ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಐಐಟಿ, ಗುವಾಹತಿಯ ಘಟಿಕೋತ್ಸವ ಉದ್ದೇಶಿಸಿ 2020ರ ಸೆಪ್ಟೆಂಬರ್ 22ರಂದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಲಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಶ್ರೀ ಸರ್ಬಾನಂದ್ ಸೋನೋವಾಲ್, ಕೇಂದ್ರ ಶಿಕ್ಷಣ ಸಚಿವ, ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್, ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ಧೋತ್ರೆ ಮತ್ತು ಇತರ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
687 ಬಿಟೆಕ್ ಮತ್ತು 63 ಎಂಟೆಕ್ ವಿದ್ಯಾರ್ಥಿಗಳು ಸೇರಿ 1803 ವಿದ್ಯಾರ್ಥಿಗಳು ನಾಳೆ ಪದವಿ ಪಡೆಯಲಿದ್ದಾರೆ.