ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇದೇ ಡಿಸೆಂಬರ್ 22ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯ ಶತಮಾನೋತ್ಸವ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದೇ ವೇಳೆ ಪ್ರಧಾನಮಂತ್ರಿ ಅವರು ಅಂಚೆ ಚೀಟಿಯನ್ನು ಬಿಡುಗಡೆ ಮಾಡುವರು. ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಮತ್ತು ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಎಎಂಯು ಕುರಿತು
ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ 1920ರಲ್ಲಿ ಸ್ಥಾಪನೆಯಾಯಿತು. ಮೊಹಮ್ಮದಿಯನ್ ಆಂಗ್ಲೋ ಓರಿಯಂಟಲ್(ಎಂಎಒ), ಕಾಲೇಜನ್ನು ಉನ್ನತೀಕರಿಸಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾನಮಾನವನ್ನು ಭಾರತೀಯ ಶಾಸನಾತ್ಮಕ ಮಂಡಳಿಯ ಕಾಯ್ದೆಯ ಮೂಲಕ ನೀಡಲಾಯಿತು. ಎಂಎಒ ಕಾಲೇಜನ್ನು 1877ರಲ್ಲಿ ಶ್ರೀ ಸೈಯದ್ ಅಹಮದ್ ಖಾನ್ ಸ್ಥಾಪಿಸಿದ್ದರು. ಈ ವಿಶ್ವವಿದ್ಯಾಲಯ ಉತ್ತರ ಪ್ರದೇಶದ ಆಲಿಗಢ ಪಟ್ಟಣದಲ್ಲಿ ಸುಮಾರು 467.6 ಎಕರೆ ಪ್ರದೇಶದ ಕ್ಯಾಂಪಸ್ ಒಳಗೊಂಡಿದೆ. ಅಲ್ಲದೆ ಇದು ಮಲ್ಲಪುರಂ(ಕೇರಳ), ಮುರ್ಷಿದಾಬಾದ್ – ಜಂಗಿಪುರ್ (ಪಶ್ಚಿಮಬಂಗಾಳ) ಮತ್ತು ಕಿಶನ್ ಗಂಜ್(ಬಿಹಾರ)ದಲ್ಲಿ ಮೂರು ಕ್ಯಾಂಪಸ್ ಗಳನ್ನು ಹೊಂದಿದೆ.