ಭಯೋತ್ಪಾದನೆ ನಿಗ್ರಹ, ಎಡಪಂಥೀಯ ಉಗ್ರವಾದ, ಕರಾವಳಿ ಭದ್ರತೆ ಸೇರಿದಂತೆ ರಾಷ್ಟ್ರೀಯ ಭದ್ರತೆಯ ನಿರ್ಣಾಯಕ ಅಂಶಗಳನ್ನು ಸಮ್ಮೇಳನದಲ್ಲಿ ಚರ್ಚಿಸಲಾಗುವುದು
ಪೋಲೀಸ್ ಸೇವೆ ಮತ್ತು ಆಂತರಿಕ ಭದ್ರತಾ ವಿಷಯಗಳಿಗೆ ಸಂಬಂಧಿಸಿದ ವೃತ್ತಿಪರ ಅಭ್ಯಾಸಗಳು ಮತ್ತು ಪ್ರಕ್ರಿಯೆಗಳನ್ನು ಸಮ್ಮೇಳನದಲ್ಲಿ ಚರ್ಚಿಸಲಾಗುತ್ತದೆ ಮತ್ತು ಹಂಚಿಕೊಳ್ಳಲಾಗುತ್ತದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ನವೆಂಬರ್ 30ರಿಂದ ಡಿಸೆಂಬರ್ 1ರ ವರೆಗೆ ಒಡಿಶಾ ರಾಜ್ಯದ ಭುವನೇಶ್ವರದ ಲೋಕಸೇವಾ ಭವನದ ರಾಜ್ಯ ಕನ್ವೆನ್ಷನ್ ಸೆಂಟರ್ ನಲ್ಲಿ ಅಖಿಲ ಭಾರತ ಪೊಲೀಸ್ ಡೈರೆಕ್ಟರ್ ಜನರಲ್‌ಗಳು / ಇನ್‌ಸ್ಪೆಕ್ಟರ್ ಜನರಲ್‌ಗಳ 2024ರ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

2024 ನವೆಂಬರ್ 29ರಿಂದ ಡಿಸೆಂಬರ್ 1ರ ವರೆಗೆ ನಡೆಯಲಿರುವ 3 ದಿನಗಳ ಸಮ್ಮೇಳನವು ಭಯೋತ್ಪಾದನೆ ನಿಗ್ರಹ, ಎಡಪಂಥೀಯ ಉಗ್ರವಾದ, ಕರಾವಳಿ ಭದ್ರತೆ, ಹೊಸ ಕ್ರಿಮಿನಲ್ ಕಾನೂನುಗಳು, ಮಾದಕ ದ್ರವ್ಯಗಳು ಸೇರಿದಂತೆ ರಾಷ್ಟ್ರೀಯ ಭದ್ರತೆಯ ನಿರ್ಣಾಯಕ ಅಂಶಗಳ ಕುರಿತು ಚರ್ಚೆಗಳನ್ನು ನಡೆಸಲಿದೆ. ಸಮ್ಮೇಳನದಲ್ಲಿ ವಿಶೇಷ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಸಹ ನೀಡಲಾಗುತ್ತದೆ.

ಈ ಸಮ್ಮೇಳನವು ದೇಶದ ಹಿರಿಯ ಪೊಲೀಸ್ ವೃತ್ತಿಪರರು ಮತ್ತು ಭದ್ರತಾ ನಿರ್ವಾಹಕರಿಗೆ ವಿವಿಧ ರಾಷ್ಟ್ರೀಯ ಭದ್ರತೆ-ಸಂಬಂಧಿತ ಸಮಸ್ಯೆಗಳನ್ನು ಹಾಗೆಯೇ, ಭಾರತದಲ್ಲಿ ಪೊಲೀಸರು ಎದುರಿಸುತ್ತಿರುವ ವಿವಿಧ ಕಾರ್ಯಾಚರಣೆ, ಮೂಲಸೌಕರ್ಯ ಮತ್ತು ಕಲ್ಯಾಣ-ಸಂಬಂಧಿತ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲು ಮತ್ತು ಸಮಾಲೋಚನೆ ನಡೆಸಲು ಸಂವಾದಾತ್ಮಕ ವೇದಿಕೆ ಒದಗಿಸುತ್ತದೆ, ಆಂತರಿಕ ಭದ್ರತಾ ಬೆದರಿಕೆಗಳ ಜೊತೆಗೆ ಅಪರಾಧ ನಿಯಂತ್ರಣ ಮತ್ತು ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ಸಂಬಂಧಿಸಿದ ಸವಾಲುಗಳನ್ನು ನಿಭಾಯಿಸುವಲ್ಲಿ ವೃತ್ತಿಪರ ಅಭ್ಯಾಸಗಳು ಮತ್ತು ಪ್ರಕ್ರಿಯೆಗಳ ಸೂತ್ರೀಕರಣ ಮತ್ತು ಹಂಚಿಕೆ ಕುರಿತು ಚರ್ಚೆಗಳು ನಡೆಯಲಿವೆ.

ಪ್ರಧಾನಮಂತ್ರಿ ಅವರು ಯಾವಾಗಲೂ ಡಿಜಿಪಿ ಸಮ್ಮೇಳನಕ್ಕೆ ತಮ್ಮ ಆಳವಾದ ಆಸಕ್ತಿ ಪ್ರದರ್ಶಿಸುತ್ತಾ ಬಂದಿದ್ದಾರೆ. ಪ್ರಧಾನಮಂತ್ರಿ ಅವರು ಪೊಲೀಸ್ ಇಲಾಖೆಯ ಎಲ್ಲಾ ಕೊಡುಗೆಗಳನ್ನು ಗಮನವಿಟ್ಟು ಆಲಿಸುವುದು ಮಾತ್ರವಲ್ಲದೆ, ಮುಕ್ತ ಮತ್ತು ಅನೌಪಚಾರಿಕ ಚರ್ಚೆಗಳ ವಾತಾವರಣವನ್ನು ಪೋಷಿಸುತ್ತಾರೆ, ಹೊಸ ಆಲೋಚನೆಗಳ ಹೊರಹೊಮ್ಮುವಿಕೆಗೆ ಅವಕಾಶ ಮಾಡಿಕೊಡುತ್ತಾರೆ. ಈ ವರ್ಷ, ಸಮ್ಮೇಳನಕ್ಕೆ ಕೆಲವು ವಿಶಿಷ್ಟ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಯೋಗ ಕಲಾಪ, ವ್ಯವಹಾರ ಕಲಾಪ, ವಿರಾಮ ಕಲಾಪ, ಮತ್ತು ವಿಷಯಾಧಾರಿತ ಡೈನಿಂಗ್ ಟೇಬಲ್‌ಗಳಿಂದ ಪ್ರಾರಂಭಿಸಿ ಇಡೀ ದಿನವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ದೇಶದ ಮೇಲೆ ಪರಿಣಾಮ ಬೀರುವ ನಿರ್ಣಾಯಕ ಪೋಲೀಸ್ ಸೇವೆ ಮತ್ತು ಆಂತರಿಕ ಭದ್ರತಾ ವಿಷಯಗಳ ಕುರಿತ ತಮ್ಮ ದೃಷ್ಟಿಕೋನಗಳು ಮತ್ತು ಸಲಹೆಗಳನ್ನು ಪ್ರಧಾನ ಮಂತ್ರಿ ಅವರಿಗೆ ಪ್ರಸ್ತುತಪಡಿಸಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅಮೂಲ್ಯ ಅವಕಾಶ ಒದಗಿಸುತ್ತದೆ.

2014ರಿಂದಲೂ ದೇಶಾದ್ಯಂತ ವಾರ್ಷಿಕ ಡಿಜಿಎಸ್‌ಪಿ/ಐಜಿಎಸ್‌ಪಿ ಸಮ್ಮೇಳನ ಆಯೋಜಿಸಲು ಪ್ರಧಾನ ಮಂತ್ರಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಸಮ್ಮೇಳನವನ್ನು ಗುವಾಹತಿ (ಅಸ್ಸಾಂ), ರಣ್ ಆಫ್ ಕಚ್ಛ್ (ಥಾರ್ ಮರುಭೂಮಿ-ಗುಜರಾತ್), ಹೈದರಾಬಾದ್ (ತೆಲಂಗಾಣ), ತೆಕನ್‌ಪುರ (ಗ್ವಾಲಿಯರ್, ಮಧ್ಯಪ್ರದೇಶ), ಏಕತೆಯ ಪ್ರತಿಮೆ (ಕೆವಾಡಿಯಾ, ಗುಜರಾತ್), ಪುಣೆ (ಮಹಾರಾಷ್ಟ್ರ), ಲಕ್ನೋ (ಉತ್ತರ ಪ್ರದೇಶ), ನವದೆಹಲಿ ಮತ್ತು ಜೈಪುರ (ರಾಜಸ್ಥಾನ)ದಲ್ಲಿ ಆಯೋಜಿಸಲಾಗಿದೆ. ಈ ಸಂಪ್ರದಾಯವನ್ನು ಮುಂದುವರಿಸುತ್ತಾ, 59ನೇ ಡಿಜಿಎಸ್‌ಪಿ/ಐಜಿಎಸ್‌ಪಿ ಸಮ್ಮೇಳನ 2024 ಅನ್ನು ಭುವನೇಶ್ವರ (ಒಡಿಶಾ)ದಲ್ಲಿ ಆಯೋಜಿಸಲಾಗುತ್ತಿದೆ.

ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವರು, ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಗೃಹ ವ್ಯವಹಾರಗಳ ರಾಜ್ಯ ಸಚಿವರು,  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿ ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ ಮುಖ್ಯಸ್ಥರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s coffee exports zoom 45% to record $1.68 billion in 2024 on high global prices, demand

Media Coverage

India’s coffee exports zoom 45% to record $1.68 billion in 2024 on high global prices, demand
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 4 ಜನವರಿ 2025
January 04, 2025

Empowering by Transforming Lives: PM Modi’s Commitment to Delivery on Promises