ನವ ದೆಹಲಿಯ ಕಾರಿಯಪ್ಪಾ ಪೆರೇಡ್ ಮೈದಾನದಲ್ಲಿ ನಾಳೆ ನಡೆಯಲಿರುವ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ ಸಿ ಸಿ) ರ‍್ಯಾಲಿಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ, ವಿವಿಧ ಎನ್ ಸಿ ಸಿ ತಂಡಗಳು ನೀಡಲಿರುವ ಗೌರವ ದಳ ವನ್ನು ಸ್ವೀಕರಿಸಲಿರುವ ಪ್ರಧಾನ ಮಂತ್ರಿ ಅವರು ಪಥಸಂಚಲನವನ್ನು ಪರಿವೀಕ್ಷಿಸಲಿದ್ದಾರೆ. ಸಮರ ಕಲೆ, ಸಂಗೀತ ಮತ್ತು ಸಾಹಸ ಕ್ರೀಡೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿನ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವುದರ ಜೊತೆಗೆ, ಎನ್ ಸಿ ಸಿ ಕೆಡೆಟ್ ಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಪ್ರಧಾನ ಮಂತ್ರಿ ಅವರ ಮುಂದೆ ಪ್ರದರ್ಶಿಸಲಿದ್ದಾರೆ.
ಪ್ರಶಂಸಾರ್ಹ ಎನ್ ಸಿ ಸಿ ಕೆಡೆಟ್ ಗಳಿಗೆ ಪ್ರಶಸ್ತಿಗಳನ್ನು ನೀಡಿದ ನಂತರ ಪ್ರಧಾನ ಮಂತ್ರಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಗಣ ರಾಜ್ಯೋತ್ಸವ ಶಿಬಿರದಲ್ಲಿ ಪಾಲ್ಗೊಳ್ಳಲು, ಪ್ರತಿ ವರ್ಷ ನೂರಾರು ಎನ್ ಸಿ ಸಿ ಕೆಡೆಟ್ ಗಳು ನವ ದೆಹಲಿಗೆ ಆಗಮಿಸುತ್ತಾರೆ. ಕಳೆದ ವರ್ಷ ಎನ್ ಸಿ ಸಿ ರ‍್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನ ಮಂತ್ರಿ ಅವರು, ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್ ಸಿ ಸಿ ಕೆಡೆಟ್ ಗಳ ಶ್ರಮ ಹಾಗೂ ಸ್ವಚ್ಛ ಭಾರತ ಅಭಿಯಾನದಂತಹ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಅವರು ಮಾಡಿದ ಪ್ರಯತ್ನವನ್ನು ಶ್ಲಾಘಿಸಿದರು.