಲಿದೆ ಕರ್ತವ್ಯ ಮಾರ್ಗ
Quoteಹೊಸ ಪಾದಚಾರಿ ಅಂಡರ್‌ಪಾಸ್‌ಗಳು, ಸುಧಾರಿತ ಪಾರ್ಕಿಂಗ್ ಸ್ಥಳಗಳು, ಹೊಸ ಪ್ರದರ್ಶನ ಫಲಕಗಳು ಮತ್ತು ನವೀಕೃತ ರಾತ್ರಿ ದೀಪಗಳು ಸಾರ್ವಜನಿಕ ಅನುಭವವನ್ನು ವೈಭವೀಕರಿಸಲಿವೆ.
Quoteಕರ್ತವ್ಯ ಮಾರ್ಗವು ಘನತ್ಯಾಜ್ಯ ನಿರ್ವಹಣೆ, ಬಳಸಿದ ನೀರಿನ ಮರುಬಳಕೆ, ಮಳೆನೀರು ಕೊಯ್ಲು ಮತ್ತು ಇಂಧನ ದಕ್ಷ ಬೆಳಕಿನ ವ್ಯವಸ್ಥೆಗಳಂತಹ ಹಲವಾರು ಸುಸ್ಥಿರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ಸೆಪ್ಟೆಂಬರ್ 8ರಂದು ಸಂಜೆ 7 ಗಂಟೆಗೆ 'ಕರ್ತವ್ಯ ಪಥ' ಉದ್ಘಾಟಿಸಲಿದ್ದಾರೆ. ಇದು ಹಿಂದಿನ ರಾಜಪಥವನ್ನು ಕರ್ತವ್ಯ ಮಾರ್ಗವಾಗಿ ಪರಿವರ್ತಿಸಲಿದ್ದು, ಆಡಳಿತ ಅಥವಾ ಅಧಿಕಾರದ ಚಿತ್ರಾತ್ಮಕ ಸಂಕೇತವಾಗಿ, ಸಾರ್ವಜನಿಕ ಮಾಲೀಕತ್ವ ಮತ್ತು ಸಬಲೀಕರಣದ ಉದಾಹರಣೆಯಾಗಿ ಹೊಸ ಬದಲಾವಣೆಯನ್ನು ಸಂಕೇತಿಸುತ್ತದೆ. ಇದೇ ಸಂದರ್ಭದಲ್ಲಿ ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ಪ್ರಧಾನಿ ಅವರು ಅನಾವರಣಗೊಳಿಸಲಿದ್ದಾರೆ. ಈ ಕ್ರಮಗಳು ಅಮೃತ ಕಾಲಘಟ್ಟದ ನವ ಭಾರತ ಕಟ್ಟುವ ಪ್ರಧಾನ ಮಂತ್ರಿ ಅವರ 2ನೇ 'ಪಂಚ ಪ್ರಾಣ' ಸೂತ್ರಕ್ಕೆ ಅನುಗುಣವಾಗಿವೆ: 'ವಸಾಹತುಶಾಹಿ ಮನಸ್ಥಿತಿಯ ಯಾವುದೇ ಕುರುಹುಗಳನ್ನು ಇಲ್ಲಿಂದ ತೆಗೆದುಹಾಕಲಾಗುತ್ತಿದೆ'.

ಹಲವಾರು ವರ್ಷಗಳಿಂದಲೂ ರಾಜ್‌ಪಥ್ ಮತ್ತು ಸೆಂಟ್ರಲ್ ವಿಸ್ಟಾ ಅವೆನ್ಯೂ ಅಕ್ಕಪಕ್ಕದ ಪ್ರದೇಶಗಳು ಪ್ರವಾಸಿಗರು ಮತ್ತು ಸಂದರ್ಶಕರ ದಟ್ಟಣೆಯ ಒತ್ತಡಕ್ಕೆ ಸಾಕ್ಷಿಯಾಗುತ್ತಿವೆ. ಇದರಿಂದ ಸ್ಥಳೀಯ ಮೂಲಸೌಕರ್ಯಗಳ ಮೇಲೆ ಒತ್ತಡ ಬೀರುತ್ತಿವೆ. ಸಾರ್ವಜನಿಕ ಶೌಚಾಲಯಗಳು, ಕುಡಿಯುವ ನೀರು, ಬೀದಿ ಪೀಠೋಪಕರಣಗಳು ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳದಂತಹ ಮೂಲಸೌಕರ್ಯಗಳ ಕೊರತೆಯಿದೆ. ಇದಲ್ಲದೆ, ಅಸಮರ್ಪಕ ಫಲಕಗಳು, ನೀರಿನ ವೈಶಿಷ್ಟ್ಯಗಳ ಕಳಪೆ ನಿರ್ವಹಣೆ ಮತ್ತು ಅಡ್ಡಾದಿಡ್ಡಿ ಪಾರ್ಕಿಂಗ್ ಅವ್ಯವಸ್ಥೆ ಇಲ್ಲಿತ್ತು. ಅಲ್ಲದೆ, ಸಾರ್ವಜನಿಕ ಚಲನವಲನದ ಮೇಲೆ ಕನಿಷ್ಠ ನಿರ್ಬಂಧಗಳೊಂದಿಗೆ ಗಣರಾಜ್ಯೋತ್ಸವದ ಪರೇಡ್ ಮತ್ತು ಇತರ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಬಿಗಿಭದ್ರತೆ ಮತ್ತು ಸಾರ್ವಜನಿಕರು ಮತ್ತು ವಾಹನಗಳ ನಿಯಂತ್ರಣ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತಿತ್ತು. ಈ ಎಲ್ಲಾ ಕಳವಳಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ರಾಜಪಥ ಪ್ರದೇಶವನ್ನು ಸಂಪೂರ್ಣ ಮರುಅಭಿವೃದ್ಧಿ ಪಡಿಸಲಾಗಿದೆ. ವಾಸ್ತುಶಿಲ್ಪ ಸ್ವರೂಪದ ಸಮಗ್ರತೆ ಮತ್ತು ನಿರಂತರತೆಯನ್ನು ಖಾತ್ರಿಪಡಿಸಲಾಗಿದೆ.

ಕರ್ತವ್ಯ ಪಥದ ಆಸುಪಾಸಿನಲ್ಲಿ ಸುಂದರವಾದ ಭೂಸದೃಶ್ಯಗಳು, ಕಾಲ್ನಡಿಗೆಗೆ ಹುಲ್ಲುಹಾಸುಗಳು, ಹೆಚ್ಚುವರಿ ಹಸಿರು ಸ್ಥಳಗಳು, ನವೀಕರಿಸಿದ ಕಾಲುವೆಗಳು, ಹೊಸ ಸೌಕರ್ಯದ ಬ್ಲಾಕ್ ಗಳು, ಸುಧಾರಿತ ಸಂಕೇತಗಳು ಮತ್ತು ಮಾರಾಟ ಕಿಯೋಸ್ಕ್ ಗಳನ್ನು ರೂಪಿಸಲಾಗಿದೆ. ಇದಲ್ಲದೆ, ಹೊಸ ಪಾದಚಾರಿ ಅಂಡರ್‌ಪಾಸ್‌ಗಳು, ಸುಧಾರಿತ ಪಾರ್ಕಿಂಗ್ ಸ್ಥಳಗಳು, ಹೊಸ ಪ್ರದರ್ಶನ ಫಲಕಗಳು ಮತ್ತು ನವೀಕೃತ ರಾತ್ರಿ ದೀಪಗಳು ಸಾರ್ವಜನಿಕ ಅನುಭವವನ್ನು ಶ್ರೀಮಂತಗೊಳಿಸುವ ಕೆಲವು ವೈಶಿಷ್ಟ್ಯಗಳಾಗಿವೆ. ಇಲ್ಲಿ ಘನತ್ಯಾಜ್ಯ ನಿರ್ವಹಣೆ, ಮಳೆನೀರು ನಿರ್ವಹಣೆ, ಬಳಸಿದ ನೀರಿನ ಮರುಬಳಕೆ, ಮಳೆನೀರು ಕೊಯ್ಲು, ನೀರಿನ ಸಂರಕ್ಷಣೆ ಮತ್ತು ಇಂಧನ ದಕ್ಷ ಬೆಳಕಿನ ವ್ಯವಸ್ಥೆಗಳಂತಹ ಹಲವಾರು ಸುಸ್ಥಿರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 23ರಂದು ಪರಾಕ್ರಮ್ ದಿವಸ ನೇತಾಜಿ ಅವರ ಹೊಲೊಗ್ರಾಮ್ ಪ್ರತಿಮೆ ಅನಾವರಣಗೊಳಿಸಿದ ಸ್ಥಳದಲ್ಲೇ ಸ್ಥಾಪಿಸಲಾಗಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ಪ್ರಧಾನಿ ಅವರು ಅನಾವರಣಗೊಳಿಸಲಿದ್ದಾರೆ. ಗ್ರಾನೈಟ್‌ನಿಂದ ನಿರ್ಮಿಸಲಾದ ಈ ಪ್ರತಿಮೆಯು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಅವರು ನೀಡಿರುವ ಅಪಾರ ಕೊಡುಗೆಯನ್ನು ಸ್ಮರಿಸುವ, ಗೌರವಿಸುವ ಸಂಕೇತವಾಗಲಿದೆ. ಇದು ದೇಶವು ಅವರಿಗೆ ನೀಡುತ್ತಿರುವ ಚಿರಋಣಿಯ ಸಂಕೇತವಾಗಿದೆ. ಮುಖ್ಯ ವಾಸ್ತುಶಿಲ್ಪಿ  ಶ್ರೀ ಅರುಣ್ ಯೋಗಿರಾಜ್ ಅವರು ಈ ಪ್ರತಿಮೆ ನಿರ್ಮಿಸಿದ್ದು, 28 ಅಡಿ ಎತ್ತರದ ಪುತ್ಥಳಿಯನ್ನು ಏಕಶಿಲೆಯ ಗ್ರಾನೈಟ್ ಕಲ್ಲಿನಿಂದ ಕೆತ್ತಲಾಗಿದೆ. ಇದು 65 ಮೆಟ್ರಿಕ್ ಟನ್ ತೂಕವಿದೆ.

 

  • ranjeet kumar September 13, 2022

    jay sri ram🙏🙏
  • Chowkidar Margang Tapo September 13, 2022

    namo namo namo namo namo bharat,.
  • SRS is SwayamSewak of RSS September 13, 2022

    आजादी के अमृत काल के लिए प्रधानमंत्री श्री नरेन्द्र मोदी जी के 'पंच प्रण'... 1- विकसित भारत 2- गुलामी के हर अंश से मुक्ति 3- विरासत पर गर्व 4- एकता और एकजुटता 5- नागरिकों का कर्तव्य
  • Biki choudhury September 11, 2022

    जय श्री राम और हमेशा काम करना पडता है देश और भविष्य के लिए । ऊँ नमः सिवाय
  • Manda krishna BJP Telangana Mahabubabad District mahabubabad September 11, 2022

    🚩🚩🚩🚩🚩🚩
  • Manda krishna BJP Telangana Mahabubabad District mahabubabad September 11, 2022

    🚩🚩🚩🚩🚩🚩
  • SRS is SwayamSewak of RSS September 11, 2022

    भये प्रगट गोपाला दीनदयाला यशुमति के हितकारी। हर्षित महतारी सुर मुनि हारी मोहन मदन मुरारी ॥ कंसासुर जाना मन अनुमाना पूतना वेगी पठाई। तेहि हर्षित धाई मन मुस्काई गयी जहाँ यदुराई॥ तब जाय उठायो हृदय लगायो पयोधर मुख मे दीन्हा। तब कृष्ण कन्हाई मन मुस्काई प्राण तासु हर लीन्हा॥ जब इन्द्र रिसायो मेघ पठायो बस ताहि मुरारी। गौअन हितकारी सुर मुनि हारी नख पर गिरिवर धारी॥ कन्सासुर मारो अति हँकारो बत्सासुर संघारो। बक्कासुर आयो बहुत डरायो ताक़र बदन बिडारो॥ तेहि अतिथि न जानी प्रभु चक्रपाणि ताहिं दियो निज शोका। ब्रह्मा शिव आये अति सुख पाये मगन भये गये लोका॥ यह छन्द अनूपा है रस रूपा जो नर याको गावै। तेहि सम नहि कोई त्रिभुवन सोयी मन वांछित फल पावै॥ नंद यशोदा तप कियो, मोहन सो मन लाय। देखन चाहत बाल सुख, रहो कछुक दिन जाय॥ जेहि नक्षत्र मोहन भये, सो नक्षत्र बड़िआय। चार बधाई रीति सो, करत यशोदा माय॥
  • SRS is SwayamSewak of RSS September 11, 2022

    दारू पियो तो जेल। हत्या करो तो बेल। बिहार में चल रहा सरकार का ये नया खेल। आये दिन हो रहे हत्या और बलात्कार। ऐसे में आम जनता का जीना हुआ मुहाल। लालू नितीश की दोस्ती से मचा ये बवाल। बिहार में अब क्या होगा जनता पूछ रही यही सवाल??
  • hari shankar shukla September 10, 2022

    नमो नमो
  • Chowkidar Margang Tapo September 10, 2022

    naya bharat sashakt bharat....
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
MiG-29 Jet, S-400 & A Silent Message For Pakistan: PM Modi’s Power Play At Adampur Airbase

Media Coverage

MiG-29 Jet, S-400 & A Silent Message For Pakistan: PM Modi’s Power Play At Adampur Airbase
NM on the go

Nm on the go

Always be the first to hear from the PM. Get the App Now!
...
We are fully committed to establishing peace in the Naxal-affected areas: PM
May 14, 2025

The Prime Minister, Shri Narendra Modi has stated that the success of the security forces shows that our campaign towards rooting out Naxalism is moving in the right direction. "We are fully committed to establishing peace in the Naxal-affected areas and connecting them with the mainstream of development", Shri Modi added.

In response to Minister of Home Affairs of India, Shri Amit Shah, the Prime Minister posted on X;

"सुरक्षा बलों की यह सफलता बताती है कि नक्सलवाद को जड़ से समाप्त करने की दिशा में हमारा अभियान सही दिशा में आगे बढ़ रहा है। नक्सलवाद से प्रभावित क्षेत्रों में शांति की स्थापना के साथ उन्हें विकास की मुख्यधारा से जोड़ने के लिए हम पूरी तरह से प्रतिबद्ध हैं।"