ನವದೆಹಲಿಯ ಭಾರತ್ ಮಂಟಪದಲ್ಲಿ 26ನೇ ಸೆಪ್ಟೆಂಬರ್ 2023 ರಂದು ನಡೆಯಲಿರುವ ಜಿ20 ಯೂನಿವರ್ಸಿಟಿ ಕನೆಕ್ಟ್ ಫಿನಾಲೆ ಕಾರ್ಯಕ್ರಮವನ್ನು ಉದ್ದೇಶಿಸಿ ಸಂಜೆ ಸುಮಾರು 4 ಗಂಟೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ.
ಜಿ20 ಜನ ಭಾಗಿದರಿ ಆಂದೋಲನವು ದೇಶಾದ್ಯಂತದ ದಾಖಲೆಯ ಮಟ್ಟದಲ್ಲಿ ವಿವಿಧ ಶಾಲೆಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳಿಂದ 5 ಕೋಟಿಗೂ ಹೆಚ್ಚು ಯುವಜನತೆಯ ಭಾಗವಹಿಸುವಿಕೆಯನ್ನು ಕಂಡಿತು. ಭಾರತದ ಯುವಜನರಲ್ಲಿ ಭಾರತದ ಜಿ20 ಅಧ್ಯಕ್ಷತೆಯ ತಿಳುವಳಿಕೆಯನ್ನು ನಿರ್ಮಿಸುವ ಮತ್ತು ವಿವಿಧ ಜಿ20 ಕಾರ್ಯಕ್ರಮಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಜಿ20 ಯೂನಿವರ್ಸಿಟಿ ಕನೆಕ್ಟ್ ಉಪಕ್ರಮವನ್ನು ಕೈಗೊಳ್ಳಲಾಗಿದೆ. ಈ ಕಾರ್ಯಕ್ರಮವು ಭಾರತದಾದ್ಯಂತ ವಿಶ್ವವಿದ್ಯಾನಿಲಯಗಳಿಂದ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಿದೆ. ಭಾರತದ 75 ವರ್ಷಗಳ ಸ್ವಾತಂತ್ರ್ಯದ ಸ್ಮರಣಾರ್ಥವಾಗಿ 75 ವಿಶ್ವವಿದ್ಯಾಲಯಗಳಿಗೆ ಆರಂಭದಲ್ಲಿ ಯೋಜಿಸಲಾಗಿತ್ತು, ಈ ಉಪಕ್ರಮವು ಅಂತಿಮವಾಗಿ ಭಾರತದಾದ್ಯಂತ 101 ವಿಶ್ವವಿದ್ಯಾಲಯಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು.
ಜಿ-20 ಯೂನಿವರ್ಸಿಟಿ ಕನೆಕ್ಟ್ ಉಪಕ್ರಮದ ಅಡಿಯಲ್ಲಿ ದೇಶಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಯಿತು. ಉನ್ನತ ಶಿಕ್ಷಣ ಸಂಸ್ಥೆಗಳ ವ್ಯಾಪಕ ಭಾಗವಹಿಸುವಿಕೆಯನ್ನು ಹಾಗೂ, ಆರಂಭದಲ್ಲಿ ವಿಶ್ವವಿದ್ಯಾನಿಲಯಗಳ ಕಾರ್ಯಕ್ರಮವಾಗಿ ಪ್ರಾರಂಭವಾದ ಕಾರ್ಯಕ್ರಮವು ಶೀಘ್ರವಾಗಿ ಮತ್ತಷ್ಟು ಶಾಲೆಗಳು ಮತ್ತು ಕಾಲೇಜುಗಳನ್ನು ಒಳಗೊಂಡಂತೆ ಬೆಳೆಯಿತು, ಇನ್ನೂ ಹೆಚ್ಚಿನ ಭಾಗವಹಿಸುವಿಕೆಯನ್ನುಂತ್ತು ಪ್ರೇಕ್ಷಕರನ್ನು ತಲುಪಿತು.
ಜಿ20 ಯೂನಿವರ್ಸಿಟಿ ಕನೆಕ್ಟ್ ಫಿನಾಲೆಯ ಕಾರ್ಯಕ್ರಮದಲ್ಲಿ ಸುಮಾರು 3000 ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಭಾಗವಹಿಸುವ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಭಾಗವಹಿಸುತ್ತಾರೆ. ಇದಲ್ಲದೆ, ದೇಶಾದ್ಯಂತದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಜಾಲತಾಣ ಮೂಲಕ ನೇರವಾಗಿ ( ಲೈವ್ ಆಗಿ) ಸೇರಲಿದ್ದಾರೆ.