ಮಾರ್ಚ್ 17ರಂದು ರಾಷ್ಟ್ರದ ರಾಜಧಾನಿಯ ಪುಸಾದ ಐ.ಎ.ಆರ್.ಐ. ಕ್ಯಾಂಪಸ್ ನಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ವಾರ್ಷಿಕ ಕೃಷಿ ಉನ್ನತಿ ಮೇಳ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ.
ಜೈವಿಕ ಕೃಷಿ ಕುರಿತ ಪೋರ್ಟಲ್ ಉದ್ಘಾಟಿಸಿ ಮತ್ತು 25 ಕೃಷಿ ವಿಜ್ಞಾನ ಕೇಂದ್ರಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ರೈತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದೇ ವೇಳೆ ಪ್ರಧಾನಮಂತ್ರಿಯವರು ಕೃಷಿ ಕರ್ಮಿ ಮತ್ತು ದೀನ್ ದಯಾಳ್ ಉಪಾಧ್ಯಾಯ ಕೃಷಿ ವಿಜ್ಞಾನ ಪ್ರೋತ್ಸಾಹನ್ ಪುರಸ್ಕಾರಗಳನ್ನೂ ಪ್ರದಾನ ಮಾಡಲಿದ್ದಾರೆ.
ಈ ಮೇಳದ ಉದ್ದೇಶ ರೈತರ ಆದಾಯವನ್ನು 2020ರ ಹೊತ್ತಿಗೆ ದುಪ್ಪಟ್ಟು ಮಾಡುವುದಾಗಿದೆ. ಕೃಷಿ ಮತ್ತು ಪೂರಕ ವಲಯದಲ್ಲಿನ ಇತ್ತೀಚಿನ ತಾಂತ್ರಿಕ ಅಭಿವೃದ್ಧಿಗಳ ಕುರಿತಂತೆ ರೈತರಿಗೆ ಅರಿವು ಮೂಡಿಸುವುದು ಕೃಷಿ ಉನ್ನತಿ ಮೇಳದ ಧ್ಯೇಯವಾಗಿದೆ.
ರೈತರ ಆದಾಯ ದುಪ್ಪಟ್ಟು ಮಾಡುವ ಧ್ಯೇಯದ ಪೆವಿಲಿಯನ್ ಗಳು, ಸೂಕ್ಷ್ಮ ನೀರಾವರಿ ಕುರಿತಂತೆ ನೇರ ಪ್ರಾತ್ಯಕ್ಷಿಕೆಗಳು, ತ್ಯಾಜ್ಯ ಜಲ ಬಳಕೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಈ ಮೇಳದ ಪ್ರಮುಖ ಆಕರ್ಷಣೆಯಾಗಿದೆ. ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಪೆವಿಲಿಯನ್ ಗಳನ್ನು ಮೇಳದಲ್ಲಿ ತೆರೆಯಲಾಗಿದೆ.