ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ಸಿಖ್ ನಿಯೋಗಕ್ಕೆ ಆತಿಥ್ಯ ನೀಡಲಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಜೆ 05:30 ಕ್ಕೆ ನಿಯೋಗದ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;
"ಇಂದು ಸಂಜೆ, ನಾನು ನನ್ನ ನಿವಾಸದಲ್ಲಿ ಸಿಖ್ ನಿಯೋಗಕ್ಕೆ ಆತಿಥ್ಯ ನೀಡಲಿದ್ದೇನೆ. ನಿಯೋಗದ ತಂಡದಲ್ಲಿ ವಿವಿಧ ವರ್ಗಗಳ ಜನರು ಸೇರಿದ್ದಾರೆ. ನಾನು ಸಂಜೆ 5:30 ರ ಹೊತ್ತಿಗೆ ನಿಯೋಗವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದೇನೆ. ವೀಕ್ಷಿಸಿ..."
This evening, I will be hosting a Sikh delegation at my residence. The group includes people from different walks of life. I will also be addressing the gathering at around 5:30 PM. Do watch…
— Narendra Modi (@narendramodi) April 29, 2022