ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಇಂದೋರ್ ನಗರಕ್ಕೆ ಭೇಟಿ ನೀಡಲಿದ್ದು, 'ಪ್ರವಾಸಿ ಭಾರತೀಯ ದಿನ' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಪ್ರಧಾನ ಮಂತ್ರಿಗಳು ಖಚಿತಪಡಿಸಿದ್ದಾರೆ.
''ವೈವಿಧ್ಯತೆಯ ನಗರ ಇಂದೋರ್ ನಲ್ಲಿ ಜನವರಿ 9ರಂದು 'ಪ್ರವಾಸಿ ಭಾರತೀಯ ದಿನ' ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಉತ್ಸಾಹದಿಂದ ಇದಿರು ನೋಡುತ್ತಿದ್ದೇನೆ. ಅನಿವಾಸಿ ಭಾರತೀಯರ ಜೊತೆ ಸಂಬಂಧವನ್ನು ಮತ್ತಷ್ಟು ಆಳವಾಗಿ ಬೆಸೆಯಲು ನಮಗೆ ಈ ಕಾರ್ಯಕ್ರಮವು ದೊಡ್ಡ ಅವಕಾಶವಾಗಿದ್ದು, ಜಾಗತಿಕವಾಗಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ'' ಎಂದು ಬರೆದುಕೊಂಡಿದ್ದಾರೆ.
Looking forward to being in the vibrant city of Indore tomorrow, 9th January to mark Pravasi Bharatiya Divas. This is a great opportunity to deepen the connect with our diaspora, which has distinguished itself globally. https://t.co/0lIDULkFlj
— Narendra Modi (@narendramodi) January 8, 2023