Quoteಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ದೂರದ ಪ್ರದೇಶಗಳಿಗೆ ಪ್ರವೇಶ ಸುಗಮಗೊಳಿಸುವ ಹಾಗೂ ಸಂಪರ್ಕ ಹೆಚ್ಚಿಸುವ ಯೋಜನೆಗಳು
Quoteದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್‌ನಿಂದ ಪ್ರಯಾಣದ ಅವಧಿ 2.5 ಗಂಟೆಗೆ ತಗ್ಗಲಿದೆ: ವನ್ಯ ಜೀವಿಗಳ ಅನಿಯಂತ್ರಿತ ಚಲನೆಗಾಗಿ ಏಷ್ಯಾದ ಅತಿದೊಡ್ಡ ಎತ್ತರಿಸಿದ ವನ್ಯಜೀವಿ ಕಾರಿಡಾರ್‌ಗೆ ಚಾಲನೆ
Quoteಉದ್ಘಾಟನೆಗೊಳ್ಳುತ್ತಿರುವ ರಸ್ತೆ ಯೋಜನೆಗಳು ಚಾರ್ ಧಾಮ್ ಒಳಗೊಂಡಂತೆ ಈ ಭಾಗದಲ್ಲಿ ತಡೆರಹಿತ ಸಂಪರ್ಕ ಒದಗಿಸುವ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ
Quoteದೀರ್ಘಕಾಲೀನ ಭೂ ಕುಸಿತ ವಲಯದಲ್ಲಿ ತೀವ್ರ ಪ್ರಮಾಣದ ಭೂಕುಸಿತ ತಗ್ಗಿಸುವ ಜತೆಗೆ ಪ್ರಯಾಣವನ್ನು ಸುಗಮ ಮತ್ತು ಸುರಕ್ಷಿತಗೊಳಿಸುತ್ತದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ರ ಡಿಸೆಂಬರ್ 4 ರಂದು ಸುಮಾರು 18,000 ಕೋಟಿ ರೂಪಾಯಿ ಮೊತ್ತದ ಬಹು ಹಂತದ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿಯವರ ಈ ಭೇಟಿಯಿಂದ ಈ ಭಾಗದ ರಸ್ತೆ ವಲಯದ ಮೂಲ ಸೌಲಭ್ಯ ಸುಧಾರಣೆ ಮತ್ತು ಪ್ರವಾಸಿಗರ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಸಹಕಾರಿಯಾಗಲಿದೆ. ಒಂದು ಕಾಲದಲ್ಲಿ ದೂರದ ಪ್ರದೇಶಗಳೆಂದು ಪರಿಗಣಿಸಲ್ಪಟ್ಟ ಪ್ರದೇಶಗಳಲ್ಲಿ ಸಂಪರ್ಕ ಹೆಚ್ಚಿಸುವ ಪ್ರಧಾನಮಂತ್ರಿ ಅವರ ದೂರದೃಷ್ಟಿಗೆ ಈ ಯೋಜನೆಗಳು ಅನುಗುಣವಾಗಿವೆ. 

ಪ್ರಧಾನಮಂತ್ರಿ ಅವರು 11 ಅಭಿವೃದ್ದಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರಲ್ಲಿ ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ [ಪೂರ್ವ ವರ್ತುಲ ಎಕ್ಸ್ ಪ್ರೆಸ್ ಹೆದ್ದಾರಿ ಭಾಗದಿಂದ ಡೆಹ್ರಾಡೂನ್‌ವರೆಗೆ] ಗಾಗಿ 8,300 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಇದರಿಂದ ದೆಹಲಿ – ಡೆಹ್ರಾಡೂನ್ ನಡುವಿನ ಆರು ಗಂಟೆಗಳ ಪ್ರಯಾಣದ ಅವಧಿ 2.5 ಗಂಟೆಗಳಿಗೆ ಇಳಿಕೆಯಾಗಲಿದೆ. ಹರಿದ್ವಾರ್‌ಗೆ ಏಳು ಅಂತರ್ ಬದಲಾವಣೆಯ ಸಂಪರ್ಕ ಮಾರ್ಗಗಳಿವೆ. ಮುಜಫರ್ ನಗರ್, ಶಾಮ್ಲಿ, ಯಮುನಗರ್, ಭಾಗ್ಪೇಟ್, ಮೀರುತ್ ಮತ್ತು ಬರೌತ್ ಸೇರಿವೆ. ಏಷ್ಯಾದ ಅತಿದೊಡ್ಡ ವನ್ಯಜೀವಿ ಕಾರಿಡಾರ್ [12 ಕಿಲೋಮೀಟರ್] ಸಹ ಇದರಲ್ಲಿ ಸೇರಿದ್ದು, ವನ್ಯಜೀವಿಗಳು ಅನಿಯಂತ್ರಿತವಾಗಿ ಪ್ರಯಾಣಿಸಲು ಸಹಕಾರಿಯಾಗಲಿದೆ. 340 ಮೀಟರ್ ದಾತ್ ಕಾಳಿ ದೇವಾಲಯದ ಸುರಂಗ ಮಾರ್ಗ ಸಹ ಇದರಲ್ಲಿ ಸೇರಿದ್ದು, ಡೆಹ್ರಾಡೂನ್‌ನ ವನ್ಯಜೀವಿ ವಲಯದ  ಮೇಲೆ ಪರಿಣಾಮ ತಗ್ಗಲಿದೆ. ಇದಲ್ಲದೇ ವನ್ಯಜೀವಿ ಮತ್ತು ವಾಹನಗಳ ಘರ್ಷಣೆ ತಪ್ಪಿಸಲು ಗಣೇಶ್ ಪುರ್ – ಡೆಹ್ರಾಡೂನ್ ವಿಭಾಗದಲ್ಲಿ ಬಹು ಹಂತದ ಪ್ರಾಣಿಗಳ ಪಾಸ್ ಗಳನ್ನು ಸಹ ಒದಗಿಸಲಾಗಿದೆ. ದೆಹಲಿ – ಡೆಹ್ರಾಡೂನ್ ಆರ್ಥಿಕ ಕಾರಿಡಾರ್‌ನಲ್ಲಿ ಪ್ರತಿ 500 ಮೀಟರ್ ದೂರದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಲಾಗಿದ್ದು, 400ಕ್ಕೂ ಹೆಚ್ಚು ಜಲ ಮರುಪೂರಣದ ಕೇಂದ್ರಗಳ ನಡುವೆ ಮಳೆ ನೀರು ಕೋಯ್ಲು ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ. 

ದೆಹಲಿ – ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ನಲ್ಲಿ 2000 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಹಲ್ಗೋವ, ಸಹರಾನ್ ಪುರ್ ನಿಂದ ಭದ್ರಬಾದ್, ಹರಿದ್ವಾರ್‌ಗೆ ಸಂಪರ್ಕ ಕಲ್ಪಿಸುವ ಗ್ರೀನ್ ಪೀಲ್ಡ್ ಜೋಡಣೆ ಕುರಿತಾದ ಯೋಜನೆಗಳು ಸಹ ಇದರಲ್ಲಿ ಸೇರಿವೆ. ದೆಹಲಿ – ಡೆಹ್ರಾಡೂನ್ ನಡುವೆ ತಡೆರಹಿತ ಮತ್ತು ಪ್ರಯಾಣದ ಸಮಯ ತಗ್ಗಿಸಲು ಸಹಕಾರಿಯಾಗಲಿದೆ. ಮನೋಹರ್ ಪುರ್ ನಿಂದ ಕಂಗೇರಿ ನಡುವಿನ ಹರಿದ್ವಾರ ವರ್ತುಲ ರಸ್ತೆಯನ್ನು 1,600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದು, ಹರಿದ್ವಾರ ನಗರದಲ್ಲಿ ಸಂಚಾರ ದಟ್ಟಣೆಯಿಂದ ನಿವಾಸಿಗಳಿಗೆ ವಿರಾಮ ಸಿಗಲಿದೆ. ವಿಶೇಷವಾಗಿ ಪ್ರವಾಸದ ಋತುಮಾನದಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ಕುಮಾನ್ ವಲಯದಲ್ಲಿ ಸಂಪರ್ಕ ಸುಧಾರಣೆಗೆ ಈ ಯೋಜನೆಗಳು ಸಹಕಾರಿಯಾಗಲಿದೆ. 

ಸುಮಾರು 1,700 ಕೋಟಿ ರೂಪಾಯಿ ವೆಚ್ಚದಲ್ಲಿ ಡೆಹ್ರಾಡೂನ್ – ಪೌಂಟಾ ಸಾಹಿಬ್ ನಡುವೆ [ಹಿಮಾಚಲ ಪ್ರದೇಶ] ರಸ್ತೆ ಯೋಜನೆಯು ಪ್ರಯಾಣದ ಅವಧಿಯನ್ನು ಕಡಿಮೆ ಮಾಡುತ್ತದೆ ಮತ್ತು ಎರಡು ಸ್ಥಳಗಳ ನಡುವೆ ತಡೆರಹಿತ ಸಂಪರ್ಕ ಒದಗಿಸುತ್ತದೆ. ಇದರಿಂದ ಅಂತರರಾಜ್ಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಾಧ್ಯವಾಗಲಿದೆ. ನಝಿಮಬಾದ್ – ಕೊಟ್ದಾರ್ ರಸ್ತೆ ವಿಸ್ತರಣೆ ಯೋಜನೆಯಿಂದ ಪ್ರಯಾಣದ ಸಮಯ ಕಡಿಮೆಯಾಗಲಿದೆ ಮತ್ತು ಲ್ಯಾನ್ಸ್‌ಡೌನ್‌ಗೆ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲಿದೆ.

ಲಕ್ಷಂ  ಜೂಲಾ ಪಕ್ಕದಲ್ಲಿ ಗಂಗಾನದಿಗೆ ಅಡ್ಡಲಾಗಿ ಸೇತುವೆಯನ್ನು ಸಹ ನಿರ್ಮಿಸಲಾಗುವುದು. ವಿಶ್ವವಿಖ್ಯಾತ ಲಕ್ಷಂ ಜೂಲಾವನ್ನು 1929 ರಲ್ಲಿ ನಿರ್ಮಿಸಲಾಗಿತ್ತು. ಕಡಿಮೆ ತೂಕ ಇರುವ ಸಾಮರ್ಥ್ಯದ ಕಾರಣ ಈ ಸೇತುವೆಯನ್ನು ಮುಚ್ಚಲಾಗಿತ್ತು. ನಿರ್ಮಾಣವಾಗಲಿರುವ ಸೇತುವೆಯಲ್ಲಿ ಜನ ನಡೆದಾಗಲು ಗಾಜಿನ ಡೆಕ್ ಸಹ ಒದಗಿಸಲಾಗುತ್ತಿದೆ ಮತ್ತು ಕಡಿಮೆ ತೂಕದ ವಾಹನಗಳಿಗೆ ಅಡ್ಡಲಾಗಿ ಚಲಿಸಲು ಇದು ಅನುವು ಮಾಡಿಕೊಡುತ್ತದೆ.  

ತಮ್ಮ ಪ್ರಯಾಣಕ್ಕಾಗಿ ರಸ್ತೆಗಳನ್ನು ಸುರಕ್ಷಿತಗೊಳಿಸುವ ಮೂಲಕ ನಗರವನ್ನು ಮಕ್ಕಳ ಸ್ನೇಹಿಯನ್ನಾಗಿಸಲು ಡೆಹ್ರಾಡೂನ್‌ನ ಮಕ್ಕಳ ಸ್ನೇಹಿ ನಗರ ಯೋಜನೆಗೆ ಪ್ರಧಾನಮಂತ್ರಿ ಅವರು ಅಡಿಪಾಯ ಹಾಕಲಿದ್ದಾರೆ. ಡೆಹ್ರಾಡೂನ್‌ನಲ್ಲಿ ನೀರು ಪೂರೈಕೆ, ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ 700 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ.

ಸ್ಮಾರ್ಟ್ ಆಧ್ಯಾತ್ಮಿಕ ಪಟ್ಟಣವನ್ನು ಅಭಿವೃದ್ಧಿಪಡಿಸುವ ಹಾಗೂ ಪ್ರವಾಸೋದ್ಯಮ ಸಂಬಂಧಿತ ಮೂಲ ಸೌಕರ್ಯವನ್ನು ಸೃಷ್ಟಿಸುವ ಪ್ರಧಾನಮಂತ್ರಿಯವರ ದೃಷ್ಟಿಗೆ ಅನುಗುಣವಾಗಿ ಶ್ರೀ ಬದರಿನಾಥ ಧಾಮ ಮತ್ತು ಗಂಗೋತ್ರಿ – ಯಮುನೋತ್ರಿ ಧಾಮದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಪಾಯ ಹಾಕುವುದಲ್ಲದೇ 500 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ವೈದ್ಯಕೀಯ ಕಾಲೇಜು ಸಹ ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಈ ಪ್ರದೇಶದಲ್ಲಿ ದೀರ್ಘಕಾಲೀನ ಭೂ ಕುಸಿತದ ಸಮಸ್ಯೆಯನ್ನು ನಿಭಾಯಿಸುವ ಮೂಲಕ ಪ್ರಯಾಣವನ್ನು ಸುರಕ್ಷಿತಗೊಳಿಸುವುದು ಒಳಗೊಂಡಂತೆ ಏಳು ಯೋಜನೆಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಇದರಲ್ಲಿ ಲಂಬಗಡದಲ್ಲಿ ಭೂ ಕುಸಿತ ತಗ್ಗಿಸುವ ಯೋಜನೆ [ಇದು ಬದರಿನಾಥ ಧಾಮದ ಮಾರ್ಗವಾಗಿದೆ] ಮತ್ತು ಎನ್.ಎಚ್. 58 ನಲ್ಲಿ ಸಕನಿಧರ್, ಶ್ರೀನಗರ ಮತ್ತು ದೇವ ಪ್ರಯಾಗ ವಲಯದಲ್ಲಿ ದೀರ್ಘಕಾಲೀನ ಭೂ ಕುಸಿತಕ್ಕೆ ಪರಿಹಾರ ಒದಗಿಸಲಿದೆ. ದೀರ್ಘ  ಕಾಲದ ಭೂ ಕುಸಿತ ವಲಯದಲ್ಲಿ ನೇರವಾಗಿ ಭೂ ಕುಸಿತ ತಗ್ಗಿಸುವ ಯೋಜನೆಯು ಬಲವರ್ದಿತ ಮಣ್ಣಿನ ಗೋಡೆ ಬಂಡೆಗಳ ತಡೆಗೋಡೆಗಳ ನಿರ್ಮಾಣವನ್ನು ಇದು ಒಳಗೊಂಡಿದೆ. ಯೋಜನೆಯ ಸ್ಥಳ ಅದರ ಕಾರ್ಯತಂತ್ರದ ಮಹತ್ವವನ್ನು ಇದು ಮತ್ತಷ್ಟು ಹೆಚ್ಚಿಸುತ್ತದೆ.

ಚಾರ್ ಧಾಮ್ ರಸ್ತೆ ಸಂಪರ್ಕ ಯೋಜನೆಯಡಿ ದೇವ ಪ್ರಯಾಗದಿಂದ ಶ್ರೀಕೋಟ್‌ಗೆ ಮತ್ತು ಬ್ರಹ್ಮಪುರಿಯಿಂದ ಕೋಡಿಯಾಲದವರೆಗೆ ಎನ್.ಎಚ್. 58 ರಸ್ತೆ ವಿಸ್ತರಣೆ ಯೋಜನೆಗಳು ಸಹ ಉದ್ಘಾಟನೆಯಾಗಲಿವೆ.

1,700 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ 120 ಮೆಗಾವ್ಯಾಟ್ ಜಲ ವಿದ್ಯುತ್ ಯೋಜನೆ ಹಾಗೂ ಇದರ ಜತೆಗೆ ಡೆಹ್ರಾಡೂನ್‌ನಲ್ಲಿ ಹಿಮಾಲಯ ಸಂಸ್ಕೃತಿ ಕೇಂದ್ರವನ್ನು ಉದ್ಘಾಟಿಸಲಾಗುತ್ತಿದೆ. ಹಿಮಾಲಯ ಸಂಸ್ಕೃತಿ ಕೇಂದ್ರ ರಾಜ್ಯಮಟ್ಟದ ವಸ್ತು ಸಂಗ್ರಹಾಲಯವಾಗಿದ್ದು, ಇದರಲ್ಲಿ 800 ಆಸನಗಳುಳ್ಳ ಸಭಾಂಗಣ, ಗ್ರಂಥಾಲಯ, ಸಮ್ಮೇಳನ ಸಭಾಂಗಣ ಮತ್ತಿತರ ಸೌಕರ್ಯಗಳಿವೆ. ಇದು ಜನರ ಸಾಂಸ್ಕೃತಿಕ ಚಟುಟಿಕೆಗಳನ್ನು ಅನುಸರಿಸಲು ಮತ್ತು ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸಲು ಸಹಾಯ ಮಾಡಲಿದೆ.

ಡೆಹ್ರಾಡೂನ್‌ನಲ್ಲಿ ಪ್ರಧಾನಮಂತ್ರಿಯವರು ಕಲಾ ಸುಗಂಧ ದ್ರವ್ಯ ಮತ್ತು ಪರಿಮಳ ಪ್ರಯೋಗಾಲಯ [ಸುಗಂಧ  ದ್ರವ್ಯ ಸಸ್ಯಗಳು] ವನ್ನು ಸಹ ಉದ್ಘಾಟಿಸಲಿದ್ದಾರೆ. ಇಲ್ಲಿ ಮಾಡಲಾದ ಸಂಶೋಧನೆಯು ಸುಗಂಧ ದ್ರವ್ಯಗಳು, ಸಾಬೂನುಗಳು, ಸ್ಯಾನಿಟೈಸರ್ಸ್, ಸುಗಂಧ ಹೊರಸುವ ಏರ್ ಪ್ರೆಶ್ ನರ್ ಗಳು, ಅಗರಬತ್ತಿಗಳು, ಇತ್ಯಾದಿ ವಿವಿಧ ಉತ್ಪನ್ನಗಳ ಉತ್ಪಾದನೆಗೆ ಉಪಯುಕ್ತವಾಗಿದೆ.  ಈ ಪ್ರದೇಶದಲ್ಲಿ ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಗೆ ಕಾರಣವಾಗುತ್ತದೆ. ಇದು ಹೆಚ್ಚು ಇಳುವರಿ ನೀಡುವ ಸುಧಾರಿತ ಸುಗಂಧ ಸಸ್ಯಗಳ ಅಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿದೆ.

  • Mahendra singh Solanki Loksabha Sansad Dewas Shajapur mp December 09, 2023

    नमो नमो नमो नमो नमो नमो नमो नमो
  • G.shankar Srivastav January 02, 2022

    जय हो
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
India's enemies saw what happens when Sindoor turns into 'barood': PM Modi's strong message to Pakistan

Media Coverage

India's enemies saw what happens when Sindoor turns into 'barood': PM Modi's strong message to Pakistan
NM on the go

Nm on the go

Always be the first to hear from the PM. Get the App Now!
...
PM attends the Defence Investiture Ceremony-2025 (Phase-1)
May 22, 2025

The Prime Minister Shri Narendra Modi attended the Defence Investiture Ceremony-2025 (Phase-1) in Rashtrapati Bhavan, New Delhi today, where Gallantry Awards were presented.

He wrote in a post on X:

“Attended the Defence Investiture Ceremony-2025 (Phase-1), where Gallantry Awards were presented. India will always be grateful to our armed forces for their valour and commitment to safeguarding our nation.”