ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 28 ರಂದು ಬೆಳಿಗ್ಗೆ 11:30 ಕ್ಕೆ ರಾಜಸ್ಥಾನದ ಭಿಲ್ವಾರಾದಲ್ಲಿ ಭಗವಾನ್ ಶ್ರೀ ದೇವನಾರಾಯಣ್ ಜೀ ಅವರ 1111 ನೇ ಅವತಾರ ಮಹೋತ್ಸವದ ಸ್ಮರಣಾರ್ಥ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಭಗವಾನ್ ಶ್ರೀ ದೇವನಾರಾಯಣ್ ಜೀ ಅವರನ್ನು ರಾಜಸ್ಥಾನದ ಜನರು ಪೂಜಿಸುತ್ತಾರೆ ಮತ್ತು ಅವರ ಅನುಯಾಯಿಗಳು ದೇಶದ ಉದ್ದಗಲಕ್ಕೂ ಹರಡಿದ್ದಾರೆ. ಸಾರ್ವಜನಿಕ ಸೇವೆಯ ವಿಶೇಷ ಕೆಲಸಗಳಿಂದಾಗಿ ಅವರನ್ನು ಜನರು ಪೂಜ್ಯ ಭಾವನೆಯಿಂದ ಗೌರವಿಸುತ್ತಾರೆ.