ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಆಜಾದಿ ಕಾ ಅಮೃತಮಹೋತ್ಸವ ಸೆ ಸ್ವರ್ಣಿಮ್ ಭಾರತ್ ಕಿ ಔರ್' ರಾಷ್ಟ್ರೀಯ ಉದ್ಘಾಟನಾ ಸಮಾರಂಭದಲ್ಲಿ ಆಶಯಭಾಷಣ ಮಾಡಿದರು. ʻಬ್ರಹ್ಮ ಕುಮಾರಿಸ್ʼ ಸಂಸ್ಥೆಯ ಏಳು ಉಪಕ್ರಮಗಳಿಗೆ ಅವರು ಹಸಿರು ನಿಶಾನೆ ತೋರಿದರು. ಲೋಕಸಭೆ ಸ್ಪೀಕರ್ ಶ್ರೀ ಓಂ ಬಿರ್ಲಾ, ರಾಜಸ್ಥಾನದ ರಾಜ್ಯಪಾಲ ಶ್ರೀ ಕಲ್ರಾಜ್ ಮಿಶ್ರಾ, ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಕೇಂದ್ರ ಸಚಿವರಾದ ಶ್ರೀ ಜಿ. ಕಿಶನ್ ರೆಡ್ಡಿ, ಭೂಪೇಂದರ್ ಯಾದವ್, ಶ್ರೀ ಅರ್ಜುನ್ ರಾಮ್ ಮೇಘ್ವಾಲ್, ಶ್ರೀ ಪುರುಶೋತ್ತಮ್ ರುಪಾಲ ಮತ್ತು ಶ್ರೀ ಕೈಲಾಶ್ ಚೌಧರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ʻಆಜಾದಿ ಕಾ ಅಮೃತ ಮಹೋತ್ಸವ್ʼ ಆಚರಣೆಯ ಭಾಗವಾಗಿ ʻಬ್ರಹ್ಮ ಕುಮಾರಿ ಸಂಸ್ಥೆʼಯ ವತಿಯಿಂದ ಕಾರ್ಯಕ್ರಮ ಆಯೋಜಿಸಿರುವುದು ಸುವರ್ಣ ಭಾರತದ ಭಾವನೆ, ಚೈತನ್ಯ ಮತ್ತು ಸ್ಫೂರ್ತಿಗೆ ಉದಾಹರಣೆಯಾಗಿದೆ ಎಂದರು. ಒಂದು ಕಡೆ ವೈಯಕ್ತಿಕ ಆಕಾಂಕ್ಷೆಗಳು ಮತ್ತು ಯಶಸ್ಸುಗಳು ಮತ್ತು ಇನ್ನೊಂದು ಕಡೆ ರಾಷ್ಟ್ರೀಯ ಆಕಾಂಕ್ಷೆಗಳು ಮತ್ತು ಯಶಸ್ಸುಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಅವರು ಹೇಳಿದರು. ನಮ್ಮ ಪ್ರಗತಿಯು ರಾಷ್ಟ್ರದ ಪ್ರಗತಿಯಲ್ಲಿ ಅಡಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ರಾಷ್ಟ್ರವು ನಮ್ಮಿಂದ ಅಸ್ತಿತ್ವದಲ್ಲಿದೆ, ಮತ್ತು ನಾವು ರಾಷ್ಟ್ರದ ಮೂಲಕ ಅಸ್ತಿತ್ವದಲ್ಲಿದ್ದೇವೆ. ಈ ಸಾಕ್ಷಾತ್ಕಾರವು ನವ ಭಾರತವನ್ನು ಕಟ್ಟುವಲ್ಲಿ ಭಾರತೀಯರಾದ ನಮಗೆ ದೊಡ್ಡ ಶಕ್ತಿಯಾಗುತ್ತಿದೆ. ಇಂದು ದೇಶ ಮಾಡುತ್ತಿರುವ ಪ್ರತಿಯೊಂದು ಕೆಲಸದಲ್ಲೂ 'ಸಬ್ ಕಾ ಪ್ರಯಾಸ್' ಸೇರಿದೆ ಎಂದು ಅವರು ಹೇಳಿದರು. 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್' ಎಂಬುದು ಈಗ ದೇಶಕ್ಕೆ ಮಾರ್ಗದರ್ಶನ ಮಾಡುವ ಧ್ಯೇಯವಾಕ್ಯವಾಗುತ್ತಿದೆ ಎಂದು ಅವರು ಹೇಳಿದರು.
ನವ ಭಾರತದ ನಾವಿನ್ಯತೆ ಮತ್ತು ಪ್ರಗತಿಪರ ಹೊಸ ಚಿಂತನೆ ಹಾಗೂ ಹೊಸ ಕಾರ್ಯ ವಿಧಾನದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, "ಇಂದು ನಾವು ತಾರತಮ್ಯಕ್ಕೆ ಅವಕಾಶವೇ ಇಲ್ಲದ ವ್ಯವಸ್ಥೆಯನ್ನು ರೂಪಿಸುತ್ತಿದ್ದೇವೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಅಡಿಪಾಯದ ಮೇಲೆ ದೃಢವಾಗಿ ನಿಂತಿರುವ ಸಮಾಜವನ್ನು ನಿರ್ಮಿಸುತ್ತಿದ್ದೇವೆ" ಎಂದು ಹೇಳಿದರು.
ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣುವ ಮತ್ತು ಮಹಿಳೆಯರಿಗೆ ಪ್ರಾಮುಖ್ಯತೆ ನೀಡುವ ಭಾರತೀಯ ಸಂಪ್ರದಾಯ ಬಗ್ಗೆ ಪ್ರಧಾನಿ ಹೇಳಿದರು. "ಇಡೀ ಜಗತ್ತು ಗಾಢಾಂಧಕಾರದಲ್ಲಿದ್ದಾಗ ಮತ್ತು ಮಹಿಳೆಯರ ಬಗ್ಗೆ ಹಳೆಯ ಚಿಂತನೆಯಲ್ಲಿ ಸಿಲುಕಿದ್ದಾಗ, ಭಾರತವು ಮಹಿಳೆಯರನ್ನು ʻಮಾತೃ ಶಕ್ತಿʼ ಮತ್ತು ʻದೇವತೆʼ ಎಂದು ಪೂಜಿಸುತ್ತಿತ್ತು. ಸಮಾಜಕ್ಕೆ ಜ್ಞಾನವನ್ನು ನೀಡುತ್ತಿದ್ದ ಗಾರ್ಗಿ, ಮೈತ್ರೇಯಿ, ಅನುಸೂಯ, ಅರುಂಧತಿ ಮತ್ತು ಮದಲಸಾ ಅವರಂತಹ ಮಹಿಳಾ ವಿದ್ವಾಂಸರು ನಮ್ಮಲ್ಲಿದ್ದರು”, ಎಂದು ಪ್ರಧಾನಿ ವಿವರಿಸಿದರು. ಭಾರತೀಯ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಗಮನಾರ್ಹ ಮಹಿಳೆಯರ ಕೊಡುಗೆಯ ಬಗ್ಗೆ ಅವರು ಗಮನ ಸೆಳೆದರು. ಮಧ್ಯಕಾಲೀನ ಸಂಷ್ಟಕದ ಕಾಲದಲ್ಲೂ ಈ ದೇಶದಲ್ಲಿ ಪನ್ನಾ ದಾಯ್ ಮತ್ತು ಮೀರಾಬಾಯಿ ಅವರಂತಹ ಮಹಾನ್ ಮಹಿಳೆಯರು ಇದ್ದರು ಎಂದು ಪ್ರಧಾನಿ ಸ್ಮರಿಸಿದರು. ಅಲ್ಲದೆ, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿಯೂ ಅನೇಕ ಮಹಿಳೆಯರ ತ್ಯಾಗವನ್ನು ಕಾಣಬಹುದು. ಕಿತ್ತೂರು ರಾಣಿ ಚೆನ್ನಮ್ಮ, ಮಾತಂಗಿನಿ ಹಜ್ರಾ, ರಾಣಿ ಲಕ್ಷ್ಮಿಬಾಯಿ, ವೀರಾಂಗನಾ ಜಲ್ಕರಿ ಬಾಯಿ ಅವರಿಂದ ಹಿಡಿದು ಸಾಮಾಜಿಕ ಕ್ಷೇತ್ರದಲ್ಲಿ ಶ್ರಮಿಸಿದ ಅಹಲ್ಯಬಾಯಿ ಹೋಳ್ಕರ್ ಮತ್ತು ಸಾವಿತ್ರಿಬಾಯಿ ಫುಲೆ ಅವರವರೆಗೂ ಮಹಿಳೆಯರು ಭಾರತದ ಅಸ್ಮಿತೆಯನ್ನು ಉಳಿಸಿಕೊಂಡಿದ್ದಾರೆ ಎಂದು ಪ್ರಧಾನಿ ಹೇಳಿದರು. ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಪ್ರವೇಶ, ಹೆಚ್ಚಿನ ಹೆರಿಗೆ ರಜೆಗಳು, ಹೆಚ್ಚಿನ ಮತದಾನದ ಮೂಲಕ ಉತ್ತಮ ರಾಜಕೀಯ ಪಾಲ್ಗೊಳ್ಳುವಿಕೆ ಹಾಗೂ ಮಂತ್ರಿಮಂಡಲದಲ್ಲಿ ಪ್ರಾತಿನಿಧ್ಯದಂತಹ ಬೆಳವಣಿಗೆಗಳು ಮಹಿಳೆಯರಲ್ಲಿ ಹೊಸ ವಿಶ್ವಾಸದ ಸಂಕೇತವಾಗಿ ಪ್ರಧಾನಿ ಪಟ್ಟಿ ಮಾಡಿದರು. ಇದೊಂದು ಸಮಾಜ-ನೇತೃತ್ವದ ಆಂದೋಲನವಾಗಿರುವ ಬಗ್ಗೆ ಮತ್ತು ದೇಶದಲ್ಲಿ ಲಿಂಗಅನುಪಾತ ಸುಧಾರಿಸಿರುವ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.
ನಮ್ಮ ಸಂಸ್ಕೃತಿ, ನಮ್ಮ ನಾಗರಿಕತೆ, ನಮ್ಮ ಮೌಲ್ಯಗಳನ್ನು ಜೀವಂತವಾಗಿರಿಸಬೇಕು ಹಾಗೂ ನಮ್ಮ ಆಧ್ಯಾತ್ಮಿಕತೆ ಮತ್ತು ನಮ್ಮ ವೈವಿಧ್ಯತೆಯನ್ನು ಸಂರಕ್ಷಿಸುವ ಜೊತೆಗೆ ಉತ್ತೇಜಿಸಬೇಕು ಎಂದು ಪ್ರಧಾನಿ ಪ್ರತಿಯೊಬ್ಬರಲ್ಲೂ ಮನವಿ ಮಾಡಿದರು. ಇದೇ ವೇಳೆ ತಂತ್ರಜ್ಞಾನ, ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ನಿರಂತರವಾಗಿ ಆಧುನೀಕರಣಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದರು.
"ಅಮೃತ ಕಾಲದ ಸಮಯವು ಮಲಗಿ ಕನಸು ಕಾಣಲು ಅಲ್ಲ, ಎಚ್ಚರವಾಗಿದ್ದು ನಿಮ್ಮ ಸಂಕಲ್ಪಗಳನ್ನು ಪೂರೈಸಿಕೊಳ್ಳಲು" ಎಂದು ಪ್ರಧಾನಿ ಹೇಳಿದರು. ಮುಂಬರುವ 25 ವರ್ಷಗಳು ಅತ್ಯಂತ ಕಠಿಣ ಪರಿಶ್ರಮ, ತ್ಯಾಗ ಮತ್ತು 'ತಪಸ್ಸಿʼನ ಅವಧಿಯಾಗಿದೆ. ನೂರಾರು ವರ್ಷಗಳ ಗುಲಾಮಗಿರಿಯಲ್ಲಿ ನಮ್ಮ ಸಮಾಜವು ಕಳೆದುಕೊಂಡದ್ದನ್ನು ಮರಳಿ ಪಡೆಯುವ ಸಮಯವೇ ಈ 25 ವರ್ಷಗಳು,” ಎಂದರು.
ಸ್ವಾತಂತ್ರ್ಯದ ನಂತರದ 75 ವರ್ಷಗಳಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ಲಕ್ಷಿಸುವ ಮತ್ತು ಅವುಗಳಿಗೆ ಅಗ್ರಗಣ್ಯ ಸ್ಥಾನ ನೀಡದಿರುವ ದುಷ್ಟತನವು ರಾಷ್ಟ್ರೀಯ ಜೀವನವನ್ನು ಪ್ರವೇಶಿಸಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ ಎಂದು ಪ್ರಧಾನಿ ಹೇಳಿದರು. ಈ ಅವಧಿಯುದ್ದಕ್ಕೂ ನಾವು ಹಕ್ಕುಗಳ ಬಗ್ಗೆ ಮಾತನಾಡಲು ಮತ್ತು ಹೋರಾಡಲು ಮಾತ್ರ ಸಮಯ ಕಳೆದಿದ್ದೇವೆ ಎಂದು ಅವರು ಹೇಳಿದರು. ಕೆಲವು ಸಂದರ್ಭಗಳಲ್ಲಿ ಹಕ್ಕುಗಳ ಬಗ್ಗೆ ಮಾತನಾಡುವುದು ಸ್ವಲ್ಪ ಮಟ್ಟಿಗೆ ಸರಿಯಾಗಿರಬಹುದು ಆದರೆ ಒಬ್ಬರ ಕರ್ತವ್ಯಗಳನ್ನು ಸಂಪೂರ್ಣವಾಗಿ ಮರೆತಿದ್ದರಿಂದಲೇ ಭಾರತ ದುರ್ಬಲಗೊಂಡಿದೆ ಎಂದು ಅವರು ಒತ್ತಿ ಹೇಳಿದರು. "ದೇಶದ ಪ್ರತಿಯೊಬ್ಬ ನಾಗರಿಕನ ಹೃದಯದಲ್ಲಿ ದೀಪವನ್ನು ಬೆಳಗಿಸುವಂತೆ - ಕರ್ತವ್ಯದ ದೀಪವನ್ನು ಬೆಳಗಿಸುವಂತೆ" ಪ್ರಧಾನಮಂತ್ರಿಯವರು ಪ್ರತಿಯೊಬ್ಬರನ್ನೂ ಒತ್ತಾಯಿಸಿದರು. ನಾವು ಒಗ್ಗಟ್ಟಿನಿಂದ ದೇಶವನ್ನು ಕರ್ತವ್ಯದ ಹಾದಿಯಲ್ಲಿ ಮುನ್ನಡೆಸುತ್ತೇವೆ, ನಂತರ ಸಮಾಜದಲ್ಲಿ ನೆಲೆಸಿರುವ ಕೆಡುಕುಗಳೂ ನಿವಾರಣೆಯಾಗಿ ದೇಶವು ಹೊಸ ಎತ್ತರವನ್ನು ತಲುಪುತ್ತದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತದ ವರ್ಚಸ್ಸಿಗೆ ಕಳಂಕ ತರುವ ಪ್ರವೃತ್ತಿ ಇದೆ ಎಂದು ಪ್ರಧಾನಿ ವಿಷಾದಿಸಿದರು. "ಇದು ಕೇವಲ ರಾಜಕೀಯ ಎಂದು ಹೇಳುವ ಮೂಲಕ ನಾವು ಇದರಿಂದ ದೂರವಿರಲು ಸಾಧ್ಯವಿಲ್ಲ. ಇದು ರಾಜಕೀಯವಲ್ಲ, ಇದು ನಮ್ಮ ದೇಶದ ಪ್ರಶ್ನೆ. ಇಂದು ನಾವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಮಯದಲ್ಲಿ, ಜಗತ್ತು ಭಾರತದ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವಂತೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ", ಎಂದು ಅವರು ಒತ್ತಿ ಹೇಳಿದರು. ಅಂತಾರಾಷ್ಟ್ರೀಯ ಉಪಸ್ಥಿತಿಯನ್ನು ಹೊಂದಿರುವ ಇಂತಹ ಸಂಸ್ಥೆಗಳು ಭಾರತದ ಸರಿಯಾದ ಚಿತ್ರಣವನ್ನು ಇತರ ದೇಶಗಳ ಜನರಿಗೆ ತಿಳಿಸಬೇಕು ಮತ್ತು ಭಾರತದ ಬಗ್ಗೆ ಹರಡುತ್ತಿರುವ ವದಂತಿಗಳ ಬಗ್ಗೆ ಸತ್ಯವನ್ನು ಹೇಳಬೇಕು ಎಂದು ಪ್ರಧಾನಿ ಕರೆ ನೀಡಿದರು. ʻಬ್ರಹ್ಮ ಕುಮಾರಿಸ್ʼನಂತಹ ಸಂಘಟನೆಗಳು ಜನರನ್ನು ಭಾರತಕ್ಕೆ ಬರುವಂತೆ ಮತ್ತು ದೇಶದ ಬಗ್ಗೆ ತಿಳಿದುಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದರು.
ब्रह्मकुमारी संस्था के द्वारा ‘आज़ादी के अमृत महोत्सव से स्वर्णिम भारत की ओर’, कार्यक्रम की शुरुआत हो रही है।
— PMO India (@PMOIndia) January 20, 2022
इस कार्यक्रम में स्वर्णिम भारत के लिए भावना भी है, साधना भी है।
इसमें देश के लिए प्रेरणा भी है, ब्रह्मकुमारियों के प्रयास भी हैं: PM @narendramodi
राष्ट्र की प्रगति में ही हमारी प्रगति है।
— PMO India (@PMOIndia) January 20, 2022
हमसे ही राष्ट्र का अस्तित्व है, और राष्ट्र से ही हमारा अस्तित्व है।
ये भाव, ये बोध नए भारत के निर्माण में हम भारतवासियों की सबसे बड़ी ताकत बन रहा है।
आज देश जो कुछ कर रहा है उसमें ‘सबका प्रयास’ शामिल है: PM @narendramodi
आज हम एक ऐसी व्यवस्था बना रहे हैं जिसमें भेदभाव की कोई जगह न हो,
— PMO India (@PMOIndia) January 20, 2022
एक ऐसा समाज बना रहे हैं, जो समानता औऱ सामाजिक न्याय की बुनियाद पर मजबूती से खड़ा हो,
हम एक ऐसे भारत को उभरते देख रहे हैं, जिसकी सोच और अप्रोच नई है, और जिसके निर्णय प्रगतिशील हैं: PM @narendramodi
कित्तूर की रानी चेनम्मा, मतंगिनी हाजरा, रानी लक्ष्मीबाई, वीरांगना झलकारी बाई से लेकर सामाजिक क्षेत्र में अहल्याबाई होल्कर और सावित्रीबाई फुले तक, इन देवियों ने भारत की पहचान बनाए रखी: PM @narendramodi
— PMO India (@PMOIndia) January 20, 2022
कठिनाइयों से भरे मध्यकाल में भी इस देश में पन्नाधाय और मीराबाई जैसी महान नारियां हुईं।
— PMO India (@PMOIndia) January 20, 2022
और अमृत महोत्सव में देश जिस स्वाधीनता संग्राम के इतिहास को याद कर रहा है, उसमें भी कितनी ही महिलाओं ने अपने बलिदान दिये हैं: PM @narendramodi
दुनिया जब अंधकार के गहरे दौर में थी, महिलाओं को लेकर पुरानी सोच में जकड़ी थी, तब भारत मातृशक्ति की पूजा, देवी के रूप में करता था।
— PMO India (@PMOIndia) January 20, 2022
हमारे यहाँ गार्गी, मैत्रेयी, अनुसूया, अरुंधति और मदालसा जैसी विदुषियाँ समाज को ज्ञान देती थीं: PM @narendramodi
हमें अपनी संस्कृति, अपनी सभ्यता, अपने संस्कारों को जीवंत रखना है,
— PMO India (@PMOIndia) January 20, 2022
अपनी आध्यात्मिकता को, अपनी विविधता को संरक्षित और संवर्धित करना है,
और साथ ही, टेक्नोलॉजी, इनफ्रास्ट्रक्चर, एजुकेशन, हेल्थ की व्यवस्थाओं को निरंतर आधुनिक भी बनाना है: PM @narendramodi
अमृतकाल का ये समय, सोते हुए सपने देखने का नहीं बल्कि जागृत होकर अपने संकल्प पूरे करने का है।
— PMO India (@PMOIndia) January 20, 2022
आने वाले 25 साल, परिश्रम की पराकाष्ठा, त्याग, तप-तपस्या के 25 वर्ष हैं।
सैकड़ों वर्षों की गुलामी में हमारे समाज ने जो गंवाया है, ये 25 वर्ष का कालखंड, उसे दोबारा प्राप्त करने का है: PM
बीते 75 वर्षों में हमने सिर्फ अधिकारों की बात की, अधिकारों के लिए झगड़े, जूझे, समय खपाते रहे।
— PMO India (@PMOIndia) January 20, 2022
अधिकार की बात, कुछ हद तक, कुछ समय के लिए, किसी एक परिस्थिति में सही हो सकती है लेकिन अपने कर्तव्यों को पूरी तरह भूल जाना, इस बात ने भारत को कमजोर रखने में बहुत बड़ी भूमिका निभाई है: PM
हमें ये भी मानना होगा कि आजादी के बाद के 75 वर्षों में, हमारे समाज में, हमारे राष्ट्र में, एक बुराई सबके भीतर घर कर गई है।
— PMO India (@PMOIndia) January 20, 2022
ये बुराई है, अपने कर्तव्यों से विमुख होना, अपने कर्तव्यों को सर्वोपरि ना रखना: PM @narendramodi
हम सभी को, देश के हर नागरिक के हृदय में एक दीया जलाना है- कर्तव्य का दीया।
— PMO India (@PMOIndia) January 20, 2022
हम सभी मिलकर, देश को कर्तव्य पथ पर आगे बढ़ाएंगे, तो समाज में व्याप्त बुराइयां भी दूर होंगी और देश नई ऊंचाई पर भी पहुंचेगा: PM @narendramodi
ऐसी संस्थाएं जिनकी एक अंतरराष्ट्रीय उपस्थिति है, वो दूसरे देशों के लोगों तक भारत की सही बात को पहुंचाएं, भारत के बारे में जो अफवाहें फैलाई जा रही हैं, उनकी सच्चाई वहां के लोगों को बताएं, उन्हें जागरूक करें, ये भी हम सबका कर्त्तव्य है: PM @narendramodi
— PMO India (@PMOIndia) January 20, 2022
जब हम आजादी का अमृत महोत्सव मना रहे हैं तो ये भी हमारा दायित्व है कि दुनिया भारत को सही रूप में जाने: PM @narendramodi
— PMO India (@PMOIndia) January 20, 2022
आप सभी इस बात के साक्षी रहे हैं कि भारत की छवि को धूमिल करने के लिए किस तरह अलग-अलग प्रयास चलते रहते हैं।
— PMO India (@PMOIndia) January 20, 2022
इसमें अंतरराष्ट्रीय स्तर पर भी बहुत कुछ चलता रहता है।
इससे हम ये कहकर पल्ला नहीं झाड़ सकते कि ये सिर्फ राजनीति है।
ये राजनीति नहीं है, ये हमारे देश का सवाल है: PM