ಸ್ವಾತಂತ್ರ್ಯ@75 ನಗರಗಳ ನವ ಭಾರತ: ಬದಲಾಗುತ್ತಿರುವ ನಗರಗಳ ಚಿತ್ರಣ ಸಮ್ಮೇಳನ ಮತ್ತು ಮೇಳವನ್ನು ಉತ್ತರಪ್ರದೇಶದ ಲಖನೌನಗರದಲ್ಲಿರುವ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿ ಅ.5ರಂದು ಬೆಳಗ್ಗೆ 10ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸುವರು.
ಪ್ರಧಾನಿಗಳು ಅಂದು ಪ್ರಧಾನ ಮಂತ್ರಿ ಅವಾಸ್ ಯೋಜನಾ ನಗರ ಪ್ರದೇಶದ ಮನೆಗಳನ್ನು 75 ಸಾವಿರ ಫಲಾನುಭವಿಗಳಿಗೆ ಡಿಜಿಟಲ್ ಮೂಲಕ ಮನೆ ಕೀಲಿಗಳನ್ನು ಹಸ್ತಾಂತರಿಸುವರು. ಉತ್ತರ ಪ್ರದೇಶದ ಫಲಾನುಭವಿಗೆ ಕೀಲಿ ಹಸ್ತಾಂತರಿಸುವುದರ ಜೊತೆಗೆ 75 ನಗರ ಅಭಿವೃದ್ಧಿ ಯೋಜನೆಗಳಿ ಶಿಲಾನ್ಯಾಸ ಮಾಡುವರು. ಸ್ಮಾರ್ಟ್ ಸಿಟಿ ಮಿಷನ್ ಹಾಗೂ ಅಮೃತ್ ಯೋಜನೆ ಅಡಿಯಲ್ಲಿ 75 ಹೊಸ ಬಸ್‌ಗಳನ್ನು ಲೋಕಾರ್ಪಣೆ ಮಾಡುವರು. ಲಖನೌ, ಕಾನ್‌ಪುರ, ವಾರಾಣಸಿ, ಪ್ರಯಾಗರಾಜ್, ಗೋರಖ್‌ಪುರ, ಝಾನ್ಸಿ, ಗಾಝಿಯಾಬಾದ್‌ಗಳಿಗೆ ಒಳಗೊಂಡಂತೆ ಈ ಬಸ್ ಸೇವೆಯನ್ನು ಆರಂಭಿಸಲಾಗುವುದು. ವಸತಿ ಮತ್ತು ನಗರ ಅಭಿವೃದ್ಧಿ ಸಚಿವಾಲಯದ ವಿವಿಧ 75 ಯೋಜನೆಗಳ ಮೇಲೆ ಬೆಳಕು ಚೆಲ್ಲುವ ಕಾಫಿಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡುವರು. ಈ ಮೇಳದಲ್ಲಿ ಆಯೋಜಿಸಲಾಗಿರುವ ವಿವಿಧ ಮೂರು ಮೇಳಗಳಿಗೆ ಭೇಟಿ ನೀಡುವರು. ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪೀಠ ಸ್ಥಾಪನೆಯ ಕುರಿತೂ ಘೋಷಣೆ ಮಾಡುವರು.
ಕೇಂದ್ರ ರಕ್ಷಣಾ ಸಚಿವ, ಕೇಂದ್ರ ಗೃಹ ಮತ್ತು ನಗರ ಅಭಿವೃದ್ಧಿ ಸಚಿವರು ರಾಜ್ಯಪಾಲರು, ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಹಾಜರಿರುತ್ತಾರೆ.
ಸಭೆ ಮತ್ತು ಮೇಳದ ಕುರಿತು:
ಈ ಸಭೆ ಮತ್ತು ಮೇಳವನ್ನು ಗೃಹ ಹಾಗೂ ನಗರ ಅಭಿವೃದ್ಧಿ ಸಚಿವಾಲಯವು ಆಯೋಜಿಸಿದೆ. ಅ.5ರಿಂದ 7ರವರೆಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಆಚರಣೆಯ ಅಡಿಯಲ್ಲಿ ಈ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಉತ್ತರ ಪ್ರದೇಶ ರಾಜ್ಯದ ನಗರ ಪ್ರದೇಶಗಳ ಬದಲಾಗುತ್ತಿರುವ ಚಿತ್ರಣಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲುವಂತೆ ಈ ಸಭೆಯನ್ನು ಹಾಗೂ ಮೇಳವನ್ನು ಆಯೋಜಿಸಲಾಗಿದೆ. ಅಭಿವೃದ್ಧಿಯ ಮುಂದಿನ ಹೆಜ್ಜೆ, ಪಾಲ್ಗೊಳ್ಳುವಿಕೆ, ಬದ್ಧತೆ ಹಾಗೂ ಕಾರ್ಯಾನುಷ್ಠಾನಗಳ ದಿಕ್ಕನ್ನು ನಿರ್ಧರಿಸುವ ಸಭೆ ಮತ್ತು ಮೇಳ ಇದಾಗಲಿದೆ.
ಮೂರು ಪ್ರದರ್ಶನ ಮೇಳಗಳನ್ನು ಈ ಸಮಾರಂಭದಲ್ಲಿ ಹಮ್ಮಿಕೊಳ್ಳಲಾಗಿದೆ.
1. ನಗರಗಳ ನವಭಾರತ ಎಂಬ ಹೆಸರಿನ ಅಡಿ, ನಗರ ಅಭಿಯಾನಗಳ ಆಯೋಜನೆಗಳ ಕುರಿತು ಹೆಚ್ಚು ವಿವರಿಸುವ ಮೇಳ ಹಮ್ಮಿಕೊಳ್ಳಲಾಗಿದೆ. ಕಳೆದ ಏಳು ವರ್ಷಗಳ ಅವಧಿಯಲ್ಲಿ ಗೃಹಸಂಬಂಧಿ ಯೋಜನೆಗಳು ಹಾಗೀ ನಗರಾಭಿವೃದ್ಧಿ ಯೋಜನೆಗಳಿಂದಾದ ಬದಲಾವಣೆಗಳ ಕುರಿತು ಪ್ರದರ್ಶನ ಮೇಳ ಹಮ್ಮಿಕೊಳ್ಳಲಾಗಿದೆ.
2. ನಿರ್ಮಾಣ ತಂತ್ರಜ್ಞಾನದಲ್ಲಿ ನೂತನ 75 ತಂತ್ರಗಳನ್ನು ಪ್ರದರ್ಶಿಸುವ ಭಾರತೀಯ ಮನೆ ತಂತ್ರಜ್ಞಾನ ಮೇಳ ಎಂಬ ಹೆಸರಿನಲ್ಲಿ ಪ್ರದರ್ಶನ ಮೇಳ ಹಮ್ಮಿಕೊಳ್ಳಲಾಗಿದೆ. ಜಾಗತಿಕ ಮನೆ ತಂತ್ರಜ್ಞಾನ ಸವಾಲುಗಳು ಇಂಡಿಯಾ ಸಂಸ್ಥೆಯ ಅಡಿಯಲ್ಲಿ ಗೃಹ ನಿರ್ಮಾಣ ಕ್ಷೇತ್ರದಲ್ಲಿ ಬಂದಿರುವ ನೂತನ ತಂತ್ರಜ್ಞಾನ, ಯಂತ್ರೋಪಕರಣಗಳು, ಹೊಸಬಗೆಯ ಪ್ರಕ್ರಿಯೆಗಳನ್ನು ಪ್ರದರ್ಶಿಸಲಾಗುತ್ತದೆ.
3. 2017ರ ನಂತರ ಉತ್ತರ ಪ್ರದೇಶದ ಸ್ಥಿತಿಗತಿ ಹಾಗೂ ಬದಲಾದ ಪರಿಸ್ಥಿತಿಗಳನ್ನು ತೋರಿಸುವ ನಗರಾಭಿವೃದ್ಧಿಯೋಜನೆಗಳನ್ನು ವಿವರಿಸುವ ಯುಪಿ@75 ಹೆಸರಿನಲ್ಲಿ ಉತ್ತರ ಪ್ರದೇಶದ ಅಭಿವೃದ್ಧಿಯನ್ನು ಬಿಂಬಿಸಲಾಗುತ್ತದೆ.
ಈ ಮೂರೂ ಮೇಳಗಳು, ಗೃಹ ಮತ್ತು ನಗರಾಭಿವೃದ್ಧಿ ಸಚಿವಾಲಯ ಹಮ್ಮಿಕೊಂಡಿರುವ ಯೋಜನೆಗಳ ಅಡಿಯಲ್ಲಿ ಆಗಿರುವ ಸುಧಾರಣೆ ಹಾಗೂ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತವೆ. ಈ ಮೂರು ಮೇಳಗಳನ್ನು ಸ್ವಚ್ಛನಗರ, ಜಲ ಸುರಕ್ಷಾ ನಗರ ಹಾಗೂ ಸರ್ವರಿಗೂ ಸೂರು, ನೂತನ ನಿರ್ಮಾಣ ತಂತ್ರಗಳು, ಸ್ಮಾರ್ಟ್ ಸಿಟಿ ಅಭಿವೃದ್ಧಿ, ಸುಸ್ಥಿರ ಚಲನೆ ಹಾಗೂ ನಗರ ಪ್ರದೇಶದಲ್ಲಿ ಜೀವನಾವಕಾಶಗಳು ಎಂಬ ವಿಷಯಾಧಾರಿತವಾಗಿ ಆಯೋಜಿಸಲಾಗಿದೆ.
ಈ ಸಭೆ ಮತ್ತು ಪ್ರದರ್ಶನ ಮೇಳ ಅ. 6 ಹಾಗೂ 7 ಎರಡು ದಿನಗಳೂ ಸಾರ್ವಜನಿಕರ ಭೇಟಿಗೆ ಮುಕ್ತವಾಗಿವೆ.
PM will also inaugurate/ lay foundation stone of 75 Urban Development Projects of Uttar Pradesh under Smart Cities Mission and AMRUT.
— PMO India (@PMOIndia) October 4, 2021
75 buses will be flagged off under FAME-II for seven cities including Lucknow, Kanpur, Varanasi, Prayagraj, Gorakhpur, Jhansi and Ghaziabad.
PM will digitally handover keys of Pradhan Mantri Awas Yojana - Urban (PMAY-U) houses to 75,000 beneficiaries in 75 districts of Uttar Pradesh and will also interact virtually with beneficiaries of the scheme in Uttar Pradesh.
— PMO India (@PMOIndia) October 4, 2021
PM @narendramodi will inaugurate ‘Azadi@75 – New Urban India: Transforming Urban Landscape’ Conference-cum-Expo tomorrow, 5th October 2021 in Lucknow, Uttar Pradesh. https://t.co/BWz621fQ0o
— PMO India (@PMOIndia) October 4, 2021