ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಜೂನ್ 16ರಂದು ಸಂಜೆ 4 ಗಂಟೆಗೆ ವಿವಾಟೆಕ್ 5ನೇ ಆವೃತ್ತಿಯಲ್ಲಿ ಪ್ರಧಾನ ಭಾಷಣ ಮಾಡಲಿದ್ದಾರೆ. ವಿವಾ ಟೆಕ್ 2021ರಲ್ಲಿ ಪ್ರಧಾನ ಭಾಷಣ ಮಾಡಲು ಪ್ರಧಾನಮಂತ್ರಿಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಸಲಾಗಿದೆ.
ಈ ಕಾರ್ಯಕ್ರಮದ ಪ್ರಮುಖ ಭಾಷಣಕಾರರಲ್ಲಿ ಫ್ರಾನ್ಸ್ ಅಧ್ಯಕ್ಷರಾದ ಶ್ರೀ ಎಮ್ಯಾನ್ಯುಯಲ್ ಮೆಖ್ರಾನ್, ಸ್ಪೇನ್ ಪ್ರಧಾನಮಂತ್ರಿ ಶ್ರೀ ಪೆಡ್ರೋ ಸ್ಯಾಂಚೇಜ್ ಮತ್ತು ಐರೋಪ್ಯ ರಾಷ್ಟ್ರಗಳ ಸಚಿವರು/ಸಂಸದರು ಸೇರಿದ್ದಾರೆ. ಈ ಕಾರ್ಯಕ್ರಮವು ಸಾಂಸ್ಥಿಕ ನಾಯಕರಾದ ಆಪಲ್ ಸಿಇಓ ಶ್ರೀ ಟಿಮ್ ಕುಕ್, ಫೆಸ್ಬುಕ್ ಅಧ್ಯಕ್ಷ ಹಾಗೂ ಸಿಇಓ ಶ್ರೀ ಮಾರ್ಕ್ ಝುಕರ್ಬರ್ಗ್ ಮತ್ತು ಮೈಕ್ರೋಸಾಫ್ಟ್ ಅಧ್ಯಕ್ಷ ಶ್ರೀ ಬ್ರಾಡ್ ಸ್ಮಿತ್ ಮತ್ತಿತರರ ಪಾಲ್ಗೊಳ್ಳುವಿಕೆಗೂ ಸಾಕ್ಷಿಯಾಗಲಿದೆ.
ವಿವಾಟೆಕ್ ಯೂರೋಪ್ ನ ಅತಿ ದೊಡ್ಡ ಡಿಜಿಟಲ್ ಮತ್ತು ನವೋದ್ಯಮ ಕಾರ್ಯಕ್ರಮವಾಗಿದ್ದು, 2016ರಿಂದ ಪ್ರತಿವರ್ಷ ಪ್ಯಾರಿಸ್ ನಲ್ಲಿ ನಡೆಯಲಿದೆ. ಇದನ್ನು ಪ್ರಮುಖ ಪ್ರಚಾರ ಮತ್ತು ಮಾರುಕಟ್ಟೆ ಸಂಘಟಕರಾದ ಪಬ್ಲಿಕ್ ಗ್ರೂಪ್ (Publicis Groupe) ಮತ್ತು ಫ್ರೆಂಚ್ ಮಾಧ್ಯಮ ಸಮೂಹವಾದ ಲೆಸ್ ಎಕೋಸ್ (Les Echos ) ಜಂಟಿಯಾಗಿ ಆಯೋಜಿಸಿವೆ. ಇದು ತಂತ್ರಜ್ಞಾನ ಹೊಸಶೋಧ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯ ಬಾಧ್ಯಸ್ಥಗಾರರನ್ನು ಒಗ್ಗೂಡಿಸುತ್ತದೆ ಮತ್ತು ಇದರಲ್ಲಿ ಪ್ರದರ್ಶನಗಳು, ಪ್ರಶಸ್ತಿಗಳು, ಚರ್ಚೆಗಳು ಮತ್ತು ನವೋದ್ಯಮ ಸ್ಪರ್ಧೆಗಳೂ ಒಳಗೊಂಡಿರುತ್ತವೆ. ವಿವಾಟೆಕ್ ನ 5ನೇ ಆವೃತ್ತಿ 2021ರ ಜೂನ್ 16-19 ರವರೆಗೆ ನಡೆಯಲಿದೆ.