ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ 2024 ರ ಜುಲೈ 30 ರಂದು ನಡೆಯಲಿರುವ “ವಿಕಸಿತ ಭಾರತದೆಡೆಗೆ ಪಯಣ: ಕೇಂದ್ರ ಬಜೆಟ್ 2024-25 ನಂತರದ ಸಮಾವೇಶ” ದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಈ ಸಮಾವೇಶವನ್ನು ಆಯೋಜಿಸಿದ್ದು ಸರ್ಕಾರದ ಪ್ರಗತಿಯ ವಿಸ್ತೃತ ನೋಟಕ್ಕೆ ರೂಪುರೇಷೆ ಹಾಕಿಕೊಡುವ ಮತ್ತು ಈ ಪ್ರಯತ್ನದಲ್ಲಿ ಕೈಗಾರಿಕೆಗಳ ಪಾತ್ರದ ಬಗ್ಗೆ ಬೆಳಕು ಚೆಲ್ಲುವ ಉದ್ದೇಶ ಹೊಂದಿದೆ.
ಕೈಗಾರಿಕೆಗಳು, ಸರ್ಕಾರ, ರಾಜತಾಂತ್ರಿಕ ಸಮುದಾಯ, ಚಿಂತಕರ ಚಾವಡಿ ಮೊದಲಾದ 1000 ಕ್ಕೂ ಪ್ರತಿನಿಧಿಗಳು ಸಮಾವೇಶದಲ್ಲಿ ವ್ಯಕ್ತಿಗತವಾಗಿ ಪಾಲ್ಗೊಳ್ಳಲಿದ್ದು ವಿವಿಧ ಸಿಐಐ ಕೇಂದ್ರಗಳ ದೇಶ ವಿದೇಶಗಳ ಪ್ರತಿನಿಧಿಗಳು ಆನ್ಲೈನ್ ಮೂಲಕ ಪಾಲ್ಗೊಳ್ಳಲಿದ್ದಾರೆ.