ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2020ರ ಫೆಬ್ರವರಿ 29ರಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ಬೃಹತ್ ವಿತರಣಾ ಶಿಬಿರದಲ್ಲಿ ಹಿರಿಯ ನಾಗರಿಕರಿಗೆ(ರಾಷ್ಟ್ರೀಯ ವಯೋಶ್ರೀ ಯೋಜನೆ – ಆರ್ ವಿ ವೈ)ಅಡಿಯಲ್ಲಿ ಮತ್ತು ದಿವ್ಯಾಂಗ ಜನರಿಗೆ(ಎಡಿಐಪಿ) ಯೋಜನೆ ಅಡಿಯಲ್ಲಿ ದಿನನಿತ್ಯ ಅಗತ್ಯದ ಉಪಕರಣ ಮತ್ತು ಸಲಕರಣೆ ವಿತರಿಸಲಿದ್ದಾರೆ.
ಇದು ಫಲಾನುಭವಿಗಳ ಸಂಖ್ಯೆಯ ಪ್ರಕಾರ ಮತ್ತು ವಿತರಿಸುತ್ತಿರುವ ಉಪಕರಣಗಳ ಸಂಖ್ಯೆ ಹಾಗೂ ಆ ಉಪಕರಣ ಮತ್ತು ಸಲಕರಣೆಗಳ ಮೌಲ್ಯದ ಆಧಾರದಲ್ಲಿ ದೇಶದಲ್ಲೇ ಅತಿ ದೊಡ್ಡದಾದ ವಿತರಣಾ ಶಿಬಿರವಾಗಿದೆ.
ಈ ಬೃಹತ್ ಶಿಬಿರದಲ್ಲಿ ಸುಮಾರು 26,000 ಫಲಾನುಭವಿಗಳಿಗೆ ಉಚಿತವಾಗಿ ನಾನಾ ವಿಧದ ಸುಮಾರು 56,000 ಸಹಾಯಕ ಉಪಕರಣ ಮತ್ತು ಸಲಕರಣೆಗಳನ್ನು ಉಚಿತವಾಗಿ ವಿತರಿಸಲಾಗುವುದು. ಈ ಉಪಕರಣ ಮತ್ತು ಸಲಕರಣೆಗಳ ಒಟ್ಟು ಮೌಲ್ಯ 19 ಕೋಟಿ ರೂಪಾಯಿಗಳು.
ಈ ಸಲಕರಣೆ ಮತ್ತು ಉಪಕರಣಗಳನ್ನು ನೀಡುತ್ತಿರುವ ಉದ್ದೇಶ, ಅವರಿಗೆ ಸಹಾಯ ನೀಡುವುದು ಮತ್ತು ದಿವ್ಯಾಂಗ ಜನ ಮತ್ತು ಹಿರಿಯ ನಾಗರಿಕರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿಗೊಳಿಸುವುದಾಗಿದೆ.