ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಗೆ ಜನ್ಮಾಷ್ಟಮಿ ಶುಭಾಶಯ ಕೋರಿದ ಲತಾ ಮಂಗೇಶ್ಕರ್ ಅವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಖ್ಯಾತ ಗಾಯಕಿ ಪ್ರಧಾನಿ ಅವರಿಗೆ ಶುಭ ಹಾರೈಸಿದ್ದರು ಜೊತೆಗೆ ಶುಭ ಹಾರೈಕೆ ಟ್ವೀಟ್‌ನಲ್ಲಿ ತಮ್ಮ ಗುಜರಾತಿ ಭಜನೆಯೊಂದನ್ನು ಲಗತ್ತಿಸಿದ್ದರು.
ಇದಕ್ಕೆ ಉತ್ತರವಾಗಿ ಪ್ರಧಾನಿ ಟ್ವೀಟ್ ಹೀಗೆ ಮಾಡಿದ್ದಾರೆ: "ಸಹೋದರಿ ಲತಾ ಮಂಗೇಶ್ಕರ್ @mangeshkarlata ಅವರ ಆಶೀರ್ವಾದಕ್ಕಾಗಿ ತುಂಬಾ ಧನ್ಯವಾದಗಳು. ಜನ್ಮಾಷ್ಟಮಿಯ ಪ್ರಯುಕ್ತ ನಿಮಗೆ ಅನೇಕಾನೇಕ ಶುಭಾಶಯಗಳು. ನಿಮ್ಮ ರಾಗಗಳಿಂದ ಅಲಂಕರಿಸಲ್ಪಟ್ಟ ಈ ಸ್ತೋತ್ರವು ಮೋಡಿ ಮಾಡುವಂತಿದೆ,” ಎಂದಿದ್ದಾರೆ.
आशीर्वचन के लिए बहुत-बहुत आभार @mangeshkarlata दीदी। आपको भी जन्माष्टमी की अनेकानेक शुभकामनाएं। आपके सुरों से सजा यह भजन मंत्रमुग्ध कर देने वाला है। https://t.co/jzxQq6OXQr
— Narendra Modi (@narendramodi) August 30, 2021