ಮಧ್ಯಪ್ರದೇಶದ “ರೇಷನ್ ಆಪ್ಕೆ ಗ್ರಾಮ್” ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಮಂತ್ರಿ
ಮಧ್ಯಪ್ರದೇಶದಲ್ಲಿ ಸಿಕಲ್ ಸೆಲ್ ಮಿಷನ್ ಉದ್ಘಾಟಿಸಿದ ಪ್ರಧಾನಮಂತ್ರಿ
ದೇಶಾದ್ಯಂತ 50 ಏಕಲವ್ಯ ಮಾದರಿ ವಸತಿ ಶಾಲೆಗಳ ನಿರ್ಮಾಣಕ್ಕೆ ಪ್ರಧಾನಮಂತ್ರಿ ಅವರಿಂದ ಅಡಿಪಾಯ
“ಸ್ವಾತಂತ್ರ್ಯೋತ್ತದಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಇಡೀ ದೇಶದ ಬುಡಕಟ್ಟು ಸಮಾಜದ ಕಲೆ, ಸಂಸ್ಕೃತಿ, ಸ್ವಾತಂತ್ರ್ಯ ಚಳವಳಿ ಮತ್ತು ರಾಷ್ಟ್ರನಿರ್ಮಾಣಕ್ಕೆ ಅವರ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ ಮತ್ತು ಹೆಮ್ಮೆಯಿಂದ ಗೌರವಿಸಲಾಗುತ್ತಿದೆ”
“ದೇಶದ ಸ್ವಾತಂತ್ರ್ಯ ಸಂಗ್ರಾಮದ ಪೂರ್ವದಲ್ಲಿ ಬುಡಕಟ್ಟು ಸಮುದಾಯದ ನಾಯಕರು ಮತ್ತು ನಾಯಕಿಯರ ಸ್ಫೂರ್ತಿದಾಯಕ ಕಥೆಗಳನ್ನು ಹೊರತೆಗೆಯುವುದು ನಮ್ಮ ಕರ್ತವ್ಯ ಮತ್ತು ಹೊಸ ಪೀಳಿಗೆಗೆ ಇವರನ್ನು ಪರಿಚಯಿಸಬೇಕಿದೆ”
ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳನ್ನು ಬಾಬಾಸಾಹೇಬ್ ಪುರಂದರೆ ಅವರು ದೇಶದ ಜನರ ಮುಂದೆ ಅನಾವರಣಗೊಳಿಸಿದ್ದು, ಈ ಆದರ್ಶಗಳು ನಮಗೆ ನಿರಂತರ ಸ್ಪೂರ್ತಿದಾಯಕವಾಗಿವೆ
ಇವತ್ತು ಬುಡಕಟ್ಟು ಪ್ರದೇಶಗಳಲ್ಲಿ ಬಡವರಿಗೆ ಮನೆ, ಶೌಚಾಲಯಗಳು, ಉಚಿತ ವಿದ್ಯುತ್ ಮತ್ತು ಅಡುಗೆ ಅನಿಲ ಸಂಪರ್ಕ, ಶಾಲೆಗಳು, ರಸ್ತೆ ಮತ್ತು ಉಚಿತ ಚಿಕಿತ್ಸೆಯನ್ನು ದೇಶದ ಇತರೆ ಪ್ರದೇಶಗಳಿಗೂ ವಿಸ್ತರಿಸಲಾಗುತ್ತಿದೆ
“ದೇಶದ ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವರಿಗೆ ಪದ್ಮ ಪ್ರಶಸ್ತಿ ದೊರೆತಿದೆ ಮತ್

ಮಧ್ಯಪ್ರದೇಶದಲ್ಲಿ ಜನ್ ಜಾತಿಯಾ ಗೌರವ್ ದಿವಸ್ ಮಹಾಸಮ್ಮೇಳನದಲ್ಲಿ ಜನ್ ಜಾತಿಯಾ ಸಮುದಾಯದ ಅನೇಕ ಕಲ್ಯಾಣ ಕಾರ್ಯಕ್ರಮಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. “ರೇಷನ್ ಆಪ್ಕೆ ಗ್ರಾಮ್” ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು. ಮಧ್ಯಪ್ರದೇಶದ ಸಿಕೆಲ್ ಸೆಲ್ ಅಭಿಯಾನಕ್ಕೂ ಚಾಲನೆ ನೀಡಿದರು. ದೇಶಾದ್ಯಂತ 50 ಏಕಲವ್ಯ ಮಾದರಿ ವಸತಿ ಶಾಲೆಗಳ ನಿರ್ಮಾಣಕ್ಕೆ ಪ್ರಧಾನಮಂತ್ರಿ ಅವರು ಅಡಿಪಾಯ ಹಾಕಿದರು. ಮಧ್ಯಪ್ರದೇಶದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರಲ್ಲದೇ ಕೇಂದ್ರ ಸಚಿವರಾದ ಡಾ. ವಿರೇಂದ್ರ ಕುಮಾರ್, ಶ್ರೀ ನರೇಂದ್ರ ಸಿಂಗ್ ತೋಮರ್, ಶ್ರೀ ಜ್ಯೋತಿರಾಧಿತ್ಯಾ ಸಿಂಧಿಯಾ, ಕೇಂದ್ರ ಸಂಪುಟದ ರಾಜ್ಯ ಸಚಿವರಾದ ಶ್ರೀ ಪ್ರಹ್ಲಾದ್ ಎಸ್. ಪಟೇಲ್, ಶ್ರೀ ಫಗ್ಗನ್ ಸಿಂಗ್ ಕುಲಸ್ತೆ ಮತ್ತು ಡಾ.ಎಲ್. ಮುರುಗನ್ ಮತ್ತಿತರರು ಉಪಸ್ಥಿತರಿದ್ದರು. 

ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತ ಇಂದು ಮೊದಲ ಜನ್ ಜಾತಿಯಾ ಗೌರವ್ ದಿವಸ್ ಆಚರಿಸುತ್ತಿದೆ. “ ಸ್ವಾತಂತ್ರ್ಯೋತ್ತರದಲ್ಲಿ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದೇಶದ ಎಲ್ಲಾ ಬುಡಕಟ್ಟು ಸಮುದಾಯದ ಕಲೆ, ಸಂಸ್ಕೃತಿ ಅನಾವರಣಗೊಳ್ಳುತ್ತಿದೆ. ಸ್ವಾತಂತ್ರ್ಯ ಸಂಗ್ರಾಮ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಬುಡಕಟ್ಟು ಜನರ ಕೊಡುಗೆಯನ್ನು ಸ್ಮರಿಸಿಕೊಳ್ಳುವುದು ಮತ್ತು ಗೌರವಿಸುವುದು ನಮಗೆ ಹಮ್ಮೆ” ಎಂದು ಹೇಳಿದರು. ಬುಡಕಟ್ಟು ಸಮಾಜದೊಂದಿಗೆ ತಮ್ಮದೇ ಆದ ಸುದೀರ್ಘ ಒಡನಾಟದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಬುಡಕಟ್ಟು ಜನರ ಆದ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜೀವನದ ಶ್ರೀಮಂತಿಕೆಯನ್ನು ಶ್ಲಾಘಿಸಿದರು ಮತ್ತು ಹಾಡುಗಳು ಮತ್ತು ನೃತ್ಯ ಸೇರಿದಂತೆ ಬುಡಕಟ್ಟು ಜನಾಂಗದ ಪ್ರತಿಯೊಂದು ಸಾಂಸ್ಕೃತಿಕ ಸೊಗಡು ಹಾಗೂ ಜೀವನದ ಪಾಠ ಹೊಂದಿದೆ ಮತ್ತು ಇದರಿಂದ ತುಂಬಾ ಕಲಿಯುವುದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. 

ದೇಶದ ಸ್ವಾತಂತ್ರ್ಯ ಸಂಗ್ರಾಮದ ಪೂರ್ವದಲ್ಲಿ ಬುಡಕಟ್ಟು ಸಮುದಾಯದ ನಾಯಕರು ಮತ್ತು ನಾಯಕಿಯರ ಸ್ಫೂರ್ತಿದಾಯಕ ಕಥೆಗಳನ್ನು ಹೊರತೆಗೆಯುವುದು ನಮ್ಮ ಕರ್ತವ್ಯವಾಗಿದೆ ಮತ್ತು ಹೊಸ ಪೀಳಿಗೆಗೆ ಇವರನ್ನು ಪರಿಚಯಿಸಬೇಕಿದೆ. ಗುಲಾಮಗಿರಿಯ ಸಮಯದಲ್ಲಿ ಖಾಸಿಗಾರೋ ಚಳವಳಿ, ಮಿಜೋ ಚಳವಳಿ, ಕೋಲ್ ಚಳವಳಿ ಒಳಗೊಂಡಂತೆ ಹಲವು ಹೋರಾಟಗಳು ವಿದೇಶೀಯರ ವಿರುದ್ಧ ನಡೆದಿತ್ತು. “ಗೋಂಡ ಮಹಾರಾಣಿ ವೀರನಾರಿ ದುರ್ಗಾವತಿಯ ಶೌರ್ಯವಾಗಲಿ ಅಥವಾ ರಾಣಿ ಕಮಲಾಪತಿಯ ತ್ಯಾಗವನ್ನಾಗಲೀ ಮರೆಯಲು ಸಾಧ‍್ಯವಿಲ್ಲ. ಹೆಗಲಿಗೆ ಹೆಗಲು ಕೊಟ್ಟು ಹೋರಾಡಿ ತ್ಯಾಗ ಬಲಿದಾನ ಮಾಡಿದ ವೀರ ಮಹಾರಾಣಾ ಪ್ರತಾಪ್ ಸಿಂಗ್ ಅವರ ಹೋರಾಟವನ್ನು ಊಹಿಸಲು ಸಾಧ್ಯವಿಲ್ಲ” ಎಂದು ಪ್ರಧಾನಮಂತ್ರಿ ಹೇಳಿದರು.

ಛತ್ರಪತಿ ಶಿವಾಜಿ ಮಹಾರಾಜರ ಆದರ್ಶನಗಳನ್ನು ಬಾಬಾಸಾಹೇಬ ಪುರಂದರೆ ಅವರು ದೇಶದ ಜನರ ಮುಂದೆ ಅತ್ಯುತ್ತಮವಾಗಿ ಅನಾವರಣಗೊಳಿಸಿದ್ದು, ಈ ಆದರ್ಶಗಳು ನಮಗೆ ನಿರಂತರವಾಗಿ ಸ್ಪೂರ್ತಿದಾಯಕವಾಗಿವೆ. ಬಾಬಾಸಾಹೇಬ್ ಪುರಂದರೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ.  ಬಾಬಾ ಸಾಹೇಬ ಪುರಂದರೆ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದು, ಅವರಿಗೆ ಗೌರವ ಸಲ್ಲಿಸುವುದಾಗಿ ಹೇಳಿದರು.

“ ದೇಶದ ಸುಧಾರಣಾ ವಲಯದಲ್ಲಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಬುಡಕಟ್ಟು ಸಮಾಜದ ಕೊಡುಗೆ ಬಗ್ಗೆ ನಾವೀಗ ಚರ್ಚೆ ನಡೆಸುತ್ತಿದ್ದು, ಕೆಲವು ಜನ ನಮಗೆ ಸ್ಪೂರ್ತಿಯಾಗಿದ್ದಾರೆ. ಭಾರತದ ಸಾಂಸ್ಕೃತಿಕ ವಲಯವನ್ನು ಬಲಪಡಿಸಲು ಬುಡಕಟ್ಟು ಜನರ ಕೊಡುಗೆಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಇದಕ್ಕೆ ಕಾರಣವೆಂದರೆ ಬುಡಕಟ್ಟು ಜನರ ಕೊಡುಗೆಯನ್ನು ದೇಶಕ್ಕೆ ತಿಳಿಸಲಿಲ್ಲ  ಮತ್ತು ತಿಳಿಸಿದ್ದರೂ ಅದು ಸೀಮಿತ ಪ್ರಮಾಣದಲ್ಲಿದೆ.  “ ಇವೆಲ್ಲಾ ಏಕೆ ಸಾಧ್ಯವಾಗಲಿಲ್ಲ ಎಂದರೆ ದಶಕಗಳ ಕಾಲ ಆಡಳಿತ ನಡೆಸಿದವರು ತಮ್ಮ ಸ್ವಾರ್ಥ ರಾಜಕಾರಣಕ್ಕೆ ಆದ್ಯತೆ ನೀಡಿದರು ಎಂದು ಶ‍್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ಇವತ್ತು ಬುಡಕಟ್ಟು ಪ್ರದೇಶಗಳಲ್ಲಿ ಬಡವರಿಗೆ ಮನೆ, ಶೌಚಾಲಯಗಳು, ಉಚಿತ ವಿದ್ಯುತ್ ಮತ್ತು ಅಡುಗೆ ಅನಿಲ ಸಂಪರ್ಕ, ಶಾಲೆಗಳು, ರಸ್ತೆ ಮತ್ತು ಉಚಿತ ಚಿಕಿತ್ಸೆಯನ್ನು ದೇಶದ ಇತರೆ ಪ್ರದೇಶಗಳಿಗೂ ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಬುಡಕಟ್ಟು ಜನ ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಜಾರಿಗೆ ಪ್ರಧಾನ ಆದ್ಯತೆ ನೀಡಲಾಗುತ್ತಿದೆ. ದೇಶದ ಬುಡಕಟ್ಟು ವಲಯ ಯಾವಾಗಲೂ ಸಂಪತ್ತು ಮತ್ತು ಸಂಪನ್ಮೂಲದಲ್ಲಿ ಶ‍್ರೀಮಂತವಾಗಿದೆ. ಆದರೆ “ ಈ ಹಿಂದೆ ಆಡಳಿತದಲ್ಲಿದ್ದವರು ಇಲ್ಲಿನ ಪ್ರದೇಶಗಳನ್ನು ಶೋಷಿಸುವ ನೀತಿ ಅನುಸರಿಸಿದರು. ಈ ಕ್ಷೇತ್ರಗಳ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳುವ ನೀತಿಯನ್ನು ನಾವು ಅನುಸರಿಸುತ್ತಿದ್ದೇವೆ” ಎಂದರು. ಅರಣ್ಯ ಕಾನೂನುಗಳನ್ನು ಬದಲಾಯಿಸುವ ಮೂಲಕ ಬುಡಕಟ್ಟು ಸಮಾಜಕ್ಕೆ ಅರಣ್ಯ ಸಂಪತ್ತು ಇದೀಗ ಲಭ್ಯವಾಗುತ್ತಿದೆ ಎಂದು ಹೇಳಿದರು.

ಇತ್ತೀಚೆಗೆ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು, ಬುಡಕಟ್ಟು ಸಮಾಜದವರು ರಾಷ್ಟ್ರಪತಿ ಭವನ ಆಗಮಿಸುವುದನ್ನು ನೋಡಿ ಜಗತ್ತು ವಿಸ್ಮಯಕ್ಕೆ ಒಳಗಾಯಿತು. ಬುಡಕಟ್ಟು ಮತ್ತು ಗ್ರಾಮೀಣ ಸಮಾಜದಲ್ಲಿ ಕೆಲಸ ಮಾಡುವವರು ದೇಶದ ನಿಜವಾದ ವಜ್ರಗಳು ಎಂದು ಶ್ಲಾಘಿಸಿದರು. ಬುಡಕಟ್ಟು ವಲಯದ ಕರಕುಶಲ ಕರ್ಮಿಗಳ ಉತ್ಪನ್ನಗಳನ್ನು ರಾಷ್ಟ್ರೀಯವಾಗಿ  ಮತ್ತು ಜಾಗತಿಕವಾಗಿ ಉತ್ತೇಜಿಸಲಾಗುತ್ತಿದೆ. ಈ ಹಿಂದೆ 8 ರಿಂದ 10 ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲಾಗುತ್ತಿದ್ದು, ಇದೀಗ ಈ ಪ್ರಮಾಣವನ್ನು 90 ಅರಣ್ಯ ಉತ್ಪನ್ನಗಳಿಗೆ ವಿಸ್ತರಿಸಲಾಗಿದೆ. ಇಂತಹ ಮಹತ್ವಾಂಕ್ಷಿ ಜಿಲ್ಲೆಗಳಿಗೆ 150 ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. 37 ಸಾವಿರ ಸ್ವಸಹಾಯ ಗುಂಪುಗಳನ್ನು 2,500 ವನ್ ಧನ್ ವಿಕಾಸ್  ಕೇಂದ್ರಗಳ ಜತೆ ಜೋಡಿಸಲಾಗಿದ್ದು, ಇದರಿಂದ 7 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. 20 ಲಕ್ಷ ಪಟ್ಟಾ ಭೂಮಿ ಹಕ್ಕುಗಳನ್ನು ನೀಡಲಾಗಿದೆ ಮತ್ತು ಬುಡಕಟ್ಟು ವಲಯದ ಯುವ ಜನಾಂಗಕ್ಕೆ ಶಿಕ್ಷಣ ದೊರಕಿಸಿಕೊಡುವ ಮತ್ತು ಕೌಶಲ್ಯ ವೃದ್ಧಿಸಲು ಆದ್ಯತೆ ನೀಡಲಾಗುತ್ತಿದೆ. ಕಳೆದ 7 ವರ್ಷಗಳಲ್ಲಿ 9 ಹೊಸ ಬುಡಕಟ್ಟು ಸಂಶೋಧನಾ ಕೇಂದ್ರಗಳನ್ನು ತೆರೆದು ಈ ವಲಯಕ್ಕೆ ಸೇರ್ಪಡೆ ಮಾಡಲಾಗಿದೆ. ನೂತನ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಗೆ ಒತ್ತು ನೀಡಿರುವುದರಿಂದ ಬುಡಕಟ್ಟು ಜನರಿಗೆ ನೆರವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ನವೆಂಬರ್ 2024
November 21, 2024

PM Modi's International Accolades: A Reflection of India's Growing Influence on the World Stage