ಕಾಮನ್ ವೆಲ್ತ್ ಕಾನೂನು ಶಿಕ್ಷಣ ಸಂಘ - ಕಾಮನ್ ವೆಲ್ತ್ ವಕೀಲರು ಮತ್ತು ಸಾಲಿಸಿಟರ್ಸ್ ಜನರಲ್ ಕಾನ್ಫರೆನ್ಸ್  2024 ಅನ್ನು 3 ನೇ ಫೆಬ್ರವರಿ, 2024 ರಂದು ಬೆಳಿಗ್ಗೆ 10 ಗಂಟೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಜ್ಞಾನ ಭವನದಲ್ಲಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು  ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

"ನ್ಯಾಯ ವಿತರಣೆಯಲ್ಲಿ ಗಡಿಯಾಚೆಗಿನ ಸವಾಲುಗಳು" ಎಂಬುದು ಸಮ್ಮೇಳನದ ಪ್ರಧಾನ ವಿಷಯವಾಗಿದೆ. ನ್ಯಾಯಾಂಗ ಪರಿವರ್ತನೆ ಮತ್ತು ಕಾನೂನು ಅಭ್ಯಾಸದ ನೈತಿಕ ಆಯಾಮಗಳಂತಹ ಕಾನೂನು ಮತ್ತು ನ್ಯಾಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು, ಕಾರ್ಯನಿರ್ವಾಹಕ ಹೊಣೆಗಾರಿಕೆ; ಮತ್ತು ಆಧುನಿಕ ಕಾಲದ ಕಾನೂನು ಶಿಕ್ಷಣವನ್ನು ಮರುಪರಿಶೀಲಿಸುವುದು, ಇತ್ಯಾದಿಗಳನ್ನು ಈ ಸಮ್ಮೇಳನವು ದೀರ್ಘವಾಗಿ ಚರ್ಚಿಸಲಿದೆ.

ಈ ಸಮ್ಮೇಳನದಲ್ಲಿ ಏಷ್ಯಾ-ಪೆಸಿಫಿಕ್, ಆಫ್ರಿಕಾ, ಮತ್ತು ಕೆರಿಬಿಯನ್ ದೇಶಗಳ ಕಾಮನ್ ವೆಲ್ತ್ ರಾಷ್ಟ್ರಗಳ ಅಟಾರ್ನಿ ಜನರಲ್ ಗಳು ಮತ್ತು ಸಾಲಿಸಿಟರ್ ಗಳು ವಿವಿಧ ಅಂತರರಾಷ್ಟ್ರೀಯ ನಿಯೋಗಗಳೊಂದಿಗೆ ಭಾಗವಹಿಸಲಿದ್ದಾರೆ. ಕಾಮನ್ ವೆಲ್ತ್ ಕಾನೂನು ಭ್ರಾತೃತ್ವದಲ್ಲಿ ವಿವಿಧ ಮಧ್ಯಸ್ಥಗಾರರ ನಡುವೆ ಸಂವಹನಕ್ಕಾಗಿ ವೇದಿಕೆಯನ್ನು ನೀಡುವ ಮೂಲಕ ಸಮ್ಮೇಳನವು ಒಂದು ಅನನ್ಯ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಕಾನೂನು ಶಿಕ್ಷಣ ಮತ್ತು ಬಹುರಾಷ್ಟ್ರೀಯ ನ್ಯಾಯ ವಿತರಣೆಯಲ್ಲಿನ ಸವಾಲುಗಳನ್ನು ಎದುರಿಸಲು ಸಮಗ್ರ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ಅಟಾರ್ನಿಗಳು ಮತ್ತು ಸಾಲಿಸಿಟರ್ಸ್ ಜನರಲ್ ಗೆ ಅನುಗುಣವಾಗಿ ವಿಶೇಷವಾದ ದುಂಡು ಮೇಜಿನ (ರೌಂಡ್ ಟೇಬಲ್ ) ಸಭೆಗಳು / ಸಮ್ಮೇಳನಗಳನ್ನು ಸಹ ಈ ಸಮಾವೇಶ ಹೊಂದಿರುತ್ತದೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India Doubles GDP In 10 Years, Outpacing Major Economies: IMF Data

Media Coverage

India Doubles GDP In 10 Years, Outpacing Major Economies: IMF Data
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 23 ಮಾರ್ಚ್ 2025
March 23, 2025

Appreciation for PM Modi’s Effort in Driving Progressive Reforms towards Viksit Bharat