ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದೇ ನವೆಂಬರ್ 21 ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಗಾಂಧಿ ನಗರದ ಪಂಡಿತ್ ದೀನ್ ದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಈ ಘಟಿಕೋತ್ಸವದಲ್ಲಿ ಸುಮಾರು 2600 ವಿದ್ಯಾರ್ಥಿಗಳಿಗೆ ಪದವಿ/ಡಿಪ್ಲೊಮಾಗಳನ್ನು ಪ್ರದಾನ ಮಾಡಲಾಗುವುದು.
ಘಟಿಕೋತ್ಸವದ ವೇಳೆ ಪ್ರಧಾನಮಂತ್ರಿ ಅವರು, ‘45 ಮೆಗಾವ್ಯಾಟ್ ಸಾಮರ್ಥ್ಯದ ಮೊನೊಕ್ರಿಸ್ಟಲಿನ್ ಸೋಲಾರ್ ಫೊಟೊ ವೋಲ್ಟಿಕ್ ಪ್ಯಾನಲ್’ ಘಟಕಕ್ಕೆ ಮತ್ತು ಜಲತಂತ್ರಜ್ಞಾನದಲ್ಲಿ ಶ್ರೇಷ್ಠತಾ ಕೇಂದ್ರಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ. ಅಲ್ಲದೆ ಪ್ರಧಾನಮಂತ್ರಿ ಅವರು, ಪಂಡಿತ್ ದೀನ್ ದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯದಲ್ಲಿ ನಾವಿನ್ಯ ಮತ್ತು ಸಂಪೋಷಣಾ ಕೇಂದ್ರ – ತಂತ್ರಜ್ಞಾನ, ವಾಣಿಜ್ಯ ಸಂಪೋಷಣಾ, ಟ್ರಾನ್ಸಲ್ಯಾಷನಲ್ ಸಂಶೋಧನಾ ಕೇಂದ್ರ ಮತ್ತು ಕ್ರೀಡಾ ಸಂಕೀರ್ಣಗಳ ಉದ್ಘಾಟನೆಗೆ ಸಾಕ್ಷಿಯಾಗಲಿದ್ದಾರೆ.