ಒಕ್ಕೂಟದ ಮೂಲಕ ಹವಾಮಾನ ಮತ್ತು ನೈಸರ್ಗಿಕ ವಿಕೋಪದ ಸಂದರ್ಭಗಳಲ್ಲೂ ತಾಳಿಕೊಳ್ಳುವಂತಹ ಮೂಲಸೌಕರ್ಯ ಉತ್ತೇಜಿಸುವಲ್ಲಿ ಭಾರತದ ನಾಯಕತ್ವವನ್ನು ಒಪ್ಪಿಕೊಂಡಿದ್ದಕ್ಕಾಗಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಡಗಾಸ್ಕರ್ ಅಧ್ಯಕ್ಷ ಘನತೆವೆತ್ತ
ಶ್ರೀ ಆಂಡ್ರಿ ನಿರಿನಾ ರಜೋಲಿನ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಮಡಗಾಸ್ಕರ್ ಅಧ್ಯಕ್ಷರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿ ಅವರು ಈ ರೀತಿ ಸಂದೇಶ ಟ್ವೀಟ್ ಮಾಡಿದ್ದಾರೆ;
"ಧನ್ಯವಾದಗಳು, ಅಧ್ಯಕ್ಷ ಶ್ರೀ ಆಂಡ್ರಿ ನಿರಿನಾ ರಜೋಲಿನ (@SE_Rajoelina ). ಹವಾಮಾನ ಬದಲಾವಣೆಯಿಂದಾಗಿ ದ್ವೀಪ ರಾಜ್ಯಗಳು ಎದುರಿಸುತ್ತಿರುವ ಸವಾಲುಗಳಿಂದ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಸಿ.ಡಿ.ಆರ್.ಐ. ಉಪಕ್ರಮದ ಅಡಿಯಲ್ಲಿ ಮೂಲಸೌಕರ್ಯವನ್ನು ರಚಿಸುವುದೇ ನಮ್ಮ ಪ್ರಯತ್ನಗಳ ಪ್ರಮುಖ ಕೇಂದ್ರಬಿಂದುವಾಗಿದೆ."
Thank you President @SE_Rajoelina. The challenges faced by Island States due to climate change are a key focus of our efforts under the CDRI initiative to create resilient infrastructure. https://t.co/iMmULZhf0o
— Narendra Modi (@narendramodi) May 5, 2022