PM Modi flags off Indian Railways’ first #MakeInIndia 12,000 HP electric locomotive in Bihar’s Madhepura district
I am glad that the people of Bihar have shown the spirit of oneness for the Swachhta campaign, says the PM Modi
We are taking forward Mahatma Gandhi's ideals through Swachhagraha movement: PM Modi
In the last one week, more than 8,50,000 toilets have been constructed in Bihar, this is a great achievement: PM Modi in Motihari
Villages built along the Ganga coast are being freed from open defecation on a priority basis: PM
The demand for LPG has risen because of the emphasis on clean fuel and the success of the #UjjwalaYojana : PM Modi
By building a toilet, a woman has found respect and safety & health parameters have also shown a marked increase: PM

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೋತಿಹಾರಿಯಲ್ಲಿ ನಡೆದ ಸ್ವಚ್ಛಾಗ್ರಹಿಗಳ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದರು. ಚಂಪಾರಣ್ಯದಲ್ಲಿ ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಸತ್ಯಾಗ್ರಹದ ಶತಮಾನೋತ್ಸವದ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇದೇ ಹೊತ್ತಿನಲ್ಲಿ ಪ್ರಧಾನಿ ಅವರು ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದಲ್ಲಿ ಮೋತಿಝೀಲ್ ಯೋಜನೆ, ಬೆಟ್ಟಿಯಾ ನಗರ ಪರಿಷದ್ ನೀರು ಸರಬರಾಜು ಯೋಜನೆ ಮತ್ತು ನಾಲ್ಕು ಗಂಗಾ ಯೋಜನೆಗಳಾದ, ಪಟ್ನಾದ ಸೈದಾಪುರ್ ಒಳಚರಂಡಿ ಕಾರ್ಯಜಾಲ, ಪಟ್ನಾ ವಲಯ ನಾಲ್ಕರ ಪಹಾರಿ ಕಾರ್ಯಜಾಲ, ಪಟ್ನಾದ ವಲಯ 5ರ ಪಹಾರಿ ಒಳಚರಂಡಿ ಕಾರ್ಯಜಾಲ ಮತ್ತು ಪಹಾರಿ ಎಸ್ಟಿಪಿ ಯೋಜನೆಯ ಶಿಲಾನ್ಯಾಸದ ಅಂಗವಾಗಿ ಫಲಕಗಳನ್ನು ಅನಾವರಣಗೊಳಿಸಿದರು.

ರೈಲ್ವೆ ವಿಭಾಗದಲ್ಲಿ ಮುಝಾಫರ್ ಪುರ್ ಮತ್ತು ಸಗೌಲಿ ಹಾಗೂ ಸಗೌಲಿ ಮತ್ತು ವಾಲ್ಮೀಕಿನಗರದ ನಡುವಿನ ರೈಲ್ವೆ ಹಳಿಗಳ ಡಬ್ಲಿಂಗ್ ಕಾಮಗಾರಿಗೆ ಶಿಲಾನ್ಯಾಸ ಮಾಡಿದರು. ಮೊದಲ ಹಂತದ ಮಾಧೇಪುರ ವಿದ್ಯುತ್ ಲೋಕೋಮೋಟಿವ್ ಕಾರ್ಖಾನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ವಿಡಿಯೋ ಲಿಂಕ್ ಮೂಲಕ 12,000 ಹೆಚ್ಪಿ ಸಾಮರ್ಥ್ಯದ ಮೊದಲ ಸರಕು ಸಾಗಣೆ ಲೋಕೋಮೋಟಿವ್ ಹಾಗೂ ಚಂಪಾರಣ್ ಹಮ್ಸಫರ್ ಎಕ್ಸ್ ಪ್ರೆಸ್ ಗೆ ಚಾಲನೆ ನೀಡಿದರು.

ಬಿಹಾರ್-ಜಾರ್ಖಂಡ್ ಗಡಿ ವಿಭಾಗದ ಔರಂಗಾಬಾದ್ನ ರಾಷ್ಟ್ರೀಯ ಹೆದ್ದಾರಿ-2ರ ರಸ್ತೆ, ಮೊತಿಹಾರಿಯಲ್ಲಿ ಇಂಡಿಯಲ್ ಆಯಿಲ್ ಕಾರ್ಪೊರೇಷನ್ನ ಎಲ್.ಪಿ.ಜಿ. ಹಾಗೂ ಪೆಟ್ರೋಲಿಯಂ ತೈಲದ ಲ್ಯೂಬ್ ಟರ್ಮಿನಲ್ ಹಾಗೂ ಸಗೌಲಿಯಲ್ಲಿ ಹೆಚ್.ಪಿ.ಸಿ. ಎಲ್.ಪಿ.ಜಿ. ಸ್ಥಾವರಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಚಾಂಪಿಯನ್ ಸ್ವಚ್ಛಾಗ್ರಹಿಗಳಿಗೆ ಪ್ರಶಸ್ತಿಯನ್ನು ವಿತರಿಸಿದರು.

ಈ ಸಂದರ್ಭದಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿ, ಮೋತಿಹಾರಿನಲ್ಲಿ ಇಂದು ಕಾಣಿಸುತ್ತಿರುವ ಉತ್ಸಾಹವು ಒಂದು ಶತಮಾನದ ಹಿಂದೆ ನಡೆದ ಚಂಪಾರಣ್ ಸತ್ಯಾಗ್ರಹದ ವೇಳೆ ಇದ್ದ ಸ್ಫೂರ್ತಿ ಯನ್ನೇ ಹೋಲುತ್ತದೆ ಎಂದರು.

ಸತ್ಯಾಗ್ರಹದಿಂದ ಸ್ವಚ್ಛಾಗ್ರಹದವರೆಗಿನ ಪ್ರಯಾಣದಲ್ಲಿ ಬಿಹಾರದ ಜನತೆ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ ಎಂದ ಅವರು, ಕಳೆದ ಒಂದು ವಾರದಲ್ಲಿ ಬಿಹಾರದಲ್ಲಿ ಶೌಚಾಲಯ ನಿರ್ಮಾಣದಲ್ಲಿ ಆದ ಗಮನಾರ್ಹ ಪ್ರಗತಿಯನ್ನು ಉಲ್ಲೇಖಿಸಿ, ಇದಕ್ಕಾಗಿ ರಾಜ್ಯ ಸರ್ಕಾರ ಹಾಗೂ ರಾಜ್ಯದ ಜನತೆಯನ್ನು ಶ್ಲಾಘಿಸಿದರು.

ಸ್ವಚ್ಛ ಭಾರತ ಆಂದೋಲನ ಅಥವಾ ಭ್ರಷ್ಟಾಚಾರದ ವಿರುದ್ಧ ಹೋರಾಟ ಇಲ್ಲವೇ ಸಾರ್ವಜನಿಕ ಸೌಕರ್ಯ ನಿರ್ಮಾಣ ಸೇರಿದಂತೆ ಇನ್ನಿತರ ಕೆಲಸಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಸಮಸಮವಾಗಿ ಜೊತೆಜೊತೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಂದು 6,600 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಇವು ಈ ಪ್ರಾಂತ್ಯ ಮತ್ತು ರಾಜ್ಯದ ಅಭಿವೃದ್ಧಿಯಲ್ಲಿ ಗಮನಾರ್ಹ ಪಾತ್ರ ವಹಿಸಲಿವೆ ಎಂದರು.

ಮೋತಿಝೀಲ್ ಪುನರುಜ್ಜೀವನ ಯೋಜನೆಯನ್ನು ಉಲ್ಲೇಖಿಸಿದ ಅವರು, ಅದು ಮೋತಿಹಾರಿಯ ಚರಿತ್ರೆಯ ಭಾಗವಾಗಿದೆ ಎಂದರು. ಈವರೆಗೆ ಮಂಜೂರಾದ 3,000 ಕೋಟಿ ರೂ. ವೆಚ್ಚದ 11 ಯೋಜನೆಗಳಿಂದ ಗಂಗಾ ನದಿಗೆ ಕೊಳಚೆ ನೀರು ತುಂಬುವಿಕೆ ನಿಲ್ಲಲಿದೆ. ಬಿಹಾರದಲ್ಲಿ ಉಜ್ವಲಾ ಯೋಜನೆ ಮೂಲಕ ನೀಡಲಾದ ಎಲ್.ಪಿ.ಜಿ ಸಂಪರ್ಕದಿಂದ 50 ಲಕ್ಷ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ಇದೇ ಉದ್ದೇಶದಿಂದ ಇಂದು ಎಲ್.ಪಿ.ಜಿ ಮತ್ತು ಪೆಟ್ರೋಲಿಯಂ ಯೋಜನೆಗಳನ್ನು ಆರಂಭಿಸಲಾಗಿದೆ ಎಂದರು.

ಇಂದು ಶಿಲಾನ್ಯಾಸ ಮಾಡಿದ ಯೋಜನೆಗಳು ಪೂರ್ವ ಭಾರತವನ್ನು ದೇಶದ ಚಾಲನಾಶಕ್ತಿಯನ್ನಾಗಿ ಅಭಿವೃದ್ಧಿಗೊಳಿಸಬೇಕೆಂಬ ದೂರದೃಷ್ಟಿಯ ಒಂದು ಭಾಗವಾಗಿದ್ದು, ರೈಲು ಮತ್ತು ರಸ್ತೆ ಯೋಜನೆಗಳನ್ನು ಇದಕ್ಕಾಗಿಯೇ ಅನುಷ್ಠಾನಗೊಳಿಸಲಾಗಿದೆ. ಮಾಧೇಪುರ ಎಲೆಕ್ಟ್ರಿಕ್ ಲೋಕೋಮೋಟಿವ್ ಕಾರ್ಖಾನೆಯು ಮೇಕ್ ಇನ್ ಇಂಡಿಯಾ ಉಪಕ್ರಮದ ಪ್ರಮುಖ ಉದಾಹರಣೆಯಾಗಿದ್ದು, ಈ ಪ್ರಾಂತ್ಯದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ. ಇಂದು ಕಾರ್ಖಾನೆಯಿಂದ ಹೊರಬಂದ 12,000 ಹೆಚ್ಪಿ ಸಾಮರ್ಥ್ಯದ ಎಂಜಿನ್ಗಳು ಸರಕು ಸಾಗಣೆ ರೈಲುಗಳ ವೇಗ ಹೆಚ್ಚಳಕ್ಕೆ ಕಾರಣವಾಗಲಿವೆ. 2007ರಲ್ಲಿ ಅಂಗೀಕಾರ ಪಡೆದ ಈ ಯೋಜನೆಯ ಕೆಲಸ ಮೂರು ವರ್ಷದ ಹಿಂದೆಯಷ್ಟೇ ಆರಂಭಗೊಂಡಿದ್ದು, ಮೊದಲ ಹಂತ ಈಗಾಗಲೇ ಮುಗಿದಿದೆ. ಕೇಂದ್ರ ಸರ್ಕಾರವು ಜನರ ಸಹಕಾರದೊಂದಿಗೆ ತಾನು ನೀಡಿದ ಆಶ್ವಾಸನೆಗಳನ್ನು ಹಾಗೂ ಹಮ್ಮಿಕೊಂಡ ಆಂದೋಲನಗಳನ್ನು ಪೂರೈಸಲಿದೆ ಎಂದರು.

ನೈರ್ಮಲ್ಯ ಕ್ಷೇತ್ರದಲ್ಲಿನ ಸಾಧನೆಗಳ ಕುರಿತು ಮಾತನಾಡಿದ ಅವರು, 2014ರಲ್ಲಿ ಶೇ.40ರಷ್ಟಿದ್ದ ಶೌಚಾಲಯಗಳ ವ್ಯಾಪ್ತಿ ಇಂದು ಶೇ 80ರಷ್ಟು ವಿಸ್ತರಿಸಿದೆ. ಶೌಚಾಲಯಗಳ ನಿರ್ಮಾಣದಿಂದ ಸಾಮಾಜಿಕ ಅಸಮತೋಲ ನಿವಾರಣೆ ಆಗುತ್ತಿದೆ ಹಾಗೂ ಸಾಮಾಜಿಕ-ಆರ್ಥಿಕ ಸಬಲೀಕರಣ ಮತ್ತು ಮಹಿಳಾ ಸಬಲೀಕರಣಕ್ಕೆ ಕಾರಣವಾಗಿದೆ. ಸ್ವಚ್ಛ ಭಾರತ್ ಅಭಿಯಾನವು 21ನೇ ಶತಮಾನದಲ್ಲಿ ಯಾವ ದೇಶದಲ್ಲೂ ನಡೆಯದ ಒಂದು ಆಂದೋಲನ ಎಂದು ಪ್ರಧಾನಿ ಬಣ್ಣಿಸಿದರು.

ಶುದ್ಧ ಹಾಗೂ ಶ್ರೀಮಂತ ಭಾರತದ ನಿರ್ಮಾಣದಲ್ಲಿ ಸ್ವಚ್ಛತೆಯು ಹೊಸ ಅಧ್ಯಾಯವನ್ನು ಬರೆಯಲಿದೆ ಎನ್ನುವ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು.

Click here to read PM's speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Annual malaria cases at 2 mn in 2023, down 97% since 1947: Health ministry

Media Coverage

Annual malaria cases at 2 mn in 2023, down 97% since 1947: Health ministry
NM on the go

Nm on the go

Always be the first to hear from the PM. Get the App Now!
...
PM Modi remembers the unparalleled bravery and sacrifice of the Sahibzades on Veer Baal Diwas
December 26, 2024

The Prime Minister, Shri Narendra Modi remembers the unparalleled bravery and sacrifice of the Sahibzades on Veer Baal Diwas, today. Prime Minister Shri Modi remarked that their sacrifice is a shining example of valour and a commitment to one’s values. Prime Minister, Shri Narendra Modi also remembers the bravery of Mata Gujri Ji and Sri Guru Gobind Singh Ji.

The Prime Minister posted on X:

"Today, on Veer Baal Diwas, we remember the unparalleled bravery and sacrifice of the Sahibzades. At a young age, they stood firm in their faith and principles, inspiring generations with their courage. Their sacrifice is a shining example of valour and a commitment to one’s values. We also remember the bravery of Mata Gujri Ji and Sri Guru Gobind Singh Ji. May they always guide us towards building a more just and compassionate society."