ಅಮೆರಿಕಾ-ಭಾರತ ಕಾರ್ಯತಂತ್ರ ಸಹಭಾಗಿತ್ವ ವೇದಿಕೆ (ಯುಎಸ್‌ಐಎಸ್‌ಪಿಎಫ್) ಯ 3 ನೇ ವಾರ್ಷಿಕ ನಾಯಕತ್ವ ಶೃಂಗಸಭೆಯಲ್ಲಿ ಸೆಪ್ಟೆಂಬರ್ 3 ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ರಾತ್ರಿ ಒಂಭತ್ತು ಗಂಟೆಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ.
ಯುಎಸ್‌ಐಎಸ್‌ಪಿಎಫ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಇದು ಭಾರತ ಮತ್ತು ಅಮೆರಿಕಾ ನಡುವಿನ ಪಾಲುದಾರಿಕೆಗಾಗಿ ಕೆಲಸ ಮಾಡುತ್ತದೆ.
ಆಗಸ್ಟ್ 31 ರಂದು ಪ್ರಾರಂಭವಾಗಿರುವ 5 ದಿನಗಳ ಶೃಂಗಸಭೆಯ ಈ ವರ್ಷದ ವಿಷಯ “ಅಮೆರಿಕಾ-ಭಾರತದ ಹೊಸ ಸವಾಲುಗಳಿಗೆ ಪರಿಹಾರಗಳು”.
ಜಾಗತಿಕ ಉತ್ಪಾದನಾ ಕೇಂದ್ರವಾಗಲು ಭಾರತದ ಸಾಮರ್ಥ್ಯ, ಭಾರತದ ಅನಿಲ ಮಾರುಕಟ್ಟೆಯಲ್ಲಿನ ಅವಕಾಶಗಳು, ಭಾರತದಲ್ಲಿ ವಿದೇಶಿ ನೇರ ಹೂಡಿಕೆ ಆಕರ್ಷಿಸಲು ಸುಲಭ ವ್ಯವಹಾರ, ತಾಂತ್ರಿಕ ಕ್ಷೇತ್ರದಲ್ಲಿ ಸಾಮಾನ್ಯ ಅವಕಾಶಗಳು ಮತ್ತು ಸವಾಲುಗಳು, ಇಂಡೋ-ಪೆಸಿಫಿಕ್ ಆರ್ಥಿಕ ಸಮಸ್ಯೆಗಳು, ಸಾರ್ವಜನಿಕ ಆರೋಗ್ಯದಲ್ಲಿ ಹೊಸತನ ಮುಂತಾದ ವಿವಿಧ ವಿಷಯಗಳನ್ನು ಈ ವಿಷಯ ಒಳಗೊಂಡಿದೆ.
ಈ ವರ್ಚುವಲ್ ಶೃಂಗಸಭೆಯಲ್ಲಿ ಕೇಂದ್ರ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸಹ ಭಾಗವಹಿಸುತ್ತಿದ್ದಾರೆ.